Fact Check | ಪ್ರಧಾನಿ ಮೋದಿ ಪ್ರತಿಕೃತಿಯನ್ನು ಟ್ರ್ಯಾಕ್ಟರ್‌ಗೆ ಕಟ್ಟಿ ಹಾಕಿರುವ ಚಿತ್ರಕ್ಕೂ ರೈತರ ಪ್ರತಿಭಟನೆಗೂ ಸಂಬಂಧವಿಲ್ಲ

“ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ಟ್ರ್ಯಾಕ್ಟರ್‌ಗೆ ಕಟ್ಟಿ ಹಾಕಿ ರೈತರು ಹೇಗೆ ವಿಕೃತಿ ಮೆರೆದಿದ್ದಾರೆಂದು, ಕೇವಲ ಇಷ್ಟು ಮಾತ್ರವಲ್ಲ ಇವರು ಪ್ರಧಾನಿ ಮೋದಿ ಫೋಟೋಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ್ದಾರೆ. ಜೊತೆಗೆ ಖಲಿಸ್ತಾನಿ ಧ್ವಜವನ್ನು ಪ್ರದರ್ಶಿಸಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ.

ಫ್ಯಾಕ್ಟ್‌ ಚೆಕ್‌ 

ಇಲ್ಲಿ ರೈತರನ್ನು ದೇಶದ್ರೋಹಿಗಳಾಗಿ ಬಿಂಬಿಸಲು ಬಲಪಂಥೀಯ ಪ್ರೊಪಗೆಂಡ ಹೊಂದಿರುವ ವ್ಯಕ್ತಿಗಳು ಪ್ರಯತ್ನಿಸುತ್ತಿರುವುದು ಆಗಾಗ ಸಾಮಾಜಿಕ ಜಾಲತಾಣಲ್ಲಿ ಸಾಬೀತಾಗುತ್ತಲೇ ಇದೆ. ಮತ್ತೊಂದು ಕಡೆ ರೈತರ ಹೋರಾಟದಲ್ಲಿ ಖಲಿಸ್ತಾನಿಗಳ ಪಾತ್ರ ಇದೆ ಎಂದು ಈ ಹಿಂದಿನಿಂದಲೂ ಬಿಜೆಪಿ ಆರೋಪಿಸುತ್ತಲೇ ಇದೆ. ಆದರೆ ಖಲಿಸ್ತಾನಿಗಳ ಬೆಂಬಲ ಇದ್ದಿದ್ದೂ ನಿಜವೇ ಆದರೆ ಇನ್ನೂ ಯಾಕೆ ಖಲಿಸ್ತಾನಿಗಳ ಬಂಧನವನ್ನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಲ್ಲ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರ ನೀಡಿಲ್ಲ.

ಇನ್ನು ವೈರಲ್‌ ಆಗಿರುವ ವಿಡಿಯೋ ಕೂಡ ಅಷ್ಟೆ ಈ ವಿಡಿಯೋಗೂ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಯಾವುದೇ ರೀತಿಯಾದ ಸಂಬಂಧವಿಲ್ಲ.ವೈರಲ್‌ ಆಗುತ್ತಿರುವ ವಿಡಿಯೋ ಅಮೆರಿಕಾಗೆ ಸಂಬಂಧಿಸಿದ್ದಾಗಿದೆ. ವಿಡಿಯೋದಲ್ಲಿನ ಕೆಲವೊಂದು ಫೋಟೋಗಳನ್ನು ಬಳಸಿಕೊಂಡ ಮೂಲ ವಿಡಿಯೋನಿಂದ ಹೊಸದಾಗಿ ವಿಡಿಯೋ  ತಯಾರಿಸಲಾಗಿದೆ.

ಇನ್ನು ಈ  ವಿಡಿಯೋದಲ್ಲಿ ಪಂಜಾಬಿ ಭಾಷೆ ಮಾತನಾಡುತ್ತಿರುವ ವ್ಯಕ್ತಿ ಪ್ರಧಾನಿ ಮೋದಿ ಪ್ರತಿಕ್ರಿತಿ ತೋರಿಸುತ್ತಾ,  ಮೋದಿ ನಮ್ಮ ರೋಟಿ ಕಿತ್ತುಕೊಂಡಿದ್ದಾರೆ, ನಮ್ಮ ಬದುಕು ಕಿತ್ತುಕೊಂಡಿದ್ದಾರೆ ಎಂದು ಹೇಳಿದ್ದಾನೆ. ಈ ಧ್ವನಿಯ ಕುರಿತು ಪರಿಶೀಲನೆ ನಡೆಸಿದಾಗ ಇದು ಎಡಿಟ್‌ ಮಾಡಿದ ಧ್ವನಿಯಾಗಿದ್ದು, ಅದನ್ನು ಈ ವಿಡಿಯೋಗೆ ಸೇರಿಸಲಾಗಿದೆ ಎಂಬುದು ತಿಳಿದು ಬಂದಿದೆ.  ಹೀಗಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಇದೊಂದು ನಕಲಿ ವಿಡಿಯೋ ಎಂಬುದು ಸಾಭೀತಾಗಿದೆ.


ಇದನ್ನೂ ಓದಿ :Fact Check: ಮುಜರಾಯಿ ಇಲಾಖೆಯ 450 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಜೇಬಿಗಿಳಿಸಿಕೊಂಡಿದೆ ಎಂಬುದು ಸುಳ್ಳು


ವಿಡಿಯೋ ನೋಡಿ :Fact Check: ಮುಜರಾಯಿ ಇಲಾಖೆಯ 450 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಜೇಬಿಗಿಳಿಸಿಕೊಂಡಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *