ಆಲೂಗೆಡ್ಡೆಯಿಂದ ಚಿನ್ನ ತೆಗೆಯಬಹುದೆಂಬ ಹೇಳಿಕೆ ರಾಹುಲ್ ಗಾಂಧಿಯವರದ್ದಲ್ಲ

ಚಿನ್ನ

ನಾನೊಂದು ಮೆಷಿನ್‌ ಸ್ಥಾಪಿಸುತ್ತೇನೆ. ಈ ಕಡೆ ಆಲೂಗೆಡ್ಡೆ ಹಾಕಿದರೆ ಆ ಕಡೆ ಚಿನ್ನ ಬರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ 20 ಸೆಕೆಂಡ್‌ಗಳ ವಿಡಿಯೋವೊಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್ ಚೆಕ್:

ವಾಸ್ತವ ಏನೆಂದರೆ 2017ರ ಗುಜರಾತ್ ಚುನಾವಣೆಗೆ ಮುಂಚೆ ಪಠಾಣ್ ಎಂಬಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದಿಂದ ಈ 20 ಸೆಕೆಂಡ್‌ಗಳ ಕ್ಲಿಪ್ ಅನ್ನು ಕಟ್ ಮಾಡಿ ತೆಗೆದುಕೊಳ್ಳಲಾಗಿದೆ. ಪೂರ್ಣ ಭಾಷಣದಲ್ಲಿ “ಮೋದಿಯವರು ಗುಜರಾತಿನ ರೈತರಿಗೆ ಹಲವು ಭರವಸೆಗಳನ್ನು ಕೊಟ್ಟಿದ್ದರು, ಆದರೆ ಯಾವುದನ್ನು ಈಡೇರಿಸಿಲ್ಲ. ನಾನೊಂದು ಮೆಷಿನ್‌ ಸ್ಥಾಪಿಸುತ್ತೇನೆ. ಈ ಕಡೆ ಆಲೂಗೆಡ್ಡೆ ಹಾಕಿದರೆ ಆ ಕಡೆ ಚಿನ್ನ ಬರುತ್ತದೆ ಎಂದು ಮೋದಿ ಹೇಳಿದ್ದರು. ಇವು ನನ್ನ ಮಾತುಗಳಲ್ಲ, ಮೋದಿಯವರು ಮಾತುಗಳು” ಎಂದು ಟೀಕಿಸಿದ್ದರು. ಆದರೆ ವಿಡಿಯೋವನ್ನು 20 ಸೆಕೆಂಡ್ ಮಾತ್ರ ಕಟ್ ಮಾಡಿ ರಾಹುಲ್ ಗಾಂಧಿ ಹೇಳಿಕೆಯಂತೆ ಸುಳ್ಳು ಹರಡಲಾಗಿದೆ. ಆದರೆ ರಾಹುಲ್ ಗಾಂಧಿಯವರು ಮೋದಿಯವರನ್ನು ಟೀಕಿಸಿದ್ದಾರೆಯೇ ಹೊರತು ಅಂತಹ ಆಲೂಗೆಡ್ಡೆ ಯಂತ್ರ ತಾನು ಸ್ಥಾಪಿಸುತ್ಥೇನೆ ಎಂದು ಹೇಳಿಲ್ಲ.

ಇದನ್ನು ಓದಿ: ಕಾಂಗ್ರೆಸ್ ರಾಮಮಂದಿರದ ವಿರುದ್ದ 24 ವಕೀಲರನ್ನು ನೇಮಿಸಿದೆ ಎಂಬುದು ಸುಳ್ಳು

ಇನ್ನು ಮೋದಿಯವರು ಸಹ ನನ್ನ ಪಕ್ಷವಾಗಲೀ ಅಥವಾ ನಾನಾಗಲಿ ಆಲೂಗಡ್ಡೆಯಿಂದ ಚಿನ್ನವನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 2019ರಲ್ಲಿ ಉತ್ತರ ಪ್ರದೇಶದ ಕನೌಜ್‌ನಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಆಲೂಗಡ್ಡೆಯಿಂದ ಚಿನ್ನ ಮಾಡುವುದಾಗಿ ಹೇಳಿಕೊಳ್ಳುವ ಕೆಲವರಂತೆ ನಾವು ಭರವಸೆ ನೀಡುವುದಿಲ್ಲ ಎಂದಿದ್ದಾರೆ. ಅದನ್ನು ಎಡಿಟ್ ಮಾಡಿ ಆಲೂಗೆಡ್ಡೆಯಿಂದ ಚಿನ್ನ ಮಾಡಬಹುದು ಎಂದು ತಿರುಚಲಾಗಿದೆ. ಹಾಗಾಗಿ ಅದು ಎಡಿಟೆಡ್ ವಿಡಿಯೋ ಆಗಿದೆ. ವಾಸ್ತವದಲ್ಲಿ ರಾಹುಲ್ ಗಾಂಧಿಯಾಗಲಿ, ಮೋದಿಯಾಗಲಿ ಅಂತಹ ಹೇಳಿಕೆ ನೀಡಿಲ್ಲ.

ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ:


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *