Fact Check: ನೀರು ಕುಡಿದ ಕಾರಣಕ್ಕೆ ದಲಿತ ಹುಡುಗರ ಹಲ್ಲೆ ನಡೆದಿರುವುದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಎಂದು ಸಾಭೀತಾಗಿಲ್ಲ

ಜಾತಿ ವ್ಯವಸ್ಥೆ ನಮ್ಮ ದೇಶಕ್ಕಂಟಿರುವ ಸಾಮಾಜಿಕ ಪಿಡುಗುಗಳಲ್ಲೊಂದು. ಸಾವಿರಾರು ವರ್ಷಗಳಿಂದ ಈ ಜಾತಿ ವ್ಯವಸ್ಥೆಯನ್ನು ಬುಡಮೇಲಾಗಿ ಕೀಳಲು ಅನೇಕ ಸಮಾಜ ಸುಧಾರಕರು ಬಂದರು ಇನ್ನೂ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಗಳು ನಿಂತಿಲ್ಲ. ಆದರೆ “ಜಾತಿ ವ್ಯವಸ್ಥೆಯೇ ಈಗಿಲ್ಲ, ಎಲ್ಲವೂ ಬದಲಾಗಿದೆ” ಎಂದು ವಾದಿಸುವವರು ನಮ್ಮ ಸಮಾಜದಲ್ಲಿದ್ದಾರೆ. ಅವರಿಗೆ ಪ್ರತಿನಿತ್ಯ ನಡೆಯುವ ಜಾತಿ ದೌರ್ಜನ್ಯಗಳ ಮಾಹಿತಿ ಇರುವುದಿಲ್ಲ. ಇದ್ದರೂ ಅದನ್ನು ಪರಿಗಣಿಸುವುದಿಲ್ಲ. ಭಾರತದ ಮಾಧ್ಯಮಗಳು ಸಹ ಇಂತಹ ದೌರ್ಜನ್ಯಗಳನ್ನು ವರದಿ ಮಾಡುವುದಿಲ್ಲ.

ಆದ್ದರಿಂದ ಇತ್ತೀಚೆಗೆ, “ಮಧ್ಯ ಪ್ರದೇಶ ದ ಜಬಲ್ಪುರ್ ನಲ್ಲಿ ಬಾವಿಯಿಂದ ನೀರು ಕುಡಿದ 5 ದಲಿತ ಬಾಲಕರಿಗೆ ಅಲ್ಲಿನ ಮೇಲ್ಜಾತಿ ವ್ಯಕ್ತಿಯೊಬ್ಬ ಕಟ್ಟಿಹಾಕಿ ತಳಿಸಿದ್ದಾನೆ.” ಎಂಬ ಮನಕಲಕುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ  ವ್ಯಕ್ತಿಯೊಬ್ಬ 5 ಮಕ್ಕಳನ್ನು ಕಟ್ಟಿ ಹಾಕಿ ಹೊಡೆಯುತ್ತಿದ್ದರೆ ಸುತ್ತ ನೆರೆದ ಊರಿನ ಜನರು ಮಕ್ಕಳನ್ನು ರಕ್ಷಿಸದೆ ನಿಂತು ನೋಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್: ಈ ಘಟನೆ ಡಿಸೆಂಬರ್ 5, 2023ರಂದು ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಕೆಲವೇ ಕೆಲವು ಸುದ್ದಿ ಮಾಧ್ಯಮಗಳು ಈ ಘಟನೆಯನ್ನು ವರದಿ ಮಾಡಿದ್ದು, ಅದರಲ್ಲಿ  5 ಜನ ದಲಿತ ಬಾಲಕರು ಮೇಲ್ಜಾತಿ ಬಾವಿಯಲ್ಲಿ ನೀರು ಕುಡಿದ ಕಾರಣಕ್ಕಾಗಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಮಧ್ಯಪ್ರದೇಶದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತೇಂದ್ರ ಪಟ್ವಾರಿ ಅವರು ಸಹ ಈ ವಿಡಿಯೋ ಹಂಚಿಕೊಂಡು ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿದ ಜಬಲ್ಪುರದ SP ಈ ಘಟನೆ ಜಬಲ್ಪುರದಲ್ಲಿ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೆಚ್ಚುವರಿ ಎಸ್ಪಿ ಸೂರ್ಯಕಾಂತ್ ಶರ್ಮಾ ಪ್ರಕಾರ, “ಮಕ್ಕಳಿಗೆ ಥಳಿಸಿದ ವಿಡಿಯೋ ಜಬಲ್ಪರದ್ದು ಎಂದು ಕಂಡುಬಂದಿಲ್ಲ. ಜಬಲ್ಪುರ ಪೊಲೀಸರು ಎಲ್ಲಾ ಪೊಲೀಸ್ ಠಾಣೆಗಳ ಉಸ್ತುವಾರಿಗಳಿಂದ ವೀಡಿಯೊವನ್ನು ಪರಿಶೀಲಿಸಿದ್ದಾರೆ. ಒಂದು ವೇಳೆ ಈ ವಿಡಿಯೋ ವೈರಲ್ ಆಗಿದ್ದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಇದರೊಂದಿಗೆ ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಎಕ್ಸ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡುವವರ ವಿವರಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ತಪ್ಪು ಮಾಹಿತಿ ಹರಡುವವರ ವಿರುದ್ಧ ಐಟಿ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು. ಎಂದಿದ್ದಾರೆ. ಈ ಕುರಿತು ಜಬಲ್ಪುರದ ಮದನ್ ಮಹಲ್ ಪೋಲಿಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಆರೋಪಿಯನ್ನು ಹಿಡಿದುಕೊಟ್ಟವರಿಗೆ ಬಹುಮಾನವನ್ನು ಘೋಷಿಸಲಾಗಿದೆ ಆದರೆ ಈ ಘಟನೆ ಸಂಭವಿಸಿ ಮೂರು ತಿಂಗಳು ಕಳೆದಿದ್ದರು ಪೋಲಿಸರು ಒಬ್ಬರನ್ನು ಬಂದಿಸಿಲ್ಲ.


ಇದನ್ನು ಓದಿ: Fact Check: ದೇವಸ್ಥಾನಗಳ ಸಮಿತಿಯಲ್ಲಿ ಹಿಂದೂಯೇತರರು ಇರಬೇಕೆಂದು ಕಾಂಗ್ರೆಸ್ ಸರ್ಕಾರ ತಿದ್ದುಪಡಿ ಮಾಡಿಲ್ಲ


ವಿಡಿಯೋ ನೋಡಿ: Fact Check | ಕೇಂದ್ರ ಸರ್ಕಾರದಿಂದಲೇ ಸುಳ್ಳು, BAPS ದೇವಾಲಯವು UAEನಲ್ಲಿ ಮೊದಲ ದೇವಾಲಯವಲ್ಲ..!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *