ವಿಶ್ವದ ಅತಿ ದೊಡ್ಡ ಧಾರ್ಮಿಕ ಸಭೆ ಎಂದು ಕರೆಯಲ್ಪಡುವ ಮಹಾ ಕುಂಭಮೇಳ 2025 ಪ್ರಸ್ತುತ ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಈ ಮಹಾ ಕಾರ್ಯಕ್ರಮವು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮಕ್ಕೆ ಭಾರತದಾದ್ಯಂತ ಸುಮಾರು 40 ಕೋಟಿ ಭಕ್ತರು 45 ದಿನಗಳ ಕಾಲ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನಲಾಗುತ್ತಿದೆ. ಇದು ಹಿಂದೂಗಳಿಗೆ ಮಹತ್ವದ ಆಧ್ಯಾತ್ಮಿಕ ಆಚರಣೆಯಾಗಿದೆ. ಇದೀಗ ಇದರಲ್ಲೂ ರಾಜಕೀಯದ ಚರ್ಚೆ ಬಹಳ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.
बिना लाल टोपी के आदरणीय अखिलेश यादव पहचान में नहीं आते? और फिर इतना लुक-छिप के कोई संगम स्नान करता हे? कुम्भ एक सामूहिक स्नान हे, उसमे तो सब स्वच्छंद और उन्मुक्त हो कर डुबकी लगाते हे~ इस तरह के लजा-शर्मा के किसी गुमनाम स्थान, पे नहान?😯 pic.twitter.com/VmcTIeQWEP
— vimal yogi tiwari (@yogivimal) January 15, 2025
ಪ್ರಸ್ತುತ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಕುರಿತು ಸುದ್ದಿಯೊಂದು ವೈರಲ್ ಆಗಿದ್ದು, ಅಖಿಲೇಶ್ ಅವರು ರಾತ್ರಿ ವೇಳೆ ಏಕಾಂಗಿಯಾಗಿ ಮಹಾ ಕುಂಭಮೇಳ ನಡೆಯುತ್ತಿರುವ ಜಾಗದಲ್ಲಿ ಪವಿತ್ರ ಸ್ನಾನವನ್ನು ಮಾಡಿದ್ದಾರೆ. ಆ ಮೂಲಕ ಮುಸಲ್ಮಾನರ ವಿರೋಧವನ್ನು ಕಟ್ಟಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಇದೀಗ ಅವರು ಸ್ನಾನ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಹಲವರು ಬರೆದುಕೊಂಡು ಪೋಸ್ಟ್ ಮಾಡುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಪಾಪ ವಿಮೋಚನೆಗಾಗಿ ಕತ್ತಲಲ್ಲಿ ಕುಂಭಮೇಳಕ್ಕೆ ಬಂದಿರಬಹುದು..
ಯಾರೂ ಇಲ್ಲದಿರುವಾಗ ಕಳ್ಳನ ತರ ಕುಂಭಮೇಳಕ್ಕೆ ಬಂದ್ರೆ ಗೊತ್ತಾಗಲ್ಲ ಅಂತ ಅನ್ಕೊಂಡಿದಿಯಾ ಅಖಿಲಂ 🤣🤣🤣 pic.twitter.com/hGyl0RJMHX
— Mallikarjuna N1986 (@Mallika52160729) January 15, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 14 ಜನವರಿ 2025ರಂದು ಅಖಿಲೇಶ್ ಯಾದವ್ ಅವರ ಅಧಿಕೃತ ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾದ ಮೂಲ ಪೋಸ್ಟ್ ಕಂಡುಬಂದಿದ್ದು, ಇದರಲ್ಲಿ “ಮಕರ ಸಂಕ್ರಾಂತಿಯ ಪವಿತ್ರ ಹಬ್ಬದಲ್ಲಿ ಗಂಗಾಮಾತೆಯ ಆಶೀರ್ವಾದವನ್ನು ಪಡೆದುಕೊಂಡೆ” ಎಂಬ ಶೀರ್ಷಿಕೆಯನ್ನು ನೀಡಿ ಅವರು ವೈರಲ್ ಫೋಟೋಗಳನ್ನು ಹಂಚಿಕೊಂಡಿರುವುದು ಕಂಡು ಬಂದಿದೆ.
मकर संक्रांति के पावन पर्व पर लिया माँ गंगा का आशीर्वाद। pic.twitter.com/Rx1ZRHsH7m
— Akhilesh Yadav (@yadavakhilesh) January 14, 2025
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹಲವು ಕೀ ವರ್ಡ್ಗಳನ್ನು ಬಳಸಿ ನಾವು ಹುಡುಕಾಟವನ್ನು ನಡೆಸಿದಾಗ 4 ಜನವರಿ 2025 ರಂದು ಎನ್ಡಿಟಿವಿ ಈ ಕುರಿತು ಅಧಿಕೃತ ವರದಿಯೊಂದನ್ನು ಪ್ರಕಟಿಸಿರುವುದು ಕಂಡು ಬಂದಿದೆ. ಅದರಲ್ಲಿ ಮಕರ ಸಂಕ್ರಾಂತಿಯಂದು ಅಖಿಲೇಶ್ ಯಾದವ್ ಅವರು ಗಂಗಾ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಈ ಕುರಿತು ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಟೈಮ್ಸ್ ಆಫ್ ಇಂಡಿಯಾ ಮತ್ತು ಹಿಂದೂಸ್ತಾನ್ ಟೈಮ್ಸ್ ಸೇರಿದಂತೆ ಹಲವು ಮಾಧ್ಯಮಗಳು ಕೂಡ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಹರಿದ್ವಾರದಲ್ಲಿ ಅಖಿಲೇಶ್ ಯಾದವ್ ಅವರು ಗಂಗಾ ಸ್ನಾನವನ್ನು ಮಾಡಿದ್ದಾರೆ ಎಂಬುದನ್ನು ಉಲ್ಲೇಖಿಸಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್ ಪೋಸ್ಟ್ ಅನ್ನು ದಾರಿ ತಪ್ಪಿಸುವ ಉದ್ದೇಶದಿಂದ ಸೃಷ್ಟಿಸಲಾಗಿದೆ ಎಂಬುದು ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಅಖಿಲೇಶ್ ಯಾದವ್ ಅವರು ರಾತ್ರಿ ವೇಳೆ ಯಾರೂ ಇಲ್ಲದ ಸಮಯದಲ್ಲಿ ಮಹಾಕುಂಭಮೇಳದ ಸ್ಥಳದಲ್ಲಿ ಪುಣ್ಯ ಸ್ನಾನವನ್ನು ಮಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ಫೋಟೋ ಸುಳ್ಳು ನಿರೂಪಣೆಯಿಂದ ಕೂಡಿದೆ. ಮೂಲ ಫೋಟೋ ಅಖಿಲೇಶ್ ಯಾದವ್ ಅವರು ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹರಿದ್ವಾರದಲ್ಲಿ ಗಂಗಾ ಸ್ನಾನ ಮಾಡಿರುವುದಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : FACT CHECK: ಮಕರ ಸಂಕ್ರಾಂತಿಯ ಪ್ರಯುಕ್ತ ಅಮಿತ್ ಶಾ ಗಾಳಿಪಟ ಹಾರಿಸಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

