“ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಮುಂದಿನ 50 ವರ್ಷಗಳ ಕಾಲ ಪಾಕಿಸ್ತಾನಕ್ಕೆ ₹5000 ಕೋಟಿ ಬಡ್ಡಿ ರಹಿತ ಸಾಲ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಕೆಲವರು ಕಾಂಗ್ರೆಸ್ ಮುಸ್ಲಿಮರ ಪಕ್ಷ, ಅದು ಯಾವಾಗಲೂ ಪಾಕಿಸ್ತಾನಕ್ಕೆ ಬೆಂಬಲ ಕೊಡುತ್ತದೆ ಎಂದು ಪೋಸ್ಟ್‌ಗಳನ್ನು ಕೂಡ ಮಾಡುತ್ತಿದ್ದಾರೆ. ಆದರೆ ಈ ಕುರಿತು ಸತ್ಯ ಶೋಧನೆಯನ್ನು ನಡೆಸಿದಾಗ ಅಸಲಿ ಸಂಗತಿ ಬಟಾ ಬಯಲಾಗಿದೆ.
ಫ್ಯಾಕ್ಟ್‌ಚೆಕ್
ರಾಹುಲ್ ಗಾಂಧಿ ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆಯೇ ಎಂದು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ ರಾಹುಲ್ ಗಾಂಧಿ ಅವರು ಪಾಕಿಸ್ತಾನಕ್ಕ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಕುರಿತು ಯಾವುದೇ ಮಾಹಿತಿ ಪತ್ತಯಾಗಿಲ್ಲ.
ಇನ್ನು ರಾಹುಲ್ ಗಾಂಧಿ ಅವರ ಯಾವುದಾದರು ಒಂದು ಭಾಷಣದ ಕ್ಲಿಪ್ ವಿಡಿಯೋಗಳನ್ನು ಬಳಸಿ ಸುಳ್ಳು ಹೇಳುವ ಕೆಲ ಮುಖ್ಯ ಮಾಧ್ಯಮಗಳು ಕೂಡ ಈ ಕುರಿತು ಯಾವುದೇ ರೀತಿಯಾದ ವರದಿಗಳನ್ನು ಪ್ರಕಟ ಮಾಡಿಲ್ಲ,
#Urgent: This is to notify that the attached media which is being circulated online has been doctored with our channel's template. The information about Sh. Rahul Gandhi's statements, which these images carry have not been reported by ABP & have no relation with ABP News Network. pic.twitter.com/qYU2sJXqsl
— ABP News (@ABPNews) November 12, 2018
ಇನ್ನು ವೈರಲ್ ಆಗಿರುವ ಎಬಿಪಿ ಸುದ್ದಿ ಸಂಸ್ಥೆಯ ಟೆಂಪ್ಲೆಟ್ ಪರಿಶೀಲನೆ ನಡೆಸಿದಾಗ ಈ ಕುರಿತು 12 ನವೆಂಬರ್ 2018ರಲ್ಲೇ ಎಬಿಪಿ ಸುದ್ದಿ ಸಂಸ್ಥೆ ಅದು ತಮ್ಮ ಪೋಸ್ಟ್ ಅಲ್ಲ ಎಂದು ಟ್ವೀಟ್ ಮಾಡಿತ್ತು. ಒಟ್ಟಾರೆಯಾಗಿ ಪಾಕಿಸ್ತಾನಕ್ಕೆ ₹ 5000 ಕೋಟಿ ಸಾಲ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ
ಇದನ್ನೂ ಓದಿ : Fact Check | ಕೇಂದ್ರ ಸರ್ಕಾರದಿಂದಲೇ ಸುಳ್ಳು, BAPS ದೇವಾಲಯವು UAEನಲ್ಲಿ ಮೊದಲ ದೇವಾಲಯವಲ್ಲ..!
ವಿಡಿಯೋ ನೋಡಿ : Fact Check | ಕೇಂದ್ರ ಸರ್ಕಾರದಿಂದಲೇ ಸುಳ್ಳು, BAPS ದೇವಾಲಯವು UAEನಲ್ಲಿ ಮೊದಲ ದೇವಾಲಯವಲ್ಲ..!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.