“ಕಾವೇರಿ ಎಂದೂ ನಮ್ಮದು ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು ಇದು ನಮ್ಮ ದುರಂತ. ಕಾವೇರಿ ಇಡೀ ಕರ್ನಾಟಕದ ಆಸ್ತಿ. #ಕಾವೇರೀನಮ್ಮದು” ಎಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಟ್ವೀಟ್ ಮಾಡಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫ್ಯಾಕ್ಟ್‌ಚೆಕ್: ಈ ಟ್ವೀಟ್ ಫ್ಯಾನ್ ಅಕೌಂಟ್ ನಿಂದ ಮಾಡಲಾಗಿದ್ದು. ರಾಹುಲ್ ಅಭಿಮಾನಿಯೊಬ್ಬರು ಕೆ.ಎಲ್ ರಾಹುಲ್ ಹೆಸರು ಹೊಂದಿದ ಖಾತೆಯಿಂದ ಈ ಬರಹವನ್ನು ಹಂಚಿಕೊಂಡಿದ್ದಾರೆ. ಈ ಖಾತೆಗೆ ಬ್ಲೂಟಿಕ್ ಇಲ್ಲ ಮತ್ತು 1600 ಫಾಲೋವರ್ಸ್ ಮಾತ್ರ ಇದ್ದಾರೆ. ಕೆ.ಎಲ್ ರಾಹುಲ್ ರವರ ನೈಜ ಖಾತೆಗೆ 80 ಲಕ್ಷ ಫಾಲೋವರ್ಸ್ ಇದ್ದಾರೆ. ಆ ಖಾತೆಯಲ್ಲಿ ಕಾವೇರಿ ಕುರಿತು ಅವರು ಯಾವುದೇ ಟ್ವೀಟ್ ಮಾಡಿಲ್ಲ.
ಇದನ್ನು ಓದಿ: ನಿತ್ಯಾ ಮೆನನ್ ತಮಿಳು ನಟನಿಂದ ಕಿರುಕುಳಕ್ಕೆ ಒಳಗಾಗಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.