ಮಹಮ್ಮದ್ ಸಿರಾಜ್ ಪಾಕಿಸ್ತಾನದ ವಿರುದ್ಧ ಇಂಡಿಯಾ ಗೆಲುವನ್ನು ಇಸ್ರೇಲಿನ ಜನರಿಗೆ ಅರ್ಪಿಸಿಲ್ಲ

ಇಸ್ರೇಲ್ ಮತ್ತು ಪ್ಯಾಲೆಸ್ಟೈನಿನ ಯುದ್ಧದ ಕಾವು ಎಲ್ಲಾ ರಂಗಗಳಿಗೂ ಹರಡಿದ್ದು , ಪ್ರಸ್ತುತ ನಡೆಯುತ್ತಿರುವ ICC ಏಕದಿನ ವಿಶ್ವಕಪ್ 2023ರಲ್ಲಿ ಸಹ ಪ್ರತಿಫಲಿಸುತ್ತಿದೆ. ಇತ್ತೀಚೆಗೆ ಭಾರತದ ಪ್ರತಿಭಾನ್ವಿತ ಬೌಲರ್ ಮಹಮ್ಮದ್ ಸಿರಾಜ್ ಪಾಕಿಸ್ತಾನದ ವಿರುದ್ಧ ಇಂಡಿಯಾದ ಗೆಲುವನ್ನು ಇಸ್ರೇಲಿನ ಜನರಿಗೆ ಅರ್ಪಿಸಿದ್ದಾರೆ ಎಂಬ ಟ್ವಿಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಅಕ್ಟೋಬರ್ 14, 2023 ರಂದು ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಸಿರಾಜ್ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಸೇರಿದಂತೆ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಪಡೆದಿದ್ದರು.

ಫ್ಯಾಕ್ಟ್‌ಚೆಕ್: ಈ ಟ್ವಿಟ್ಟ್ ಮಹಮ್ಮದ್‌ ಸಿರಾಜ್‌ರವರ ಅಧಿಕೃತ ಖಾತೆಯಿಂದ ಪ್ರಕಟವಾಗಿಲ್ಲ ಬದಲಿಗೆ ನಕಲಿ ಖಾತೆಯಿಂದ ಪ್ರಕಟವಾಗಿದ್ದು, ಇದು ಸಿರಾಜ್ ರವರ ಅಭಿಮಾನಿಯೋಬ್ಬರು ಸೃಷ್ಟಿಸಿದ ಖಾತೆಯಾಗಿದ್ದು ವೆರಿಪೈಡ್ ಕೂಡ ಆಗಿಲ್ಲ. ಸಿರಾಜ್‌ರವರು ತಮ್ಮ ಅಧಿಕೃತ ಖಾತೆಯಲ್ಲಿ ಇಂತಹ ಯಾವುದೇ ಟ್ವಿಟ್ ಮಾಡಿಲ್ಲ. ಮತ್ತು ಈ ಕುರಿತು ಎಲ್ಲಿಯೂ ವರದಿಯಾಗಿಲ್ಲ.

ಟ್ವಿಟರ್ (X)ನಲ್ಲಿ ಮಹಮ್ಮದ್ ಸಿರಾಜ್‌ರವರ ಹೆಸರಿನಲ್ಲಿ ಇರುವ ನಕಲಿ ಖಾತೆಯಿಂದ  2023ರ ಅಕ್ಟೋಬರ್ 11 ರಂದು ಶ್ರೀಲಂಕಾ ವಿರುದ್ಧ ತನ್ನ ಶತಕವನ್ನು ಗಾಜಾ ಜನರಿಗೆ ಅರ್ಪಿಸಿದ ಪಾಕಿಸ್ತಾನದ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್‌ ಅವರಿಗೆ ವ್ಯಂಗ್ಯವಾಗಿ ತಿರುಗೇಟು ನೀಡಲು ಈ ಪೋಸ್ಟ್ ಹಂಚಿಕೊಳ್ಳಲಾಗಿದೆ.  ಅಕ್ಟೋಬರ್ 7, 2023 ರಂದು ಇಸ್ರೇಲಿ ಪಡೆಗಳ ಮೇಲೆ ಇಸ್ಲಾಮಿಕ್ ಉಗ್ರಗಾಮಿ ಗುಂಪು ಹಮಾಸ್ ಇತ್ತೀಚೆಗೆ ನಡೆಸಿದ ದಾಳಿಯ ನಂತರ, ಗಾಝಾ ಇಸ್ರೇಲ್‌ನ ಪ್ರತೀಕಾರದ ವೈಮಾನಿಕ ದಾಳಿಯಿಂದ ತತ್ತರಿಸುತ್ತಿದೆ, ಸಾವಿನ ಸಂಖ್ಯೆ 2,200ಕ್ಕೂ ಹೆಚ್ಚು ತಲುಪಿದೆ, ಇದರಲ್ಲಿ 724 ಮಕ್ಕಳು ಮತ್ತು 458 ಮಹಿಳೆಯರು ಸೇರಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯ ತಿಳಿಸಿದೆ.

 

ಆದ್ಧರಿಂದ ಮಹಮ್ಮದ್ ಸಿರಾಜ್ ಪಾಕಿಸ್ತಾನದ ವಿರುದ್ಧ ಇಂಡಿಯಾದ ಗೆಲುವನ್ನು ಇಸ್ರೇಲಿನ ಜನರಿಗೆ ಅರ್ಪಿಸಿದ್ದಾರೆ ಎಂಬುದು ಸುಳ್ಳು.


ಇದನ್ನು ಓದಿ: ಪ್ಯಾಲೇಸ್ಟೈನಿಗರು ಮೇಕಪ್ ಬಳಸಿಕೊಂಡು ಯುದ್ಧದ ಗಾಯಳುಗಳಂತೆ ನಟಿಸುತ್ತಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *