ಸಾಮಾಜಿಕ ಜಾಲತಾಣಗಳಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಟ್ರೈನ್ನ ಎಂಜಿನ್ನ ಮೇಲೆ ಶ್ರೀ ರಾಮನ ಚಿತ್ರವಿರುವ ಫೋಟೋವೊಂದು ವೈರಲ್ ಆಗಿದೆ. ಈ ಚಿತ್ರವನ್ನು ಶೇರ್ ಮಾಡಿರುವ ಕೆಲವು ಬಳಕೆದಾರರು ಇದು ವಂದೇ ಭಾರತ್ ಟ್ರೈನ್ನ ಹೊಸ ವಿನ್ಯಾಸವೆಂದು ಹೇಳಿಕೊಂಡಿದ್ದಾರೆ. ಫೇಸ್ಬುಕ್ನಲ್ಲಿ ಒಬ್ಬ ಬಳಕೆದಾರರು ಈ ಚಿತ್ರವನ್ನು “ವಂದೇ ಭಾರತ್ ಟ್ರೈನ್ನ ಮೇಲೆ ಶ್ರೀ ರಾಮ ಜಯ ಶ್ರೀ ರಾಮ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾವಿರಾರು ಜನರ ಗಮನ ಸೆಳೆದಿದ್ದು, ಇದು ಭಾರತೀಯ ರೈಲ್ವೆಯ ಒಂದು ಧಾರ್ಮಿಕ ವಿನ್ಯಾಸವಾಗಿದೆ, ಜನರಲ್ಲಿ ಧಾರ್ಮಿಖ ಭಾವನೆಯನ್ನು ಮೂಡಿಸುವ ಉದ್ದೇಶದಿಂದ ಈ ರೀತಿ ವಿನ್ಯಾಸ ಮಾಡಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ..

ಈ ವೈರಲ್ ಚಿತ್ರವು ಜನರಲ್ಲಿ ಭಾರತೀಯ ರೈಲ್ವೆಯು ಶ್ರೀ ರಾಮನ ಚಿತ್ರವನ್ನು ಟ್ರೈನ್ನ ಮೇಲೆ ಅಧಿಕೃತವಾಗಿ ಚಿತ್ರಿಸಿದೆ ಮುಂದಿನ ದಿನಗಳಲ್ಲಿ ಈ ರೀತಿಯಾದ ಟ್ರೈನ್ಗಳನ್ನು ಎಲ್ಲೆಡೆ ನೋಡಬಹುದಾಗಿದೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವನ್ನು ಶೇರ್ ಮಾಡುವವರು ಇದನ್ನು ರಾಷ್ಟ್ರೀಯ ಗೌರವದ ಸಂಕೇತವೆಂದು ಚಿತ್ರಿಸಿದ್ದಾರೆ, ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ನವದೆಹಲಿ.#jaisriram#jaihanuman#BJP pic.twitter.com/yLdQuvTsce
— PublicTimes 24x7TV (@Publictimes24x7) June 2, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವೈರಲ್ ಫೋಟೋವನ್ನು AI ಪತ್ತೆ ಹಚ್ಚುವ ವೆಬ್ಸೈಟ್ ಆದ ಹೈವ್ ಮಾಡರೇಶನ್ನಲ್ಲಿ ಅಪ್ಲೋಡ್ ಮಾಡಿ ಪರಿಶೀಲನೆಗೆ ಒಳ ಪಡಿಸಿದೆವು. ಈ ವೇಳೆ ನಮಗೆ ವೈರಲ್ ಆಗಿರುವ ಫೋಟೋ ಶೇಕಡಾ 96.1 ರಷ್ಟು AI ನಿಂದ ನಿರ್ಮಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಇನ್ನೂ ಮುಂದುವರೆದು ನಾವು ವಾಸ್ ಇಟ್ ಎಐ ಎಂಬ ವೆಬ್ಸೈಟ್ನಲ್ಲಿ ಕೂಡ ವೈರಲ್ ಫೋಟೋವನ್ನು ಅಪ್ಲೋಡ್ ಮಾಡಿದ್ದೆವು ಈ ಇದರಲ್ಲಿ ಕೂಡ ವೈರಲ್ ಫೋಟೋವನ್ನು AI ಬಳಸಿ ನಿರ್ಮಿಸಿರುವ ಸಾಧ್ಯತೆಯೇ ಹೆಚ್ಚದೆ ಎಂದು ಉಲ್ಲೇಖವಾಗಿರುವುದು ಕಂಡು ಬಂದಿದೆ.


