ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿದ್ದು ಸಮಾಜದಲ್ಲಿ ಅಶಾಂತಿಗಳಿಗೆ ಮತ್ತು ಗೊಂದಲಗಳಿಗೆ ಕಾರಣವಾಗುತ್ತಿವೆ. ಇವುಗಳ ಬಗ್ಗೆ ಸತ್ಯಾಸತ್ಯತೆಯ ಪರಿಶೀಲನೆ ಮಾಡದೆ ಸಾಕಷ್ಟು ಮಂದಿ ತಮಗೆ ಬಂದ ಸುದ್ದಿಗಳನ್ನು ಇತರರಿಗೆ ಫಾರ್ವರ್ಡ್ ಮಾಡುವ ಮೂಲಕ ಸುಳ್ಳು ಸುದ್ದಿ ಹಬ್ಬಲು ತಾವು ಕೂಡ ಕಾರಣಕರ್ತರಾಗುತ್ತಿದ್ದಾರೆ.
ಈ ಸುದ್ದಿಯನ್ನು ಓದಿದ್ದೀರಾ? ;ಈ ಸೈನಿಕನ ಚಿತ್ರ ಮೆಸಪಟೋಮಿಯಾದಲ್ಲಿ ಸೆರೆ ಹಿಡಿಯಲಾಗಿದೆ
ಇತ್ತೀಚೆಗಿನ ದಿನಮಾನಗಳಲ್ಲಿ ಸುಳ್ಳು ಸುದ್ದಿಗಳು ಸರ್ಕಾರಿ ಸಂಸ್ಥೆಗಳನ್ನು ಕೂಡ ಬಿಡುತ್ತಿಲ್ಲ ಇದಕ್ಕೆ ಉತ್ತಮ ಉದಾಹರಣೆಯೆಂದರೆ ಆರ್‌ಬಿಐ. ಹೌದು.. ಆರ್‌ಬಿಐ ಕುರಿತು ಕಳೆದೊಂದು ದಿನದಿಂದ ಸುಳ್ಳು ಸುದ್ದಿ ಎಂದು ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಅದರಲ್ಲೂ ವಿದೇಶಿ ವಿನಿಮಯ ಪರಿವರ್ತನ ಶುಲ್ಕದ ಕುರಿತು ಹಬ್ಬಿರುವ ಸುದ್ದಿ ಕಾಡ್ಗಿಚ್ಚಿನಂತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಸತ್ಯ ; ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಈ ಸುದ್ದಿ ಹರಡುತ್ತಿದ್ದು, ಈ ಕುರಿತು ಸರ್ಕಾರಕ್ಕೆ ಸಂಬಂಧಿಸಿದ ನಕಲಿ ಸುದ್ದಿ ಹೊರ ಹಾಕುವ PIB ಫ್ಯಾಕ್ಟ್ ಚೆಕ್ ಈ ಸುಳ್ಳನ್ನ ಬೇದಿಸಿದ್ದು, ವಿದೇಶಿ ವಿನಿಮಯಕ್ಕೆ RBI ಪರಿವರ್ತನಾ ಶುಲ್ಕ ವಿಧಿಸುತ್ತಿದೆ, ಮತ್ತು ರಸೀದಿ ನೀಡುತ್ತಿದೆ ಎಂಬುವುದು ಸುಳ್ಳು ಸುದ್ದಿಯಾಗಿದ್ದು, ಆರ್‌ಬಿಐ ಇಂತಹ ಯಾವುದೇ ರಸೀದಿ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.