ಪ್ಯಾಲೇಸ್ಟೈನಿಗರು ಮೇಕಪ್ ಬಳಸಿಕೊಂಡು ಯುದ್ಧದ ಗಾಯಳುಗಳಂತೆ ನಟಿಸುತ್ತಿದ್ದಾರೆ ಎಂಬುದು ಸುಳ್ಳು

ಇಸ್ರೇಲ್ ಮತ್ತು ಪ್ಯಾಲಸ್ಟೈನ್ ಯುದ್ಧವನ್ನು ಧರ್ಮಗಳ ಆಧಾರದಲ್ಲಿ ನೋಡುವ ಕ್ರಮವೊಂದು ನಿರ್ಮಾಣವಾಗಿದೆ. ಭಾರತದಲ್ಲಿಯೂ ಸಹ ಹಿಂದು-ಮುಸ್ಲಿಂ ಸಮುದಾಯಗಳು ಪರ-ವಿರೋಧದ ಹೆಸರಿನಲ್ಲಿ ಸುಳ್ಳುಗಳನ್ನು ಹಂಚಿಕೊಳ್ಳುತ್ತಿವೆ. ಇತ್ತೀಚೆಗೆ “ಇಸ್ಲಾಮಿಕ್ ಯೂನಿವರ್ಸಿಟಿ ಆಫ್ ವಿಕ್ಟಿಮ್ ಕಾರ್ಡ್ ಗೆ ಸ್ವಾಗತ. ಇಲ್ಲಿ ನೀವು ರಾಸಾಯನಿಕವನ್ನು ಬಳಸಿಕೊಂಡು ಪೂರ್ಣ ಮೇಕಪ್ ಮಾಡುವುದು ಮತ್ತು ಅಳುವುದು ಹೇಗೆ ಎಂದು ಕಲಿಯಬಹುದು ಮತ್ತು ನಂತರ ಇಸ್ರೇಲ್ ಅನ್ನು ದೂಷಿಸಬಹುದು. ಈ ವಿಶ್ವವಿದ್ಯಾಲಯವು ಮಹಿಳೆಯರು ಮತ್ತು ಸಣ್ಣ ಮಕ್ಕಳಿಗೆ ವಿಶೇಷ ರಿಯಾಯಿತಿಯನ್ನು ಹೊಂದಿದೆ.” ಎಂಬ ಹೇಳಿಕೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದನ್ನು ನೀವು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್: ಇದು 2017ರ ಹಳೆಯ ವಿಡಿಯೋ ಆಗಿದ್ದು, ಚಿತ್ರದಲ್ಲಿರುವಾಕೆ ಮರಿಯಮ್ ಸಲಾಹ್ ಪ್ಯಾಲಸ್ಟೈನ್ ಮೆಕಪ್ ಕಲಾವಿದೆಯಾಗಿದ್ದು, ಗಾಜಾ ಪಟ್ಟಿಯಲ್ಲಿ ನಡೆದ ಸಿನಿಮಾವೊಂದರ ಯುದ್ಧದ ಸನ್ನಿವೇಶದ ಚಿತ್ರೀಕರಣದ ಸಂದರ್ಭದಲ್ಲಿ ಈ ವಿಡಿಯೋ ಮಾಡಲಾಗಿದೆ. ಈ ವಿಡಿಯೋವನ್ನು “ಐ ಲವ್ ಇಸ್ರೆಲ್” ಎಂಬ ಯೂಟೂಬ್ ಚಾನೆಲ್‌ನಲ್ಲಿ ಫೆಬ್ರವರಿ 14, 2019ರಂದು ಪ್ರಕಟಿಸಲಾಗಿದೆ. “ಮೇಕಪ್ ಕಲಾವಿದರು ಗಾಜಾ ಚಲನಚಿತ್ರೋದ್ಯಮದಲ್ಲಿ ಲಿಂಗ ತಡೆಗೋಡೆಯನ್ನು ಮುರಿದಿದ್ದಾರೆ.” ಎಂಬ ಶೀರ್ಷಿಕೆ ಅಡಿಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಟರ್ಕಿ ಮೂಲದ ವೆರಿಫೈಡ್ ಯೂಟ್ಯೂಬ್ ಚಾನೆಲ್ TRT ವರ್ಲ್ಡ್ ಮಾರ್ಚ್ 2, 2017 ರಂದು ಪ್ರಕಟಿಸಿದ ವೀಡಿಯೊವೊಂದರಲ್ಲಿ ವಿಸ್ತೃತವಾಗಿ ಈ ಮೇಕಪ್ ಕಲಾವಿದೆಯ ಕುರಿತು ವರದಿ ಮಾಡಲಾಗಿದೆ. “ಗಾಝಾ ಪಟ್ಟಿಯಲ್ಲಿ ಹೆಚ್ಚು ಚಲನಚಿತ್ರ ನಿರ್ಮಾಣಗಳಿಲ್ಲ. ಆದರೆ ಅದು ಮೇಕಪ್ ಕಲಾವಿದೆ ಮರಿಯಮ್ ಸಲಾಹ್ ಅವರ ಕನಸನ್ನು ಅನುಸರಿಸುವುದನ್ನು ತಡೆಯಲಿಲ್ಲ. ಸಾಂಪ್ರದಾಯಿಕವಾಗಿ ಪುರುಷರು ನಡೆಸುವ ವ್ಯವಹಾರಕ್ಕೆ ಪ್ರವೇಶಿಸುವ ಪ್ಯಾಲೆಸ್ಟೈನ್ ಚಲನಚಿತ್ರಗಳಿಗೆ ನಕಲಿ ರಕ್ತವನ್ನು ತಯಾರಿಸಲು ಅವರು ಸ್ವತಃ ಕಲಿತರು” ಎಂದು ವೀಡಿಯೊದ ವಿವರಣೆಯಲ್ಲಿ ಬರೆಯಲಾಗಿದೆ.

ಆದ್ದರಿಂದ ಕರುಣೆ ಗಿಟ್ಟಿಸಲು ಪ್ಯಾಲೇಸ್ಟೈನಿಗರು ಮೇಕಪ್ ಬಳಸಿಕೊಂಡು ಯುದ್ಧದ ಗಾಯಳುಗಳಂತೆ ನಟಿಸುತ್ತಿದ್ದಾರೆ ಎಂಬುದು ಸುಳ್ಳು.


ಇದನ್ನು ಓದಿ: ಮುಸ್ಲಿಮರಿಗೆ ಮಾತ್ರ ಪ್ರತ್ಯೇಕ ಆಸ್ಪತ್ರೆ – ತೆಲಂಗಾಣ ಕಾಂಗ್ರೆಸ್ ಭರವಸೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *