Fact Check | ಇವರು ಷಹಜಹಾನ್ ಅವರ ಪತ್ನಿ ಮುಮ್ತಾಜ್ ಅಲ್ಲ, ಭೂಪಾಲ್‌ನ ಮೂರನೇ ಷಹಜಹಾನ್ ಬೇಗಂ

“ಈ ಫೋಟೋ ಷಹಜಹಾನ್‌ನ ಪತ್ನಿ ಮುಮ್ತಾಜ್ ಮಹಲ್ ಅವರದ್ದು” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಸಲಿಗೆ ಈ ಫೋಟೋ ನೋಡಿದವರು ಇದು ನಿಜವಾಗಿಯೂ ಷಹಜಹಾನ್‌ ಪತ್ನಿ ಮುಮ್ತಾಜ್‌ಳದ್ದೇ ಎಂದು ನಂಬಿಕೊಂಡಿದ್ದಾರೆ. ಆದರೆ ಈ ಫೋಟೋವಿನ ಅಸಲಿಯತ್ತೇ ಬೇರೆಯದಿದೆ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಫೋಟೋವನ್ನು ಪರಿಶೀಲಿಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿತು ಈ ವೇಳೆ ಹಲವು ಫೋಟೋಗಳು ಕಂಡು ಬಂದಿದ್ದ ಅದರಲ್ಲಿ  ಭೂಪಾಲ್‌ನ ಬೇಗಂ ಸುಲ್ತಾನ್‌ ಶಹಜಹಾನ್‌ (1872) ಎಂದು ಉಲ್ಲೇಖವಾಗಿತ್ತು. ಇನ್ನು ಇದೇ ಫೋಟೋ ರಾಯಲ್‌ ಕಲೆಕ್ಷನ್‌ ಟ್ರಸ್ಟ್‌ ಎಂಬ ವೆಬ್‌ಸೈಟ್‌ನಲ್ಲಿ ಕೂಡ ಕಂಡು ಬಂದಿದೆ.

ಈ ಫೋಟೋವನ್ನು ರಾಣಿ ವಿಕ್ಟೋರಿಯಾಳ ಕಿರಿಯ ಮತ್ತು ವೇಲ್ಸ್‌ನ ಯುವರಾಜನಾಗಿದ್ದ ಪುತ್ರ ಆಲ್ಬರ್ಟ್‌ ಎಡ್ವೆರ್ಡ್‌ ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಭಾರತಕ್ಕೆ ಪ್ರವಾಸ ಕೈಗೊಂ ಸಂದರ್ಭದಲ್ಲಿ ಈ ಫೋಟೋವನ್ನು ತೆಗೆದಿದ್ದ ಎಂದು ರಾಯಲ್‌ ಕಲೆಕ್ಷನ್‌ ಟ್ರಸ್ಟ್‌ ವೆಬ್‌ಸೈಟ್‌ನಲ್ಲಿ ಉಲ್ಲೇಖವಾಗಿದೆ. ಇದರ ಜೊತೆಗೆ ಈ ಫೋಟೋ ಕುರಿತ ಸಂಪೂರ್ಣ ಮಾಹಿತಿಯನ್ನು ಕೂಡ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

ಇನ್ನು ಭೂಪಾಲ್‌ನ್ನು 1819 ರಿಂದ 1926ರವರೆಗೆ ನಾಲ್ಕು ಜನ ಬೇಗಂಗಳು (ರಾಣಿಯರು) ಆಳ್ವಿಕೆಯನ್ನು ನಡೆಸಿದ್ದಾರೆ. ಆ ನಾಲ್ವರು ಬೇಗಂರಲ್ಲಿ ಮೂರನೆಯವರು ಷಹಜಹಾನ್‌ ಬೇಗಂ. ಇವರ ಕಾಲಮಾನ 1838 ರಿಂದ 1901 ಆಗಿದೆ 1875ರಲ್ಲಿ ಆಲ್ಬರ್ಟ್‌ ಎಡ್ವೆರ್ಡ್‌ ಈ ಫೋಟೋವನ್ನು ತೆಗೆದಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು ವೈರಲ್‌ ಪೋಸ್ಟ್‌ನಲ್ಲಿ ಈಕೆಯನ್ನು ಷಹಜಹಾನ್‌ನ ಪತ್ನಿ ಮುಮ್ತಾಜ್‌ ಎಂದು ಉಲ್ಲೇಖಿಸಿ ಸುಳ್ಳು ಹರಡಲಾಗುತ್ತಿದೆ. ಆದರೆ ವಾಸ್ತವದಲ್ಲಿ ಮುಮ್ತಾಜ್‌ಳ ಕಾಲಮಾನ 1593 ರಿಂದ 1631 ಆಗಿದೆ. ಹಾಗಾಗಿ ವೈರಲ್‌ ಆಗುತ್ತಿರುವ ಪೋಸ್ಟ್‌ಗೂ ಷಹಜಹಾನ್‌ ಪತ್ನಿ ಮುಮ್ತಾಜ್‌ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಮತ್ತು ಸುಳ್ಳು ಮಾಹಿತಿಯೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ : Fact Check: ಬಿಜೆಪಿ ಕೌನ್ಸಿಲರ್‌ ಪೋಲಿಸರನ್ನು ತಳಿಸಿದ ವಿಡಿಯೋವನ್ನು ಕಾಂಗ್ರೆಸ್ ಶಾಸಕ ಎಂದು ಹಂಚಿಕೆ


ವಿಡಿಯೋ ನೋಡಿ : Fact Check: ಬಿಜೆಪಿ ಕೌನ್ಸಿಲರ್‌ ಪೋಲಿಸರನ್ನು ತಳಿಸಿದ ವಿಡಿಯೋವನ್ನು ಕಾಂಗ್ರೆಸ್ ಶಾಸಕ ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *