ಬಹುಭಾಷಾ ನಟಿ ನಿತ್ಯಾ ಮೆನನ್‌ರವರಿಗೆ “ಚಿತ್ರಿಕರಣದ ಸಂದರ್ಭದಲ್ಲಿ ತಮಿಳು ನಟನೊಬ್ಬ ಕಿರುಕುಳ ನೀಡಿದ್ದಾನೆ ಮತ್ತು ತಮಿಳು ಸಿನಿಮಾ ಇಂಡಸ್ಟ್ರಿ ಯಿಂದ ನಾನು ಅನೇಕ ತೊಂದರೆಗಳನ್ನು ಎದುರಿಸಿದ್ದೇನೆ ಎಂದು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂದು ಅನೇಕ ತಮಿಳು ಚಾನೆಲ್‌ಗಳು ವರದಿ ಮಾಡಿವೆ.
ಫ್ಯಾಕ್ಟ್‌ಚೆಕ್:
“ನಾನು ಇತ್ತೀಚೆಗೆ ಯಾವ ಸಂದರ್ಶನ ನೀಡಿಲ್ಲ ಮತ್ತು ಇಂತಹ ಯಾವುದೇ ಹೇಳಿಕೆ ನೀಡಿಲ್ಲ. ಈ ಸುಳ್ಳು ಸುದ್ಧಿಯನ್ನು ಯಾರು ಮೊದಲು ಹಬ್ಬಿಸಿದರು ಎಂದು ತಿಳಿದು ಬಂದರೆ ನನ್ನ ಗಮನಕ್ಕೆ ತನ್ನಿ. ಕೆಲವು ಪತ್ರಕರ್ತರು ಇಂತಹ ಸ್ಥಿತಿಗೆ ಇಳಿದಿರುವುದು ದುಃಖಕರ” ಎಂದು ನಟಿ ನಿತ್ಯಾ ಮೆನನ್ ತಮ್ಮ Instagram ಮತ್ತು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದ್ದರಿಂದ ನಿತ್ಯಾ ಮೆನನ್ ಕಿರುಕುಳಕ್ಕೆ ಒಳಗಾಗಿದ್ದರು ಎಂಬುದು ಸುಳ್ಳು.
ಇದನ್ನು ಓದಿ: ಫ್ಯಾಕ್ಟ್‌ಚೆಕ್: ದಿಢೀರ್ ಖ್ಯಾತಿ ಗಳಿಸಲು ಬೆನ್ನಿನ ಮೇಲೆ PFI ಎಂದು ಬರೆಸಿಕೊಂಡು ಹಲ್ಲೆ ನಾಟಕವಾಡಿದ ಸೈನಿಕ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.