ಯುವತಿಯ ಕೊಲೆ ಮಾಡಿದ UP ಮುಸ್ಲಿಂ ಯುವಕರಿಗೆ ಯೋಗಿಯ ಶಿಕ್ಷೆ ಎಂಬುದು ಸುಳ್ಳು

ಉತ್ತರ ಪ್ರದೇಶದಲ್ಲಿ ಹುಡುಗಿಯ ದುಪ್ಪಟ ಹಿಡಿದು ಬೈಕಿನಲ್ಲಿ ಎಳೆದುಕೊಂಡು ಹೋಗಿ ಹುಡುಗಿಯ ಸಾವಿಗೆ ಕಾರಣರಾದ ಮೂವರು ಇಸ್ಲಾಂ ಜಿಹಾದಿಗಳಿಗೆ ಯೋಗಿ ಸರ್ಕಾರ ನೀಡಿರುವ ಬಹುಮಾನ! ಎಂದು ಹಲ್ಲೆಗೊಳಗಾದ ಆರೋಪಿಗಳು ತೆವಳುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್:

ಸತ್ಯವೇನೆಂದರೆ ಇದು ರಾಜಸ್ಥಾನದಲ್ಲಿ ನಡೆದ ಘಟನೆಯಾಗಿದ್ದು ಉತ್ತರ ಪ್ರದೇಶದ್ದಲ್ಲ. ಶಿಕ್ಷೆಗೊಳಗಾಗಿ ತೆವಳುತ್ತಿರುವವರು ಕೊಲೆ ಪ್ರಕರಣದ ಆರೋಪಿಗಳಾದ ತೇಜ್ವೀರ್, ಯುವರಾಜ್ ಮತ್ತು ಬಂಟಿ ಕುಶಾಲ್. ಇವರ ಹೆಸರುಗಳನ್ನು ಅರ್ಬಾಜ್, ಫೈಸಲ್ ಮತ್ತು ಶಹಬಾಜ್ ಎಂದು ತಪ್ಪಾಗಿ ತಿರುಚಲಾಗಿದೆ. ಇದನ್ನು ಬೂಮ್ ಲೈವ್ ನವರು ಫ್ಯಾಕ್ಟ್‌ಚೆಕ್ ವರದಿ ಮಾಡಿದ್ದಾರೆ. ಆಲ್ಟ್ ನ್ಯೂಸ್ ವರದಿಗಾರ ಮೊಹಮ್ಮದ್ ಜುಬೈರ್ ತಮ್ಮ ಟ್ವಿಟರ್(X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮತ್ತು ರಾಜಸ್ತಾನದ ಜೈಪುರ್‌ನ IPS ಅಧಿಕಾರಿ ರಾಹುಲ್ ಕುಮಾರ್ ಸಹ ಕೊಲೆ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಇದು ಉತ್ತರ ಪ್ರದೇಶದ ಪ್ರಕರಣವಾಗಿರದೆ ರಾಜಸ್ಥಾನದಾಗಿದೆ ಮತ್ತು ಆರೋಪಿ ಹುಡುಗರು ಹಿಂದುಗಳೇ ಹೊರತು ಮುಸ್ಲಿಂ ಯುವಕರಲ್ಲ.

 


ಇದನ್ನು ಓದಿ: ಮಲ್ಲಿಕಾರ್ಜುನ್ ಖರ್ಗೆ 50 ಸಾವಿರ ಕೋಟಿ ಆಕ್ರಮ ಆಸ್ತಿ ಹೊಂದಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *