ಬಸ್ ಮೇಲಿನ ದಾಳಿಯ ಈ ಹಳೆಯ ವಿಡಿಯೋ ಗುಜರಾತ್‌ನದು, ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ

ಕರ್ನಾಟಕ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸಿದೆ. ಬಸ್ ಡ್ರೈವರ್ ಮುಸ್ಲಿಂ ಮಹಿಳೆಗೆ ಬಸ್ ನಿಲ್ಲಿಸದ ಕಾರಣ ಸರ್ಕಾರಿ ಬಸ್ಸಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್ ಚೆಕ್

ಈ ಕುರಿತು ಹುಡುಕಿದಾಗ ಅದೇ ವಿಡಿಯೋ 2019ರಲ್ಲಿಯೇ ಇಂಟರ್‌ನೆಟ್‌ಗೆ ಅಪ್ಲೋಡ್ ಆಗಿರುವುದು ಕಂಡುಬಂದಿದೆ. ಜುಲೈ 2019ರ ವಿಡಿಯೋ ಗುಜರಾತ್‌ನ ಸೂರತ್‌ಗೆ ಸಂಬಂಧಿಸಿದ್ದಾಗಿದೆ. ದಿವ್ಯ ನ್ಯೂಸ್ ಚಾನೆಲ್ ಎಂಬ ಯೂಟ್ಯೂಬ್ ಚಾನೆಲ್‌ನ ವಿಡಿಯೋ ವರದಿಯ ಪ್ರಕಾರ ಗುಜರಾತ್‌ ರಾಜ್ಯದ ಸೂರತ್ ನ ನಾನ್ಪುರದಲ್ಲಿ ಜುಲೈ 5, 2019 ರಂದು ಮಾಬ್ ಲಿಂಚಿಂಗ್‌ ವಿರೋಧಿಸಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪೊಲೀಸರು ಮೆರವಣಿಗೆ ತಡೆದರು. ಆಗ ಪೋಲಿಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಬಸ್‌ಗೆ (GJ-05, BZ 0915 ಸೂರತ್‌ನಲ್ಲಿ ನೋಂದಣಿಯಾಗಿದೆ) ಕಲ್ಲು ತೂರಲಾಗಿದೆ.

ವಾಹನದ ಮಾಹಿತಿ

ಟಿವಿ9 ಗುಜರಾತಿ ಮತ್ತು ಎಬಿಪಿ ಅಸ್ಮಿತ ಚಾನೆಲ್‌ಗಳನ್ನು ಇದನ್ನೇ ವರದಿ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇಂಡಿಯನ್ ಎಕ್ಸ್‌ಪ್ರೆಸ್ ಈ ಕುರಿತು ವಿವರವಾದ ವರದಿ ಮಾಡಿದೆ. ಸೂರತ್ ಪೊಲೀಸರು ಸಹ ಈ ರೀತಿಯ ಘಟನೆ ನಡೆದಿದೆ, ಹಲವರನ್ನು ವಶಕ್ಕೆ ಪಡೆದಿದ್ದೆವು ಎಂದು ಮಾಹಿತಿ ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಇದು ಗುಜರಾತ್‌ನ ಸೂರತ್‌ನಲ್ಲಿ 2019ರಲ್ಲಿ ನಡೆದ ಘಟನೆಯಾಗಿದೆ. ಈ ಘಟನೆಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ.


ಇದನ್ನೂ ಓದಿ; ಆಲೂಗೆಡ್ಡೆಯಿಂದ ಚಿನ್ನ ತೆಗೆಯಬಹುದೆಂಬ ಹೇಳಿಕೆ ರಾಹುಲ್ ಗಾಂಧಿಯವರದ್ದಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *