ಲೋಕಸಭಾ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮತದಾನದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ ಹಾಕದೇ ಗೈರು ಹಾಜರಾಗಿದ್ದರು ಎಂದು ಪ್ರತಿಪಾದಿಸಿ ಹಲವು ಮಾಧ್ಯಮಗಳು ವರದಿ ಮಾಡಿವೆ.
ಫ್ಯಾಕ್ಟ್ ಚೆಕ್
ಸತ್ಯ ಏನೆಂದರೆ ಮಹಿಳಾ ಮೀಸಲಾತಿ ಅಂಗೀಕಾರದ ವೇಳೆ ಮತದಾನದಲ್ಲಿ ಸೋನಿಯಾ-ರಾಹುಲ್ ಇಬ್ಬರು ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಆನಂತರದ ಚರ್ಚೆಗಳಲ್ಲಿಯೂ ಭಾಗವಹಿಸಿರುವುದನ್ನು ಹಲವು ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ಈ ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಆದರೆ ಸದನದಲ್ಲಿ ಮಹಿಳಾ ಮೀಸಲಾತಿಯ ಪ್ರಸ್ತಾವನೆ ಸಲ್ಲಿಸುವ ಸಂದರ್ಭದಲ್ಲಿ ಅವರಿಬ್ಬರು ಹಾಜರಿರಲಿಲ್ಲ ಅಷ್ಟೇ. ಅವರ ಅನುಪಸ್ಥಿತಿಯನ್ನು ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದನ್ನೇ ಆಧಾರವಾಗಿಟ್ಟುಕೊಂಡು ಅವರು ಗೈರಾಗಿದ್ದರು ಎಂದು ಮಾಧ್ಯಮಗಳು ಸುಳ್ಳು ವರದಿ ಮಾಡಿವೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.