ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರವೊಂದು ಉತ್ತರ ಭಾರತದ ರಾಜಕೀಯದಲ್ಲಿ ಬಹುದೊಡ್ಡ ಸಂಚಲನವನ್ನ ಸೃಷ್ಟಿಸಿದೆ, ಈ ಪತ್ರದ ಸತ್ಯಾಸತ್ಯತೆಯನ್ನ ಪರಿಶೀಲಿಸದೆ ಅದೆಷ್ಟೋ ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಹೌದು.. ನಿನ್ನೆ ಸಂಜೆಯಿಂದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್ ಅವರು ಕೋಪಗೊಂಡಿದ್ದಾರೆ ಹಾಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಈ ಸುದ್ದಿಯನ್ನ ದೇಶಾದ್ಯಂತ ಇರುವ ಕಾಂಗ್ರೆಸ್‌ನ ಹಲವು ಕಾರ್ಯಕರ್ತರನ್ನು ಅಚ್ಚರಿಗೆ ದೂಡಿದ್ದಂತು ಸುಳ್ಳಲ್ಲ.
ಅದಕ್ಕೆ ಪ್ರಮುಖವಾದ ಕಾರಣ ದಿಗ್ವಿಜಯ ಸಿಂಗ್ ಅವರ ಹೆಸರಿನಲ್ಲಿದ್ದ ಲೆಟರ್ ಹೆಡ್‌ನಲ್ಲಿ ಬರೆಯಲಾಗಿದ್ದ ರಾಜಿನಾಮೆ ಪತ್ರ. ಇದರಿಂದಾಗಿ ಬಹುತೇಕರು ದಿಗ್ವಿಜಯ ಸಿಂಗ್ ರಾಜಿನಾಮೆಯನ್ನ ಕೊಟ್ಟಿದ್ದಾರೆ ಎಂದೇ ಭಾವಿಸಿದ್ದರು
ಫ್ಯಾಕ್ಟ್‌ಚೆಕ್ : ಈ ಸುದ್ದಿ ವ್ಯಾಪಕವಾಗಿ ಹಬ್ಬುತ್ತಿದ್ದಂತೆ ಗುಜರಾತಿನ ಒನ್ ಇಂಡಿಯಾ ಸಂಸ್ಥೆ ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದೆ ಇದೊಂದು ಸುಳ್ಳು ಸುದ್ದಿ ಎಂದು ಹಲವು ಸಾಕ್ಷಿಗಳನ್ನ ನೀಡಿದೆ. ಈ ಕುರಿತು ಸ್ವತಃ ದಿಗ್ವಿಜಯ ಸಿಂಗ್ ಅವರೇ ಪ್ರತಿಕ್ರಿಯೆ ನೀಡಿದ್ದು, “ನಾನು 1971ರಲ್ಲಿ ಕಾಂಗ್ರೆಸ್ ಸೇರಿದ್ದೆ. ನಾನು ಪಕ್ಷಕ್ಕೆ ಸೇರಿದ್ದು ಸ್ಥಾನಕ್ಕಾಗಿ ಅಲ್ಲ. ಕಾಂಗ್ರೆಸ್ ಸಿದ್ಧಾಂತದಿಂದ ಪ್ರಭಾವಿತನಾಗಿ ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ” ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ತಮ್ಮ ರಾಜೀನಾಮೆ ವಿಚಾರ ಸುಳ್ಳು ಸುದ್ದಿ ಎಂಬುವುದನ್ನು ಸ್ವತಃ ದಿಗ್ವಿಜಯ ಸಿಂಗ್ ಅವರೇ ಸ್ಪಷ್ಟ ಪಡಿಸಿದ್ದಾರೆ.
ಆದರೂ ಕೂಡ ಸಾಕಷ್ಟು ಮಂದಿ ದಿಗ್ವಿಜಯ ಸಿಂಗ್ ರಾಜಿನಾಮೆ ನೀಡಿದ್ದಾರೆ ಎಂಬ ನಕಲಿ ಪತ್ರವನ್ನು ಎಲ್ಲೆಡೆ ಶೆರ್ ಮಾಡುತ್ತಿದ್ದಾರೆ. ಹಾಗಾಗಿ ಯಾವುದೇ ಸುದ್ದಿಯನ್ನು ನಂಬುವ ಮೊದಲು ಅಥವಾ ಶೇರ್ ಮಾಡುವ ಮೊದಲು ಒಮ್ಮೆ ಪರಿಶೀಲಿಸುವುದು ಉತ್ತಮ
ಇದನ್ನೂ ಓದಿ : ಮಹಮ್ಮದ್ ಸಿರಾಜ್ ಪಾಕಿಸ್ತಾನದ ವಿರುದ್ಧ ಇಂಡಿಯಾ ಗೆಲುವನ್ನು ಇಸ್ರೇಲಿನ ಜನರಿಗೆ ಅರ್ಪಿಸಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.