ಈ ಬಗ್ಗೆ ಇನ್ನಷ್ಟು ಹೆಚ್ಚಿನ ಹುಡುಕಾಟವನ್ನು ನಡೆಸಲು ನಾವು ಮುಂದಾದೆವು. ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಎಚ್ಚರಿಕೆಯಿಂದ ಪರಿಶೀಲಿಸಿದೆವು. ಇದರಲ್ಲಿ ‘ದಿ ರೈಲ್ ಪೈಲಟ್’ ಎಂದು ಬರೆಯಲಾಗಿದೆ. ನಾವು Google ನಲ್ಲಿ ಇದರ ಬಗ್ಗೆ ಹುಡುಕಿದೆವು. ನಾವು the_rail_pilot ಎಂಬ ಹೆಸರಿನ Instagram ಖಾತೆ ನಮಗೆ ಕಂಡು ಬಂದಿದೆ. ಇದರಲ್ಲಿ 26 ಮೇ 2025 ರಂದು ಈ ವೈರಲ್ ಫೋಟೋವನ್ನು ಅಪ್ಲೊಡ್ ಮಾಡಿರುವುದು ಕಂಡು ಬಂದಿದೆ. ಫೋಟೋದ ಶೀರ್ಷಿಕೆಯ ಜೊತೆ ಈ ಫೋಟೋ ಕುರಿತು ವಿವರಣೆಯನ್ನು ಕೂಡ ನೀಡಿರುವುದು ಕಂಡು ಬಂದಿದೆ. ಇದರಲ್ಲಿ“ಭಗವಾನ್ ರಾಮನಿಗೆ ಸಮರ್ಪಿತವಾದ ಜೀವನವು ಆಶೀರ್ವಾದಗಳಿಂದ ತುಂಬಿದ ಜೀವನ!, “ಜೇ ಶ್ರೀ ರಾಮ್” ಸದಾಚಾರದ ಬೆಳಕು ನಿಮ್ಮ ಹಾದಿಗೆ ಮಾರ್ಗದರ್ಶನ ನೀಡಲಿ! ಭಾರತೀಯ ರೈಲ್ವೆಗಳು ಇಂತಹ ಲೈವರಿ ಮಾಡಿದರೆ ಹೇಗಿರುತ್ತದೆ? ಈ ಚಿತ್ರಗಳನ್ನು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ನೊಂದಿಗೆ ಮಾಡಲಾಗಿದೆ” ಎಂಬುದನ್ನು ಉಲ್ಲೇಖಿಸಿರುವುದು ಕಂಡು ಬಂದಿದೆ.

ಈ ಪುಟದಲ್ಲಿ , ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ರಜನಿಕಾಂತ್ ಮತ್ತು ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋಗಳನ್ನು ಹೊಂದಿರುವ ರೈಲಿನ AI ಚಿತ್ರಗಳನ್ನು ಸಹ ನಾವು ಕಂಡುಕೊಂಡಿದ್ದೇವೆ.

ಇದನ್ನೂ ಓದಿ :Fact Check | ಜವಾಹರಲಾಲ್ ನೆಹರು ಸುಭಾಷ್ ಚಂದ್ರ ಬೋಸ್ರನ್ನು ‘ಯುದ್ಧಾಪರಾಧಿ’ ಎಂದು ಕರೆದಿದ್ದರು ಎಂಬುದು ಸುಳ್ಳು

