Fact Check | ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊವನ್ನು ದೆಹಲಿ ರೈತರ ಮೆರವಣಿಗೆಯ ದೃಶ್ಯಗಳೆಂದು ಹಂಚಿಕೆ

“ಇದು ದೆಹಲಿ ಚಲೋ ಪ್ರತಿಭಟನೆಯಲ್ಲಿ ಸೆರೆಯಾದ ಬೃಹತ್ ಸಭೆಯ ದೃಶ್ಯಗಳು. ಈ ಲಕ್ಷಾಂತರ ಜನ ರೈತರು ದೆಹಲಿಯ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದರಿಂದ ದೆಹಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.” ಎಂದು ರೈತ ಹೋರಾಟಕ್ಕೆ ಸಂಬಂಧಿಸಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ರೈತ ಹೋರಾಟ ಆರಂಭವಾದಗಿನಿಂದ ಒಂದಲ್ಲ ಒಂದು ರೀತಿಯ ಸುಳ್ಳು ಸುದ್ದಿಗಳನ್ನು ರೈತರ ಹೋರಾಟದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬೋದಕ್ಕೆ ಪ್ರಾರಂಭ ಮಾಡಲಾಗಿದೆ. ಇದಿಗ ಅಂತಹದ್ದೇ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ರೈತರು ವ್ಯಾಪಕವಾಗಿ ದೆಹಲಿಯ ಕಡೆಗೆ ಬರುತ್ತಿದ್ದಾರೆ. ಇದರಿಂದ ದೆಹಲಿಗೆ ಹಲವು ರೀತಿಯಾದ ಸಮಸ್ಯೆಗಳು ಉಂಟಾಗಲಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹಾಗಾಗದರೆ ಆ ವಿಡಿಯೋದ ಮರ್ಮವೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ನೋಡೋಣ.

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋವನ್ನು ಮೊದಲಿಗೆ ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿತು. ಬಳಿಕ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಇದೇ ರೀತಿಯ ಹಲವು ಫೋಟೋಗಳು ಕಂಡು ಬಂದಿವೆ. ಇನ್ನು ವೈರಲ್‌ ಆಗಿರುವ ವಿಡಿಯೋ ಅಸ್ಪಷ್ಟವಾಗಿ ಕಂಡು ಬಂದಿದ್ದು, ಮೂಲ ವಿಡಿಯೋ ಎಲ್ಲಿಯದ್ದು ಎಂಬ ಬಗ್ಗೆ ಮಾಹಿತಿ ಲಭ್ಯವಾಯಿತು.

ಈ ವಿಡಿಯೋ ಕೀ ಫ್ರೇಮ್‌ಗೆ ಸಂಬಂಧ ಪಟ್ಟಂತೆ ಪತ್ರಿಕೆಯೊಂದರ ವರದಿಯೊಂದು ಕಂಡು ಬಂದಿದ್ದು ಆ ವರದಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಯುಟ್ಯಬರ್‌ ಬಾನಾ ಸಿಧು ಅವರ ಬಂಧನವಾಗಿರುದನ್ನು ಖಂಡಿಸಿ ಬೃಹತ್‌ ಪ್ರತಿಭಟನೆ ಎಂದು  ಉಲ್ಲೇಖವಾಗಿದೆ. ಇದೇ ವರದಿಯಲ್ಲಿ ಈ ಪ್ರತಿಭಟನೆಯ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ವಾಸ್ತವದಲ್ಲಿ ರೈತರ ಪ್ರತಿಭಟನೆ ಆರಂಭವಾಗಿದ್ದು 13 ಫೆಬ್ರವರಿ 2024 ರಂದು, ಆದರೆ ಈ ವಿಡಿಯೋ ಇದೇ ಜನವರಿ 29 ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಇವೆ. ಜೊತೆಗೆ ವಿವಿಧ ಪತ್ರಿಕೆಗಳು ಮತ್ತು ಡಿಜಿಟಲ್‌ ಮಾಧ್ಯಮಗಳ ಜನವರಿ 30ರಂದೇ  ಈ ಕುರಿತು ವರದಿಯನ್ನು ಮಾಡಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೀಡಿಯೊ ಮತ್ತು ದೆಹಲಿ ಚಲೋ ಪ್ರತಿಭಟನೆಯ ನಡುವೆ ಯಾವುದೇ ಸಂಬಂಧವಿಲ್ಲ. ಮತ್ತು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನೂ ಓದಿ : Fact Check: ನೀರು ಕುಡಿದ ಕಾರಣಕ್ಕೆ ದಲಿತ ಹುಡುಗರ ಹಲ್ಲೆ ನಡೆದಿರುವುದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಎಂದು ಸಾಭೀತಾಗಿಲ್ಲ


ಈ ವಿಡಿಯೋ ನೋಡಿ : Fact Check: ನೀರು ಕುಡಿದ ಕಾರಣಕ್ಕೆ ದಲಿತ ಹುಡುಗರ ಹಲ್ಲೆ ನಡೆದಿರುವುದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಎಂದು ಸಾಭೀತಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *