ಈ ಸೈನಿಕನ ಚಿತ್ರ ಮೆಸಪಟೋಮಿಯಾದಲ್ಲಿ ಸೆರೆ ಹಿಡಿಯಲಾಗಿದೆ

ಇದು ಬ್ರಿಟನ್ನಿನ ಇಂಪೀರಿಯಲ್ ವಾರ್ ಮ್ಯೂಸಿಯಂನಲ್ಲಿ ಇಡಲಾಗಿರುವ ಚಿತ್ರ. ಇದರ ಬಗ್ಗೆ ಎಷ್ಟು ಜನರಿಗೆ ಗೊತ್ತಿರಬಹುದು? ವಿಶ್ವ ಪ್ರಥಮ ಮಹಾಯುದ್ಧದಲ್ಲಿ, ಬ್ರಿಟಿಷರ ಪರವಾಗಿ ಹೋರಾಡುತ್ತಿದ್ದ ಬ್ರಿಟಿಷ್ ಸೈನ್ಯದ ಹಿಂದೂ ಸೈನಿಕನು, ತನಗಾಗಿ ಸೈನ್ಯದಲ್ಲಿ ಕೊಟ್ಟ ಆಹಾರವನ್ನು ತಾನು ಕುಳಿತಿದ್ದ ಕುದುರೆಯ ಮೇಲಿನಿಂದ ಬಾಗಿ, ತನ್ನ ಶತ್ರು ರಾಷ್ಟ್ರವಾದ ಫ್ರಾನ್ಸಿ‌ನ ಹಸಿದ ಮಹಿಳೆಗೆ ನೀಡಿದನು ಎಂಬ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

ಫ್ಯಾಕ್ಟ್‌ಚೆಕ್: ಈ‌ ಚಿತ್ರವನ್ನು 1918 ರಲ್ಲಿ ಮೆಸಪೊಟೋಮಿಯಾದಲ್ಲಿ ಸೆರೆ ಹಿಡಿಯಲಾಗಿದೆ. ಪಂಜಾಬ್ ಮೂಲದ ಭಾರತೀಯ ಸೈನಿಕ‌ ತನ್ನಲ್ಲಿದ್ದ ಕಡಿಮೆ ಆಹಾರದಲ್ಲಿ ಅಲ್ಲಿನ ಸ್ಥಳೀಯ ರೈತ ಮಹಿಳೆಗೆ ತನ್ನ ಕದುರೆಯಿಂದ ಬಾಗಿ ಅರ್ಧ ಆಹಾರವನ್ನ‌‌ ನೀಡಿದ್ದಾನೆ. ಇನ್ನು ಈ‌ ಫೋಟೋವನ್ನು ಬ್ರಿಟೀಷ್ ಇಂಪಿರಿಯಲ್ ವಾರ್ ಮ್ಯೂಸಿಯಮ್‌ನಲ್ಲಿ ಇಟ್ಟಿರುವ ಕುರಿತು ಮತ್ತು ಸೈನಿಕನ ಧರ್ಮದ ಬಗ್ಗೆ ಯಾವುದೇ ಖಚಿತ ವರದಿ ಲಭ್ಯವಿಲ್ಲ.

 


ಇದನ್ನು ಓದಿ: ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *