ಫ್ಯಾಕ್ಟ್‌ಚೆಕ್: ದಿಢೀರ್‌ ಖ್ಯಾತಿ ಗಳಿಸಲು ಬೆನ್ನಿನ ಮೇಲೆ PFI ಎಂದು ಬರೆಸಿಕೊಂಡು ಹಲ್ಲೆ ನಾಟಕವಾಡಿದ ಸೈನಿಕ

ಕೇರಳದ ಕೊಲ್ಲಂನಲ್ಲಿ 6 ಜನ ಅಪರಿಚಿತರು ಸೈನಿಕ ಶೈನ್ ಕುಮಾರ್ ಮೇಲೆ ಹಲ್ಲೆ ನಡೆಸಿ, ಅವರ ಕೈಕಾಲು ಕಟ್ಟಿ, ಬೆನ್ನಿನ ಮೇಲೆ PFI ಎಂದು ಬರೆದು ಕ್ರೌರ್ಯ ಎಸಗಿದ್ದಾರೆ ಎಂಬ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ. ಬಿಜೆಪಿ ಮುಖಂಡರು ಈ ಫೋಟೊ ಹಂಚಿಕೊಂಡು ಸೈನಿಕರಿಗೇ ಈ ರಾಜ್ಯದಲ್ಲಿ ರಕ್ಷಣೆಯಿಲ್ಲ ಎಂದು ಆಡಳಿತರೂಢ ಸಿಪಿಎಂ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.‌

ANI ಸೇರಿದಂತೆ ಹಲವಾರು ಮಾಧ್ಯಮಗಳು ಅದನ್ನೇ ವರದಿ ಮಾಡಿವೆ. ಕನ್ನಡದ ಫೇಕ್‌ನ್ಯೂಸ್‌ ಪೇಜ್‌ ಪೋಸ್ಟ್‌ ಕಾರ್ಡ್‌ ಕನ್ನಡ ದೇವರ ನಾಡಿನಲ್ಲಿ ಏನಾಗುತ್ತಿದೆ ಎಂಬ ಪೋಸ್ಟರ್‌ ಪ್ರಕಟಿಸಿದೆ.

ಫ್ಯಾಕ್ಟ್‌ ಚೆಕ್:‌

ಪೊಲೀಸರು ಈ ಕುರಿತು ವಿಚಾರಣೆ ನಡೆಸಿದಾಗ ತಿಳಿದು ಬಂದ ವಿಷಯವೆಂದರೆ ಸೈನಿಕನ ಮೇಲೆ ಅಪರಿಚಿತರು ದಾಳಿ ನಡೆಸಿಲ್ಲ. ಬದಲಿಗೆ ಆತ ದಿಢೀರ್ ಖ್ಯಾತಿಗಳಿಸಬೇಕೆಂಬ ದುರಾಸೆಗೆ ಬಿದ್ದು ಜೋಶಿ ಎಂಬ ಸ್ನೇಹಿತನಿಂದ ಬೆನ್ನ ಮೇಲೆ PFI ಎಂದು ಬರೆಸಿಕೊಂಡು ನಾಟಕವಾಡಿದ್ದಾನೆ.

ಈ ಕುರಿತು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಜೋಶಿ, ‘ಆತ ಬೆನ್ನ ಮೇಲೆ PFI ಎಂದು ಬರೆಯಲು ಹೇಳಿದ. ನಾನು ತಪ್ಪಾಗಿ ಕೇಳಿಸಿಕೊಂಡು DFI ಎಂದು ಬರೆದಿದ್ದೆ. ಆನಂತರ ಅದನ್ನು PFI ಎಂದು ತಿದ್ದಿದೆ. ಶೈನ್ ಕುಮಾರ್ ಹೊಡೆಯಲು ಹೇಳಿದ. ಆದರೆ ನನಗೆ ಸಾಧ್ಯವಾಗಲಿಲ್ಲ. ಆನಂತರ ನೆಲದಲ್ಲಿ ಬಿದ್ದು ಒರಳಾಡಿದ’ ಎಂದು ಹೇಳಿದ್ದಾನೆ.

ಪೊಲೀಸರು ಆತನ ಮನೆಯಿಂದ ಬಣ್ಣ ಮತ್ತು ಬ್ರಷ್ ವಶಪಡಿಸಿಕೊಂಡು ಅವರಿಬ್ಬರನ್ನೂ ಬಂಧಿಸಲಾಗಿದೆ.


ಇದನ್ನೂ ಓದಿ: ಯುವತಿಯ ಕೊಲೆ ಮಾಡಿದ UP ಮುಸ್ಲಿಂ ಯುವಕರಿಗೆ ಯೋಗಿಯ ಶಿಕ್ಷೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *