ಪ್ರಧಾನಿ ನರೇಂದ್ರ ಮೋದಿಯವರು ಫೋಟಶೂಟ್‌ಗೋಸ್ಕರ ಕುಂಬಾರ ಕೆಲಸ ಮಾಡುವ ಮತ್ತು ಚಮ್ಮಾರಿಕೆ ಕೆಲಸ ಮಾಡುವವರು ಎಂದು ಒಬ್ಬನೇ ವ್ಯಕ್ತಿಯನ್ನು ಎರಡು ಜಾಗಗಳಲ್ಲಿ ಭೇಟಿ ಮಾಡಿದ್ದಾರೆ. ಕೇವಲ ಫೋಟೊಗಾಗಿ ಇಷ್ಟೆಲ್ಲ ನಾಟಕವಾಡುತ್ತಾರೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫ್ಯಾಕ್ಟ್ ಚೆಕ್
ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ, ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 17ರಂದು ತಮ್ಮ ಜನ್ಮದಿನದ ಪ್ರಯುಕ್ತ ದ್ವಾರೆಕೆಯಲ್ಲಿ “ಯಶೋಭೂಮಿ ಸಮಾವೇಶ” ವನ್ನು ಉದ್ಘಾಟಿಸಿ, ಕುಶಲಕರ್ಮಿ ಕಲಾವಿದರ ಅಭಿವೃದ್ಧಿಗಾಗಿ “ಪಿಎಂ ವಿಶ್ವಕರ್ಮ ಯೋಜನೆ”ಯನ್ನು ಘೋಷಿಸಿದರು. ನಂತರ ಕುಂಬಾರ, ಚಮ್ಮಾರ, ಶಿಲ್ಪಿಗಳು ಸೇರಿದಂತೆ ಅನೇಕ ಕುಶಲ ಕರ್ಮಿಗಳನ್ನು ಭೇಟಿಯಾದರು.
ಅದರ ಭಾಗವಾಗಿ ಬೆಳಗಾವಿ ಜಿಲ್ಲೆಯ ಮಚೇಂದ್ರ ಗಂಗಾರಾಮ್ ಕಾಂಬ್ಳೆ ಎಂಬ ಚಮ್ಮಾರರನ್ನು ಹಾಗೂ ಉತ್ತರ ಪ್ರದೇಶದ ಅಜಂಘರ್ ನ ಕುಂಬಾರ ಸುರೇಂದ್ರ ಪ್ರಜಾಪತಿಯವರನ್ನು ಭೇಟಿಯಾಗಿದ್ದಾರೆ. ಅಬರಿಬ್ಬರೂ ಬೇರೆ ಬೇರೆ ಎಂಬುದನ್ನುಈ ಫೋಟೊಗಳಲ್ಲಿ ನೋಡಬಹುದು.
Boom Live ಫ್ಯಾಕ್ಟ್ ಚೆಕ್ ತಂಡ ಸುರೇಂದ್ರ ಪ್ರಜಾಪತಿಯವರನ್ನು ಸಂಪರ್ಕಿಸಿ ಮಾತನಾಡಿಸಿದಾಗ ತಾನು ಕುಂಬಾರ ಕೆಲಸ ಮಾತ್ರ ಮಾಡುವುದಾಗಿ ಮತ್ತು ಪ್ರಧಾನಿ ಮೋದಿಯವರು ತನ್ನನ್ನು ಭೇಟಿಯಾಗಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಕುಂಬಾರ ಮತ್ತು ಚಮ್ಮಾರ ಒಂದೇ ರೀತಿಯ ಬಟ್ಟೆ ತೊಟ್ಟಿದ್ದಾರೆಯರೆ ಹೊರತು ಒಬ್ಬರೇ ಅಲ್ಲ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದಂತೆ ಮೋದಿ ಒಬ್ಬನೇ ವ್ಯಕ್ತಿಯನ್ನು ಭೇಟಿಯಾದ್ದಾರೆ ಎಂಬುದು ಸುಳ್ಳು. ಮೋದಿಯವರು ಕಂಬಾರ ಮತ್ತು ಚಮ್ಮಾರ ಇಬ್ಬರೂ ವ್ಯಕ್ತಿಗಳನ್ನು ಭೇಟಿಯಾಗಿದ್ದಾರೆ.
ಇದನ್ನೂ ಓದಿ: 2030ಕ್ಕೆ ಭಾರತ ಇಸ್ಲಾಂ ದೇಶವಾಗುತ್ತದೆ ಎಂಬುದು ಸಂಪೂರ್ಣ ಸುಳ್ಳು: ಇಲ್ಲಿದೆ ಪೂರ್ಣ ವಿವರ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.