Fact Check: ಬಿಜೆಪಿ ಕೌನ್ಸಿಲರ್‌ ಪೋಲಿಸರನ್ನು ತಳಿಸಿದ ವಿಡಿಯೋವನ್ನು ಕಾಂಗ್ರೆಸ್ ಶಾಸಕ ಎಂದು ಹಂಚಿಕೆ

ಇತ್ತೀಚೆಗೆ ಹಳೆಯ ವಿಡಿಯೋಗಳನ್ನು ಉದ್ದೇಶವೂರ್ವಕವಾಗಿ ತಪ್ಪಾಗಿ ಅರ್ಥೈಸಿ ಹಂಚಿಕೊಳ್ಳಲಾಗುತ್ತಿದೆ. ಲೋಕಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆ ಕೆಲವು ರಾಜಕೀಯ ಪಕ್ಷದ ಮುಖಂಡರು ತಮ್ಮ ವಿರುದ್ದ ಪಕ್ಷದವರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.

ಈಗ “ಕಾಂಗ್ರೆಸ್ ಶಾಸಕ ಅನಿಲ್ ಉಪಾಧ್ಯಾಯ ಅವರ ಈ ಕ್ರಮದ ಬಗ್ಗೆ ನೀವು ಏನು ಹೇಳುತ್ತೀರಿ? ಈ ವೀಡಿಯೊಗಳನ್ನು ಎಷ್ಟು ವೈರಲ್ ಮಾಡಿ ಎಂದರೆ ಇಡೀ ಭಾರತವು ಅವುಗಳನ್ನು ನೋಡಬಹುದು. ಕಾಂಗ್ರೆಸ್‌ ಗೂಂಡಾಗಳೇ, ಈ ಗೂಂಡಾ ಶಾಸಕನನ್ನು ಈಗ ಏನು ಮಾಡುತ್ತೀರಿ? ಎಂದು ಪ್ರತಿಪಾದಿಸಿ ವ್ಯಕ್ತಿಯೊಬ್ಬರು ಪೋಲಿಸ್ ಅಧಿಕಾರಿಯೊಬ್ಬರನ್ನು ಥಳಿಸುವ ವಿಡಿಯೋವನ್ನು ಹಲವಾರು ಜನರು ಹಂಚಿಕೊಳ್ಳುತ್ತಿದ್ದಾರೆ.

ದೆಹಲಿ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈಶಾಲಿ ಪೊದ್ದಾರ್ ಸಹ ಈ ಆರೋಪವನ್ನು ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್‌: ಈ ವೈರಲ್ ವಿಡಿಯೋ 18 ಅಕ್ಟೋಬರ್ 2018ರಲ್ಲಿ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಮೀರತ್‌ನ ವಾರ್ಡ್ ಸಂಖ್ಯೆ 40ರ ಬಿಜೆಪಿ ಕೌನ್ಸಿಲರ್ ಮನೀಶ್ ಕುಮಾರ್ ಅವರ ಹೋಟೆಲ್‌ಗೆ ಮಹಿಳಾ ವಕೀಲರೊಂದಿಗೆ ಬಂದಿದ್ದ ಸಬ್ ಇನ್ಸ್ಪೆಕ್ಟರ್ ಅವರು ಊಟ ತಡವಾದ ಕಾರಣಕ್ಕೆ ಪರಿಚಾರಕನೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ನಂತರ ಅಲ್ಲಿಗೆ ಧಾವಿಸಿದ ಬಿಜೆಪಿ ಕೌನ್ಸಿಲರ್ ಮನೀಶ್ ಮತ್ತು ಸಬ್ ಇನ್ಸ್ಪೆಕ್ಟರ್ ನಡುವೆ ಮಾತಿನ ಚಕಮಕಿ ನಡೆದು ಕೌನ್ಸಿಲರ್ ಸಬ್ ಇನ್ಸ್ಪೆಕ್ಟರ್ ಅವರಿಗೆ ಥಳಿಸಿದ್ದಾರೆ.

ಸಬ್ ಇನ್ಸ್ಪೆಕ್ಟರ್ ಮತ್ತು ಮಹಿಳಾ ವಕೀಲೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದರು ಹಾಗಾಗಿ ನಾನು ಥಳಿಸಿದೆ ಎಂದು ಮನೀಶ್ ಕುಮಾರ್ ಪೋಲಿಸರಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆಯ ಕುರಿತು ಇಂಡಿಯಾ ಟಿವಿ ಮತ್ತು ಎಎನ್‌ಐ ವರದಿ ಮಾಡಿವೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 395 ಮತ್ತು 354 ರ ಅಡಿಯಲ್ಲಿ ಮುನೀಶ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಮೀರತ್ ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ ಸದ್ಯ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕಾಂಗ್ರೆಸ್ ಶಾಸಕ ಅನಿಲ್ ಉಪಾಧ್ಯಾಯ ಅವರದ್ದಾಗಿರದೆ ಬಿಜೆಪಿ ಕೌನ್ಸಿಲರ್ ಮನೀಶ್ ಕುಮಾರ್ ಅವರದಾಗಿದೆ. 


ಇದನ್ನು ಓದಿ: Fact Check | ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊವನ್ನು ದೆಹಲಿ ರೈತರ ಮೆರವಣಿಗೆಯ ದೃಶ್ಯಗಳೆಂದು ಹಂಚಿಕೆ


ವಿಡಿಯೋ ನೋಡಿ: Fact Check: ಪಶ್ಚಿಮ ಬಂಗಾಳದ ಹಿಂದೂ ದಂಪತಿಗಳ ವಿಡಿಯೋ ಎಂದು ಬಿಹಾರದ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *