“ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಬಳಕೆಯನ್ನು ಭಾರತದ ಸುಪ್ರೀಂ ಕೋರ್ಟ್ ನಿಷೇಧಿಸಿದೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,, ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ವಿವಿಧ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಹಲವು ಮಂದಿ ಕೇಂದ್ರ ಸರ್ಕಾರವನ್ನು ಕೂಡ ಟೀಕಿಸುತ್ತಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ಇವಿಎಂ ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆಯ ನಂತರದಲ್ಲಿ ಈ ಸುದ್ದಿ ಹರಡಿರುವುದರಿಂದ ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿ ಶೇರ್ ಮಾಡುತ್ತಿದ್ದಾರೆ. ಆದರೆ ಈ ಸುದ್ದಿಯನ್ನು ಪರಿಶೀಲಿಸಿದಾಗ ವಾಸ್ತವ ಸಂಗತಿ ಬೇರೆಯದ್ದೇ ಇದೆ.
ಫ್ಯಾಕ್ಟ್‌ಚೆಕ್
ಹೀಗೆ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆ. ಆದರೆ ಈ ಬಗ್ಗೆ ಯಾವುದೇ ರೀತಿಯಾದ ಮಾಹಿತಿ ಪತ್ತೆಯಾಗಿಲ್ಲ. ಇನ್ನು, ಭಾರತದ ಸರ್ವೋಚ್ಚ ನ್ಯಾಯಾಲಯವು ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಬಳಕೆಯನ್ನು ನಿಷೇಧಿಸಿದೆ ಎಂದು ಸೂಚಿಸುವ ಯಾವುದೇ ವರದಿಗಳು ಕಂಡು ಬಂದಿಲ್ಲ.
ಒಂದು ವೇಳೆ ಸುಪ್ರೀಂ ಕೋರ್ಟ್ ನಿಜವಾಗಿಯೂ ಈ ರೀತಿ ನಿರ್ಧಾರವನ್ನು ತೆಗೆದುಕೊಂಡಿದ್ದರೆ, ಅದು ವ್ಯಾಪಕವಾಗಿ ವರದಿಯಾಗುತ್ತಿತ್ತು. ಇನ್ನು, 15 ಫೆಬ್ರವರಿ 2024 ರಂದು PIB ಯ ಸತ್ಯ-ಪರಿಶೀಲನೆಯಲ್ಲಿ ಭಾರತದ ಸುಪ್ರೀಂ ಕೋರ್ಟ್‌ನಿಂದ EVM ಗಳನ್ನು ನಿಷೇಧಿಸಿದೆ ಎಂದು ಸೂಚಿಸುವ ಇದೇ ರೀತಿಯ ವರದಿಯನ್ನು ಸುಳ್ಳು ಎಂದು ಹೇಳಿದೆ.
'Hindi Breaking News' नामक #YouTube चैनल के एक वीडियो में यह दावा किया जा रहा है कि सुप्रीम कोर्ट ने इवीएम पर 20 सालों का बैन लगा दिया है #PIBFactCheck
▪️ यह दावा #फर्जी है!
▪️ कृपया ऐसे वीडियो को शेयर ना करें pic.twitter.com/J3xdatRnsk
— PIB Fact Check (@PIBFactCheck) February 15, 2024
ಜೊತೆಗೆ ಸುಪ್ರೀಂ ಕೋರ್ಟ್‌ನಲ್ಲಿ ಈ ರೀತಿಯಾದ ಯಾವುದಾದರು ಪ್ರಕರಣ ಇದೆಯೇ ಎಂದು ಪರಿಶೀಲಿಸಿದಾಗ, ಇವಿಎಂ ಕುರಿತ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ಅನುಮತಿ ನೀಡದ ವರದಿಯೊಂದು ಕಂಡು ಬಂದಿದೆ. ಆದರೆ ಎಲ್ಲಿಯೂ ಸುಪ್ರೀಕೋರ್ಟ್‌ನಲ್ಲಿ ಈ ಕುರಿತು ಪ್ರಕರಣ ಇರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಇವಿಎಂ ಯಂತ್ರಗಳನ್ನು ನಿಷೇಧಿಸಿದೆ ಎಂಬುದು ಸುಳ್ಳಾಗಿದೆ.
ಇದನ್ನೂ ಓದಿ : Fact Check: ಮುಜರಾಯಿ ಇಲಾಖೆಯ 450 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಜೇಬಿಗಿಳಿಸಿಕೊಂಡಿದೆ ಎಂಬುದು ಸುಳ್ಳು
ವಿಡಿಯೋ ನೋಡಿ : Fact Check: ಮುಜರಾಯಿ ಇಲಾಖೆಯ 450 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಜೇಬಿಗಿಳಿಸಿಕೊಂಡಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.