ಶೃಂಗೇರಿ ಶಾರದ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತಿ ತೀರ್ಥರು ಹಿಂದು ವಿರೋಧಿಗಳಾದ ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದ್ದಾರೆ ಎಂಬ ಸುದ್ಧಿಯೊಂದು ಹರಿದಾಡುತ್ತಿದೆ.
ಫ್ಯಾಕ್ಟ್‌ಚೆಕ್:
ರಾಹುಲ್ ಗಾಂಧಿ, ಸಿದ್ದರಾಮಯ್ಯನವರು ಮತ್ತು ಸಂಸದ ವೇಣುಗೋಪಾಲ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಮಾರ್ಚ್, 2018ರಲ್ಲಿ ಶೃಂಗೇರಿ ಶಾರದ ಪೀಠಕ್ಕೆ ಭೇಟಿಕೊಟ್ಟು ಜಗದ್ಗುರು ಭಾರತಿ ತೀರ್ಥರನ್ನು ಭೇಟಿಯಾಗಿದ್ದರು. ಚರ್ಚೆಯ ನಂತರ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದಿಸಿದರು.ನಂತರ ರಾಹುಲ್ ಗಾಂಧಿಯವರಿಗೆ ಅವರ ತಂದೆ ರಾಜೀವ್ ಗಾಂಧಿಯವರ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಪೋಟೋಗಳನ್ನು ಕರ್ನಾಟಕ ಕಾಂಗ್ರೆಸ್ ತಮ್ಮ ಟ್ವಿಟರ್(X) ಖಾತೆಯಲ್ಲಿ 2018 ಮಾರ್ಚ್‌ನಲ್ಲೆ ಹಂಚಿಕೊಂಡಿದೆ ಮತ್ತು ಸಿದ್ದರಾಮಯ್ಯನವರು ಸಹ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಮತ್ತು ಸಿದ್ದರಾಮಯ್ಯ ಶೃಂಗೇರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ ಎಂದು ಅನೇಕ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ಕೆಲವು ಬಲಪಂಥೀಯ ಖಾತೆಗಳಿಂದ ಶೃಂಗೇರಿ ಶ್ರೀಗಳು ಆಶೀರ್ವಾದ ನಿರಾಕರಿಸಿದ್ದಾರೆ ಎಂದು ಸುಳ್ಳು ಹಬ್ಬಿಸುತ್ತಿದೆ. ಈ ಕುರಿತು ಬೂಮ್ ಲೈವ್, ಫ್ಯಾಕ್ಟ್ಲಿ ಸೇರಿದಂತೆ ಅನೇಕ ಮಾಧ್ಯಮಗಳು ಸಹ ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ಆಗಾಗಿ ಶೃಂಗೇರಿ ಭಾರತಿ ತೀರ್ಥರು ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶಿರ್ವಾದಿಸಲು ನಿರಾಕರಿಸಿದ್ದಾರೆ ಎಂಬುದು ಸುಳ್ಳು.
ಇದನ್ನು ಓದಿ: ನಿತ್ಯಾ ಮೆನನ್ ತಮಿಳು ನಟನಿಂದ ಕಿರುಕುಳಕ್ಕೆ ಒಳಗಾಗಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.