”ನಾನು ಅಪಾಯದಲ್ಲಿದ್ದೇನೆ. ನನ್ನ ಮೇಲೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆದಿದೆ. ಅತ್ಯಾಚಾರವಾಗಿದೆ. ನಾನು ಲವ್ ಜಿಹಾದ್‌ಗೆ ಒಳಗಾಗಿದ್ದೇನೆ. ಹಾಗಾಗಿ, ಬೆಂಗಳೂರು ನಗರ ಪೊಲೀಸರು ದಯವಿಟ್ಟು ನನ್ನ ಸಹಾಯಕ್ಕೆ ಬನ್ನಿ” ಎಂದು 37 ವರ್ಷದ ಮಹಿಳೆಯೊಬ್ಬರು ಟ್ವೀಟ್ ಮೂಲಕ ಪೊಲೀಸರ ಸಹಾಯ ಕೇಳಿದ್ದರು. ಗುಪ್ತಾ ಭರತ್ ಎಂಬ ಟ್ವಿಟರ್ ಅಕೌಂಟ್‌ನಿಂದ ಸೆ. 7ರಂದು ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗಿತ್ತು. “ತುರ್ತಾಗಿ ನನಗೆ ಬೆಂಗಳೂರು ಪೊಲೀಸರ ಸಹಾಯ ಬೇಕಿದೆ. ನನ್ನ ಜೀವ ಅಪಾಯದಲ್ಲಿದೆ” ಎಂದು ಯುವತಿ ಟ್ವೀಟ್ ಮಾಡಿದ್ದರು.
ಅಶ್ರಫ್ ಬೇಗ್ ಎಂಬ ಕಾಶ್ಮೀರದ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಮತಾಂತರಕ್ಕೆ ಯತ್ನಿಸಿ ಮೋಸವೆಸಗಿದ್ದಾನೆ ಎಂದು ಅನೇಕ ಮಾಧ್ಯಮಗಳು “ಲವ್ ಜಿಹಾದ್” ವರದಿ ಮಾಡಿದ್ದವು.
ಫ್ಯಾಕ್ಟ್‌ಚೆಕ್:
ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಆಶ್ರಫ್ ಮತ್ತು ಯುವತಿ 2018 ರಿಂದ ಪರಸ್ಪರ ಪ್ರೀತಿಸಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಎರಡು ವರ್ಷದ ಹಿಂದೆ ಸಂಬಂಧ ಮುರಿದುಬಿದ್ದಿತ್ತು. ಆನಂತರ ಪುಣೆಗೆ ತೆರಳಿದ್ದ ಅಶ್ರಫ್ ಇತ್ತೀಚೆಗೆ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಗ ಬೆಂಗಳೂರು ಯುವತಿ ತನ್ನ ಮೇಲೆ ರೇಪ್ ಮತ್ತು ಲೈಂಗಿಕ ಕಿರುಕುಳ ನಡೆಸಲಾಗಿದೆ ಮತ್ತು ತಾನು ಲವ್ ಜಿಹಾದ್‌ಗೆ ಬಲಿಯಾಗಿದ್ದೇನೆ ಎಂದು ದೂರು ನೀಡಿದ್ದರು. ವಿಚಾರಣೆ ನಡೆಸಿದ ಹೆಬ್ಬಗೋಡಿ ಪೊಲೀಸರು ಯಾವುದೇ ಲವ್ ಜಿಹಾದ್ ಆಯಾಮವಿಲ್ಲ, ಹುಡುಗಿ ಹಣಕ್ಕಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: ಶೃಂಗೇರಿ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದಿಸಲು ನಿರಾಕರಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.