“ಕಾಂಗ್ರೆಸ್ ಕಾರ್ಯಕರ್ತರು ಓಟು ಕೇಳಲು ಬಂದಾಗ ರಾಮಮಂದಿರದ ವಿರುದ್ಧ 24 ವಕೀಲರನ್ನು ನೇಮಿಸಿದ್ದು ಏಕೆ ಎಂದು ಪ್ರಶ್ನಿಸಿ” ಎಂದು ಬಾಲಿಹುಡ್‌ನ ಖ್ಯಾತ ನಟ ನಾನಾ ಪಾಟೇಕರ್ ಹೇಳಿದ್ದಾರೆ ಎನ್ನಲಾದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫ್ಯಾಕ್ಟ್ ಚೆಕ್:
ಅಸಲಿ ವಿಷಯ ಏನೆಂದರೆ ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ ಜಾಗ ನಮಗೆ ಸೇರಬೇಕೆಂದು ನಿರ್ಮೋಹಿ ಅಖಾಡ, ಸುನ್ನಿ ವಕ್ಫ್ ಮಂಡಳಿ ಮತ್ತು ರಾಮ್ ಲಲ್ಲಾ ವಾರಸುದಾರರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತೇ ವಿನಃ ಕಾಂಗ್ರೆಸ್ ಅಲ್ಲ. ವಾಸ್ತವದಲ್ಲಿ 1986ರಲ್ಲಿ ಮುಚ್ಚಲ್ಪಟ್ಟಿದ್ದ ಬಾಬರಿ ಮಸೀದಿಯ ಬಾಗಿಲು ತೆರೆದು ಹಿಂದುಗಳಿಗೆ ಪೂಜೆಗೆ ಅವಕಾಶ ಕೊಟ್ಟಿದ್ದು ರಾಜೀವ್ ಗಾಂಧಿಯವರು. ಇನ್ನು ಕಾಂಗ್ರೆಸ್ ರಾಮಮಂದಿರದ ವಿರುದ್ಧ ವಾದ ಮಾಡಲು 24 ವಕೀಲರನ್ನು ನೇಮಿಸಿತ್ತು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಜೊತೆಗೆ ನಾನಾ ಪಾಟೇಕರ್ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಶ್ನಿಸಿ ಎಂದು ಕರೆ ಕೊಟ್ಟಿರುವುದನ್ನು ಯಾವ ಮಾಧ್ಯಮಗಳು ವರದಿ ಮಾಡಿಲ್ಲ. ಅವರ ಸಾಮಾಜಿಕ ಜಾಲತಾಣಗಳಲ್ಲಿಯೂ ಆ ಕುರಿತು ಮಾಹಿತಿ ಇಲ್ಲ. ಆದರೆ ಬಿಜೆಪಿ ಕಾರ್ಯಕರ್ತನೊಬ್ಬ ಕಾಂಗ್ರೆಸ್ ರಾಮಮಂದಿರದ ವಿರುದ್ಧ ವಾದ ಮಾಡಲು 24 ವಕೀಲರನ್ನು ನೇಮಿಸಿತ್ತು ಎಂಬ ಕಲ್ಪಿತ ಸುಳ್ಳು ಹೇಳಿರುವ ವಿಡಿಯೋ ಫೇಸ್‌ಬುಕ್‌ನಲ್ಲಿದೆ. ಅದನ್ನೇ ತೆಗೆದು ಪೋಸ್ಟರ್ ಮಾಡಿ ನಾನಾ ಪಾಟೇಕರ್ ಹೀಗೆ ಹೇಳಿದ್ದಾರೆ ಎಂದು ಸುಳ್ಳು ಹರಡಲಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.
ಇದನ್ನು ಓದಿ: ಮಹಿಳಾ ಮೀಸಲಾತಿ ಮತದಾನದ ವೇಳೆ ಸೋನಿಯಾ – ರಾಹುಲ್ ಗೈರು ಎಂಬುದು ಸುಳ್ಳು