ಇತ್ತೀಚೆಗೆ ತಮಿಳುನಾಡಿನ ದ್ರಾವಿಡ ಚಳುವಳಿಯ ಹರಿಕಾರ ಮತ್ತು “ತಮಿಳು ಸ್ವಾಭಿಮಾನ ಚಳುವಳಿ”ಯ ನಾಯಕರಾದ ಇ.ವಿ. ರಾಮಸ್ವಾಮಿ ನಾಯ್ಕರ್ ಅಥವಾ ತಂತೈ ಪೆರಿಯಾರ್ ತಮ್ಮ ಸ್ವಂತ ಮಗಳನ್ನೇ ಮದುವೆಯಾಗಿದ್ದರು ಎಂಬ ಸುದ್ಧಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಉತ್ತರ ಭಾರತದಲ್ಲಿ ಈ ವದಂತಿ ಹೆಚ್ಚಾಗಿ ಹಬ್ಬುತ್ತಿದ್ದು, ಪೆರಿಯಾರ್ ರವರನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ.
ಆದರೆ ಜಸ್ಟೀಸ್ ಪಾರ್ಟಿಯ ಸ್ಥಾಪಕರಾದ ಕನಗಸಬಾಯಿ ಮುದಲಿಯಾರ್‌ರವರ ಮಗಳಾದ ಮಣಿಯಮ್ಮೈರವರನ್ನು ಪೆರಿಯಾರ್‌ರವರು ತಮ್ಮ 70 ವಯಸ್ಸಿನಲ್ಲಿ ಮದುವೆಯಾದರು. ಪೆರಿಯಾರ್‌ರವರ ಪ್ರಬಲ ಅನುಯಾಯಿಯಾಗಿ, ಆಪ್ತ ಸಹಾಯಕಿಯಾಗಿ ಕೆಲಸ ಮಾಡಿದ್ದ ಮಣಿಯಮ್ಮೈ ಪೆರಿಯಾರ್ ಮರಣದ ನಂತರ ಅವರ ರಾಜಕೀಯ ಚಳುವಳಿಯ (ದ್ರಾವಿಡ ಮುನ್ನೇತ್ರ ಕಳಗಂ) ವಾರಸುದಾರರಾದರು.
ಪೆರಿಯಾರ್ ಮತ್ತು ಮಣಿಯಮ್ಮೈರವರ ಮದುವೆ ಕುರಿತು ಹರಡುತ್ತಿರುವ ಸುಳ್ಳು ವದಂತಿಗಳಿಗೆ ಸ್ಪಷ್ಟನೆ ನೀಡಲು ಫೇಮಿನಿಸಮ್ ಇನ್ ಇಂಡಿಯಾ(FII) ಧೀರ್ಘವಾದ ಲೇಖನವೊಂದು ಪ್ರಕಟಿಸಿದೆ. ಹಾಗಾಗಿ ಪೆರಿಯಾರ್ ಸ್ವಂತ ಮಗಳನ್ನು ಮದುವೆಯಾಗಿದ್ದರು ಎಂಬುದು ಸುಳ್ಳು.
ಪೆರಿಯಾರ್‌ರವರ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಇದನ್ನು ಓದಿ: ಇಂದು ಪೆರಿಯಾರ್ ರಾಮಸ್ವಾಮಿ ಜನ್ಮದಿನ
ಇದನ್ನು ಓದಿ: ಕಾಂಗ್ರೆಸ್ ರಾಮಮಂದಿರದ ವಿರುದ್ದ 24 ವಕೀಲರನ್ನು ನೇಮಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.