ಮಲ್ಲಿಕಾರ್ಜುನ್ ಖರ್ಗೆ 50 ಸಾವಿರ ಕೋಟಿ ಆಕ್ರಮ ಆಸ್ತಿ ಹೊಂದಿದ್ದಾರೆ ಎಂಬುದು ಸುಳ್ಳು

ಸಂಸತ್ತಿನಲ್ಲಿ ಮೋದಿಜಿಯವರು ಖರ್ಗೆಯವರ ಆಸ್ತಿ ವಿವರಗಳನ್ನು ಬಯಲು ಮಾಡಿದ್ದಾರೆ ಎಂಬ ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ಖರ್ಗೆಯವರು ಸಂಸತ್ತಿನಲ್ಲಿ ದಲಿತರಿಗೆ ಕನಿಷ್ಠ ಒಂದು ಪ್ರತಿಶತ ಭೂಮಿಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದರು. ಆಗ ಪ್ರತಿಯಾಗಿ ಮೋದಿಯವರು ನೀವೇ ದಲಿತರಲ್ಲವೇ? ನಿಮ್ಮ ಆಸ್ತಿ ವಿವರಗಳನ್ನು ನಾನು ಹೇಳಲೆ ಎಂದು “ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ 500 ಕೋಟಿ ರೂಪಾಯಿ ವೆಚ್ಚದ ವಾಣಿಜ್ಯ ಸಂಕೀರ್ಣ, ಚಿಕ್ಕಮಗಳೂರಿನಲ್ಲಿ 300 ಎಕರೆ ಕಾಫಿ ಎಸ್ಟೇಟ್, ಕೆಂಗೇರಿಯಲ್ಲಿ 40 ಕೋಟಿಯ ಫಾರ್ಮ್ ಹೌಸ್! ರಾಮಯ್ಯ ಕಾಲೇಜಿನಲ್ಲಿ 25 ಕೋಟಿ ಮೌಲ್ಯದ ಕಟ್ಟಡ! ಹೀಗೆ ದಾಖಲೆ ಬಿಚ್ಚಿಟ್ಟರು ಎಂದು ಹಂಚಿಕೊಳ್ಳಲಾಗುತ್ತಿದೆ. ಮತ್ತು ಖರ್ಗೆಯವರು 50 ಸಾವಿರ ಕೋಟಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

 

ಫ್ಯಾಕ್ಟ್‌ಚೆಕ್:

ಆದರೆ ವಾಸ್ತವ ಏನೆಂದರೆ ಈ ಸಂದೇಶ ಸಂಪೂರ್ಣ ಸುಳ್ಳಾಗಿದ್ದು, ಪ್ರಧಾನಿ ಮೋದಿಯವರು ಸದನದಲ್ಲಿ ಇಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಈ ಕುರಿತು ಯಾವುದೇ ಮಾಧ್ಯಮಗಳು ವರದಿ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ 50 ಸಾವಿರ ಕೋಟಿ ಅಕ್ರಮ ಆಸ್ತಿ ಆರೋಪ, ಲೋಕಯುಕ್ತಕ್ಕೆ ದೂರು ಎಂದು ಸುವರ್ಣ ನ್ಯೂಸ್ ವರದಿ ಸಹ ಸುಳ್ಳಾಗಿದ್ದು. ಅಸಲಿಗೆ ಚುನಾವಣಾ ಆಯೋಗದ ಅಧಿಕೃತ ದಾಖಲೆಯಂತೆ ಮಲ್ಲಿಕಾರ್ಜುನ ಖರ್ಗೆಯವರ ಒಟ್ಟು ಆಸ್ತಿ ಮೊತ್ತ 15 ಕೋಟಿ ರೂ ಮಾತ್ರ.

ಆದರೂ ಮಲ್ಲಿಕಾರ್ಜುನ ಖರ್ಗೆಯವರ ತೇಜೋವಧೆ ಮಾಡಲು, ಅವರ ವರ್ಚಸ್ಸಿಗೆ ಧಕ್ಕೆ ತರಲು ಅವರ ವಿರೋಧಿಗಳು ಕೂತಲ್ಲಿಯೇ ಸೃಷ್ಟಿಸಿದ ಸುಳ್ಳು ಸುದ್ದಿ ಇದಾಗಿದೆ. ಯಾವ ದಾಖಲೆಯೂ ಇಲ್ಲದೆ ಹರಡುತ್ತಿರುವ ಇಂತಹ ಸುಳ್ಳು ಸುದ್ಧಿಯನ್ನು ನಂಬಬೇಡಿ.

ಮಲ್ಲಿಕಾರ್ಜುನ್ ಖರ್ಗೆಯವರ ಸಂಪೂರ್ಣ ಆಸ್ತಿ ವಿವರ ತಿಳಿಯಲು ಈ ಲೇಖನ ಓದಿ: ಮಲ್ಲಿಕಾರ್ಜುನ ಖರ್ಗೆ ಆಸ್ತಿ ವಿವರ: ಖರ್ಗೆ ಬಳಿ ಕಾರಿಲ್ಲ!


ಇದನ್ನು ಓದಿ: ಬಸ್ ಮೇಲಿನ ದಾಳಿಯ ಈ ಹಳೆಯ ವಿಡಿಯೋ ಗುಜರಾತ್‌ನದು, ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *