ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು

“ಸತ್ಯವನ್ನು ಎಷ್ಟು ಮುಚ್ಚಿಟ್ಟರೂ ಅದು ಹೊರಬರುತ್ತದೆ. ಇದು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ನಿಜವಾದ ಛಾಯಾಚಿತ್ರ, ಈ ನಕಲಿ ಗಾಂಧಿ ಕುಟುಂಬವು ವಾಸ್ತವವಾಗಿ ಮೊಹಮ್ಮದ್  ಘಾಜಿಯ ಕುಟುಂಬವಾಗಿದೆ. ಈ ಫೋಟೋವನ್ನು 10 ಜನರಿಗೆ ಕಳುಹಿಸಿ, ದೇಶವನ್ನು ಜಾಗೃತಗೊಳಿಸಿ ಮತ್ತು ಭಾರತವನ್ನು ಪಾಕಿಸ್ತಾನವಾಗಿ ಬದಲಾಗದಂತೆ ರಕ್ಷಿಸಿ.” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಫ್ಯಾಕ್ಟ್‌ಚೆಕ್: ಈ ಚಿತ್ರಗಳು ರಾಜೀವ್ ಮತ್ತು ಸೋನಿಯಾರವರ ವಿವಾಹೋತ್ಸವ ಸಂದರ್ಭದಲ್ಲಿ ನಡೆದ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮದಾಗಿದೆ. ಇಂಡಿಯನ್ ಕಲ್ಚರ್ ಸಂಸ್ಥೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಈ ಚಿತ್ರಗಳನ್ನು ನಾವು ನೋಡಬಹುದು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ತಮ್ಮ ಪತ್ನಿ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಿಂತಿರುವ ಭಾವಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು thequint.in ಸಹ ವರದಿ ಮಾಡಿದೆ.

ರಾಜೀವ್ ಗಾಂಧಿ ಮತ್ತು ಸೋನಿಯಾರವರು ಫೆಬ್ರವರಿ 1968ರಲ್ಲಿ ಹಿಂದು ಸಂಪ್ರದಾಯದಂತೆ ಮದುವೆಯಾದರು. ಅಲ್ಲದೆ, ವಿವಾಹದ ಸಂದರ್ಭದಲ್ಲಿ ತೆಗೆದಿರುವ ಪ್ರಥಮ ಭಾವಚಿತ್ರದಲ್ಲಿ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಇಬ್ಬರೂ ಹೂಮಾಲೆ ಧರಿಸಿರುವುದನ್ನು ಕಾಣಬಹುದಾಗಿದೆ.

ಅವರು ಮುಸ್ಲಿಂ ಸಂಪ್ರದಾಯದಂತೆ ಮದುವೆಯಾದರು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ರಾಜೀವ್ ಗಾಂಧಿ ಮುಸ್ಲಿಂ ಶೈಲಿಯಲ್ಲಿ ಮದುವೆಯಾದರು ಮತ್ತು ಅವರು ಮಹಮ್ಮದ್ ಘಾಜಿ ಕುಟುಂಬದವರು ಎಂಬ ಎರಡು ಹೇಳಿಕೆಗಳೂ ಸುಳ್ಳು.


ಇದನ್ನು ಓದಿ: ಲವ್ ಜಿಹಾದ್ ಎಂಬುದು ಕಟ್ಟು ಕಥೆ: ಬೆಂಗಳೂರು ಪೊಲೀಸರ ವಿಚಾರಣೆಯಲ್ಲಿ ಬಹಿರಂಗ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *