Fact Check | ಕೇಂದ್ರ ಸರ್ಕಾರದಿಂದಲೇ ಸುಳ್ಳು, BAPS ದೇವಾಲಯವು UAEನಲ್ಲಿ ಮೊದಲ ದೇವಾಲಯವಲ್ಲ..!

ಇದೇ ಫೆಬ್ರವರಿ 14ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಭೇಟಿ ನೀಡಿದ್ದರು. ಈ ವೇಳೆ  ಬೋಚಾಸನವಾರಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ (ಬಿಎಪಿಎಸ್‌) ದೇವಾಲಯವನ್ನು ಅಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಇದಕ್ಕೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಸಂತಸ ವ್ಯಕ್ತ ಪಡಿಸಿದ್ದರು. ಅಷ್ಟು ಮಾತ್ರವಲ್ಲದೆ ಯುಎಇನಲ್ಲಿ ನಿರ್ಮಾಣವಾದ ಮೊದಲ ಹಿಂದೂ ದೇವಸ್ಥಾನ ಇದು ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹೇಳಿಕೆ ನೀಡಿತು

ಅಸಲಿಗೆ ಮೊದಲು ಈ ರೀತಿಯ ಸುದ್ದಿ ಹಬ್ಬಲು ಕಾರಣವಾಗಿದ್ದು,  ಕೇಂದ್ರ ಸಂಸ್ಕೃತಿ ಸಚಿವಾಲಯವು ಎಕ್ಸ್‌ ಖಾತೆಯಲ್ಲಿ ಬಂದ ಮಾಹಿತಿ. ನಂತರದಲ್ಲಿ ಕೇಂದ್ರ ಸರ್ಕಾರದ ಹಲವು ಸಚಿವರು ಇದೇ ಮಾಹಿತಿಯನ್ನು ತಮ್ಮ ತಮ್ಮ ಖಾತೆಗಳ ಮೂಲಕ ಹಂಚಿಕೊಂಡರು. ಭಾರತದ ಹಲವು ಮಾಧ್ಯಮ ಸಂಸ್ಥೆಗಳೂ  ಇದೇ ಮಾಹಿತಿಯನ್ನು ಹಂಚಿಕೊಂಡವು. ಇಷ್ಟು ಮಾತ್ರವಲ್ಲದೆ ‘MyGov‘ ವೇದಿಕೆಯಲ್ಲಿಯೂ ಈ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಆದರೆ, ಇದರ ಅಸಲಿ ವಿಚಾರ ಈಗ ಬಹಿರಂಗಗೊಂಡಿದೆ.

ಫ್ಯಾಕ್ಟ್‌ಚೆಕ್‌

ಅಸಲಿಗೆ ಯುಎಇನಲ್ಲಿ ಬಿಎಪಿಎಸ್‌ ದೇವಾಲಯಕ್ಕೂ ಮುನ್ನ  ಹಲವು ಹಿಂದೂ ದೇವಾಲಯಗಳು ನಿರ್ಮಾಣವಾಗಿದ್ದವು. 1958ರಲ್ಲಿಯೇ ಯುಎಇನಲ್ಲಿ ಕೃಷ್ಣ ದೇವಾಲಯ ನಿರ್ಮಾಣ ಮಾಡಲಾಗಿತ್ತು. ಶೇಕ್‌ ರಶೀದ್‌ ಬಿನ್‌ ಸಯೀದ್‌ ಅಲ್‌ ಮಖ್ತೂಮ್‌  ಎಂಬುವರು ಮಸೀದಿ ಪಕ್ಕದಲ್ಲಿ ಕೃಷ್ಣ ಮಂದಿರ ನಿರ್ಮಾಣ ಮಾಡಲು ಭೂಮಿ ನೀಡಿದ್ದರು. ಮತ್ತು ನಿರ್ಮಾಣವೂ ಆಗಿತ್ತು ಹಾಗೂ 1997ರಲ್ಲಿ ಈ ದೇವಾಲಯವನ್ನು ನವೀಕರಿಸಲಾಗಿತ್ತು.

ಇನ್ನು ಯುಎಇನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿಯೂ ಕೃಷ್ಣ ದೇವಾಲಯದ ವಿವರಗಳಿವೆ. ಇನ್ನುಈ ಕುರಿತು ದ ಕ್ವಿಂಟ್‌  ಬಿಎಪಿಎಸ್‌ ದೇವಾಲಯದ ಆಡಳಿತ ಮಂಡಳಿಗೆ ಮೇಲ್‌ ಮಾಡಿ ಮಾಹಿತಿಯನ್ನು ಕೇಳಿದೆ. ಈ ವೇಳೆ ಅವರು ಇದು ಯುಎಇನಲ್ಲಿ ನಿರ್ಮಾಣವಾದ ಮೊದಲ ದೇವಸ್ಥಾನವಲ್ಲ ಎಂದು ಉತ್ತರಿಸಿದ್ದಾರೆ. ಆದ್ದರಿಂದ, ಯುಎಇನಲ್ಲಿ ಬಿಎಪಿಎಸ್‌ ದೇವಾಲಯವು ಮೊದಲು ನಿರ್ಮಾಣಗೊಂಡ ಹಿಂದೂ ದೇವಾಲಯವಲ್ಲ ಮತ್ತು ಈ ಕುರಿತು ಸ್ವತಃ ಕೇಂದ್ರ ಬಿಜೆಪಿ ಸರ್ಕಾರವೇ ಸುಳ್ಳು ಹೇಳಿರುವುದು ಸಾಬೀತಾಗಿದೆ.


ಇದನ್ನೂ ಓದಿ : Fact Check: ಮುಜರಾಯಿ ಇಲಾಖೆಯ 450 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಜೇಬಿಗಿಳಿಸಿಕೊಂಡಿದೆ ಎಂಬುದು ಸುಳ್ಳು


ವಿಡಿಯೋ ನೋಡಿ : Fact Check: ಮುಜರಾಯಿ ಇಲಾಖೆಯ 450 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಜೇಬಿಗಿಳಿಸಿಕೊಂಡಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *