ನಿನ್ನೆ ಭಾರತದ ಪುರುಷರ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಗೆಲ್ಲುವ ಮೂಲಕ 2025ರ ಚಾಂಪಿಯನ್ ಟ್ರೋಫಿಯ ವಿಜೇತ ತಂಡವಾಗಿ ಹೊರ ಹೊಮ್ಮಿದೆ. ಇದು ದೇಶದ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ, ಸಡಗರಕ್ಕ ಕಾರಣವಾಗಿದೆ. ಹೀಗಾಗಿ ಭಾರತದ ಹಲವು ರಾಜ್ಯಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ನಿನ್ನೆ ರಾತ್ರಿ ರಸ್ತೆಗೆ ಇಳಿದು ಸಂಭ್ರಮಿಸಿದ್ದಾರೆ. ಇದೀಗ ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದು ರಾಜಕೀಯವಾಗಿ ಸುಳ್ಳು ಆರೋಪಕ್ಕೆ ಕೂಡ ಕಾರಣವಾಗಿದೆ.
This is how the Congress govt. in Telangana not allowing India’s #ChampionsTrophy2025 win celebrations.
Shameful! pic.twitter.com/OxIdrfkn90
— G Kishan Reddy (@kishanreddybjp) March 9, 2025
ನಿನ್ನೆ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಲ್ಲಿ ಚಾಂಪಿಯನ್ ಟ್ರೋಫಿ ಗೆಲುವಿನ ಸಂಭ್ರಮ ನಡೆದಿದೆ. ಆದರೆ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ತಲಂಗಾಣದ ಬಿಜೆಪಿ ರಾಜ್ಯಧ್ಯಕ್ಷ ಜಿ. ಕೃಷ್ಣ ರೆಡ್ಡಿ ಎಂಬುವವರು ತೆಲಂಗಾಣದ ಕಾಂಗ್ರೆಸ್ ಸರ್ಕಾರ ಚಾಂಪಿಯನ್ ಟ್ರೋಫಿಯ ಗೆಲುವನ್ನು ಸಂಭ್ರಮಿಸಲು ಬಿಡುತ್ತಿಲ್ಲ ಪೊಲೀಸರನ್ನು ಬಿಟ್ಟು ಸಂಭ್ರಮಕ್ಕೆ ತಡೆಯೊಡ್ಡಿದ್ದಾರೆ ಎಂದು ಪೊಲೀಸರು ಗುಂಪೊಂದನ್ನು ಚದುರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕಾರಣದಿಂದಾಗಿ ವಿಡಿಯೋ ಕೂಡ ವೈರಲ್ ಆಗಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ನಿನ್ನೆ (10 ಮಾರ್ಚ್ 2025) ಬೆಳಗ್ಗಿನ ಜಾವ 1:42 ರ ಸಮಯದಲ್ಲಿ ANI ಸುದ್ದಿ ಸಂಸ್ಥೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ” ಮಹಾರಾಷ್ಟ್ರದಲ್ಲಿ ಚಾಂಪಿಯನ್ ಟ್ರೋಫಿ ವಿಜಯೋತ್ಸವದ ವೇಳೆ ಅನಿಯಂತ್ರಿತವಾಗಿ ಸೇರಿದ್ದ ಜನಸ್ತೋಮವನ್ನು ಚದುರಿಸಿದ್ದಾರೆ ಎಂದು ಬರೆದುಕೊಂಡಿರುವುದ ಕಂಡು ಬಂದಿದೆ.
#WATCH | Maharashtra | Police dispersed the uncontrolled crowd in Nagpur during the team India's victory celebrations. #iccchampionstrophy2025 pic.twitter.com/4sZnkvtSpP
— ANI (@ANI) March 9, 2025
ಇನ್ನು ಇದೇ ವಿಡಿಯೋವನ್ನು ಬಳಸಿಕೊಂಡು ಟೈಮ್ಸ್ ನೌ ಸುದ್ದಿ ಸಂಸ್ಥೆ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿದ್ದು, ಇವುಗಳು ಕೂಡ ” ಭಾರತ ಚಾಂಪಿಯನ್ ಟ್ರೋಫಿ ಗೆದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಜನಸ್ತೋಮ ಮಹಾರಾಷ್ಟ್ರದ ರಸ್ತೆಯಲ್ಲಿ ಕಂಡು ಬಂದಿತು. ಈ ಜನರ ಗುಂಪನ್ನು ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಜನರ ಗುಂಪನ್ನು ಚದುರಿಸಿದ್ದಾರೆ” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಹೀಗಾಗಿ ತೆಲಂಗಾಣದ ಬಿಜೆಪಿ ರಾಜ್ಯಧ್ಯಕ್ಷ ಜಿ. ಕೃಷ್ಣ ರೆಡ್ಡಿ ಅವರ ಎಕ್ಸ್ ಪೋಸ್ಟ್ ರಾಜಕೀಯ ದುರುದ್ದೇಶದಿಂದ ಕೂಡಿದೆ. ಹಾಗೂ ಸುಳ್ಳು ಮಾಹಿತಿಯನ್ನು ಒಳಗೊಂಡಿದೆ ಎಂಬುದು ಖಚಿತವಾಗಿದೆ.
WATCH | Maharashtra | Police dispersed the uncontrolled crowd in Nagpur during the team India's victory celebrations. #iccchampionstrophy2025 pic.twitter.com/QhfhLJOscQ
— TIMES NOW (@TimesNow) March 10, 2025
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ತೆಲಂಗಾಣದ ಬಿಜೆಪಿ ರಾಜ್ಯಾಧ್ಯಕ್ಷ ಜಿ. ಕೃಷ್ಣ ರೆಡ್ಡಿ ಅವರು ಹೇಳಿಕೊಂಡಿರುವಂತೆ ತೆಲಂಗಾಣದ ಕಾಂಗ್ರೆಸ್ ಸರ್ಕಾರ ಭಾರತ ಚಾಂಪಿಯನ್ ಟ್ರೋಫಿ ಗೆದ್ದಿದ್ದನ್ನು ಸಂಭ್ರಮಿಸಲು ಬಿಡಲಿಲ್ಲ ಎಂಬುದು ಸುಳ್ಳಾಗಿದೆ.. ಹಾಗೆಯೇ ತೆಲಂಗಾಣದಲ್ಲಿ ಗೆಲುವನ್ನು ಸಂಭ್ರಮಿಸಿದವರನ್ನು ಪೊಲೀಸರು ಥಳಿಸಿದ್ದಾರೆ ಎಂಬುದು ಕೂಡ ಸುಳ್ಳಾಗಿದೆ. ಈ ಕಾರಣದಿಂದ ಈ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಗಾಜಿಯಾಬಾದ್ನಲ್ಲಿ ಹಿಂದೂ ಕುಟುಂಬದ ಮೇಲೆ ದಾಳಿ ಎಂದು ಸುಳ್ಳು ಕೋಮು ನಿರೂಪಣೆಯೊಂದಿಗೆ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

