ಮೋದಿಯವರನ್ನು ನೇಪಾಳದ ಸಂಸದರು ಟೀಕಿಸಿದ್ದಾರೆ ಎಂಬುದು ಸುಳ್ಳು

ನೇಪಾಳದ ಸಂಸದರೊಬ್ಬರು ತಮ್ಮ ಸಂಸತ್ತಿನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರ್ಥಿಕ ನೀತಿ, ವಿದೇಶಿ ಪ್ರವಾಸ ಮತ್ತು ನಿರುದ್ಯೋಗದ ಸಮಸ್ಯೆಗಳ ಕುರಿತು ಟೀಕಿಸಿದ್ದಾರೆ ಎಂಬ ವಿಡಿಯೋವೊಂದು ಟ್ವಿಟರ್(X), ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾನಗಲಲ್ಲಿ ಎಲ್ಲಡೆ ವೈರಲ್ ಆಗುತ್ತಿದೆ. 

 

ಫ್ಯಾಕ್ಟ್‌ಚೆಕ್: ಈ ವಿಡಿಯೋ ನೇಪಾಳದ್ದಲ್ಲ. ಬದಲಿಗೆ ಹಿಮಾಚಲ ಪ್ರದೇಶದ ಕಿನ್ನೌರ್ ಶಾಸಕ ಜಗತ್ ಸಿಂಗ್ ನೇಗಿಯವರು ಮಾರ್ಚ್ 15, 2021ರಲ್ಲಿ ನಡೆದ ತಮ್ಮ ರಾಜ್ಯದ ಬಜೆಟ್ ಮಂಡನೆಯ ಕಲಾಪದಲ್ಲಿ ಮಂಡಿಸಿದ ಭಾಷಣವಾಗಿದೆ. ಇದನ್ನು ಮಾರ್ಚ್ 21, 2021ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಹಿಮಾಚಲ ಪ್ರದೇಶದ ಅಧಿಕೃತ ಪುಟದಿಂದ ಹಂಚಿಕೊಳ್ಳಲಾಗಿದೆ. ಈ ಕುರಿತು @logicallyfacts, @Bhoomlive ಮತ್ತು  @altnews ಸೇರಿದಂತೆ ಅನೇಕ ಸುದ್ದಿ ಮಾಧ್ಯಮ ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ಆದ್ದರಿಂದ ವೈರಲ್ ಆಗಿರುವ ವಿಡಿಯೋದಲ್ಲಿರುವವರು ನೇಪಾಳದ ಸಂಸದರಲ್ಲ ಅವರು ಕಿನ್ನೌರ್ ಶಾಸಕ ಜಗತ್ ಸಿಂಗ್ ನೇಗಿಯವರು.


ಇದನ್ನು ಓದಿ: ಮೋದಿಯವರು ಕುಂಬಾರ ಮತ್ತು ಚಮ್ಮಾರ ಎಂದು ಒಬ್ಬನೇ ಕುಶಲ ಕರ್ಮಿಯನ್ನು ಭೇಟಿಯಾಗಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *