ಬಿಹಾರದಲ್ಲಿ ಬೈಕ್‌ನಲ್ಲಿ ಬಂದ ಮಹಿಳೆಯ ಮೇಲೆ ಪುರುಷರ ಗುಂಪು ಲೈಂಗಿಕ ದೌರ್ಜನ್ಯ ನಡೆಸಿದ ಆಘಾತಕಾರಿ ವೀಡಿಯೊ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಇದು ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ಎಂದು ಸುಳ್ಳು ಹೇಳಿಕೆಯೊಂದಿಗೆ, ಹಿಂದೂ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಮುಸ್ಲಿಮರು ಎಂದು ಹೇಳಲಾಗುತ್ತಿದೆ.
“ಪಶ್ಚಿಮ ಬಂಗಾಳದ ಮುಸ್ಲಿಮರು ಹಿಂದೂ ದಂಪತಿಗಳು ಹೊಲ ಗದ್ದೆ ತೋಟಗಳ ಕಡೆ ಹೋದಾಗ ಈ ರೀತಿ ವರ್ತನೆ ಮಾಡುತ್ತಿದ್ದಾರೆ, ನಿಮ್ಮ ಬಂಗಾಳದ ಮುಸ್ಲಿಂ ಯುವಕರು ಈಗಲಾದರೂ ಹಿಂದುಗಳು ನರೇಂದ್ರ ಮೋದಿ ಈ ದೇಶಕ್ಕೆ ಯಾಕಿರಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಿ, ನರೇಂದ್ರ ಮೋದಿ ಮತ್ತು ಆದಿತ್ಯನಾಥ್ ಇರುವಾಗಲೇನೆ ಈ ರೀತಿ, ಮುಂದೆ?”ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರಾದ ಶೇಖ್ ಷಹಜಹಾನ್, ಶಿಬ್ ಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ಅವರು ಮಹಿಳೆಯರ ಮೇಲೆ ನಡೆಸಿದ ಹಿಂಸಾಚಾರ ಮತ್ತು ಲೈಂಗಿಕ ದೌರ್ಜನ್ಯದ ವ್ಯಾಪಕ ಆರೋಪಗಳ ನಡುವೆ ಈ ವೀಡಿಯೊ ಮತ್ತೆ ಕಾಣಿಸಿಕೊಂಡಿದೆ. ಟಿಎಂಸಿ ನಾಯಕರು ಅಕ್ರಮ ಭೂ ಕಬಳಿಕೆ ಮತ್ತು ಮೀನು ಸಾಕಣೆಗಾಗಿ ಅವರನ್ನು ‘ಭೇರಿ’ಗಳಾಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ದಕ್ಷಿಣ ಬಂಗಾಳದ ದ್ವೀಪ ಗ್ರಾಮವಾದ ಸಂದೇಶ್ಖಾಲಿಯಲ್ಲಿ ಪಕ್ಷದ ಸದಸ್ಯರು ತಮ್ಮನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪ್ರತಿಭಟಿಸಲು ಮಹಿಳೆಯರು ಬೀದಿಗಿಳಿದಿದ್ದಾರೆ. ಹಜ್ರಾ ಮತ್ತು ಸರ್ದಾರ್ ಅವರನ್ನು ಬಂಧಿಸಲಾಗಿದ್ದರೂ, ಶಹಜಹಾನ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಫೆಬ್ರವರಿ 26 ರಂದು ಕಲ್ಕತ್ತಾ ಹೈಕೋರ್ಟ್ ಏಳು ದಿನಗಳಲ್ಲಿ ಶಹಜಹಾನ್ ಅವರನ್ನು ಬಂಧಿಸುವಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ನಿರ್ದೇಶನ ನೀಡಿತು.
ಈಗ ಈ ಘಟನೆ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದ್ದಾಗಿದೆ. ಮಮತಾ ಬ್ಯಾನರ್ಜಿಯವರ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಈ ಮೂಲಕ ದೂರಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ಇದು 27 ಸೆಪ್ಟೆಂಬರ್ 2021ರಲ್ಲಿ ಬಿಹಾರದ ಸಾರನ್ ಜಿಲ್ಲೆಯ ದರಿಯಾಪುರ್ ಪೋಲಿಸ್ ಠಾಣಾ ವ್ಯಾಪ್ತಿಯ ಸಮಂಚಕ್ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ದರಿಯಾಪುರ್ ರೈಲ್ವೆ ವರ್ಕ್ ಶಾಪ್ ನಿಂದ ದರಿಹರಾ ಚೌವಾರ್ ಗೆ ಹೋಗುವ ರಸ್ತೆಯಲ್ಲಿ ಮಹಿಳೆಯನ್ನು ಹಿಂಬಾಲಿಸಿದ ಕೆಲವು ಕಿಡಿಗೇಡಿಗಳು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ನ್ಯೂಸ್ ವಲ್ಡ್ ಇಂಡಿಯಾ ಈ ಕುರಿತು ವರದಿ ಮಾಡಿದ್ದು, ಈ ಪ್ರಕಾರ, ಛಾಪ್ರಾದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಪುರುಷರ ಗುಂಪು ಮಹಿಳೆಯನ್ನು ಹಿಂಬಾಲಿಸಿ ದೈಹಿಕವಾಗಿ ಹಲ್ಲೆ ನಡೆಸಿದೆ ಎಂದು ತಿಳಿಸಿದ್ದಾರೆ.
ಲಾಲನ್ ಟಾಪ್ ವರದಿಯ ಪ್ರಕಾರ, ಈ ಘಟನೆ ಸರನ್ ಜಿಲ್ಲೆಯ ದರಿಯಾಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದರಿಯಾಪುರ್ ರೈಲ್ವೆ ವರ್ಕ್ ಶಾಪ್ ನಿಂದ ದರಿಹರಾ ಚೌವಾರ್ ಗೆ ಹೋಗುವ ರಸ್ತೆಯಲ್ಲಿ ಮಹಿಳೆಯನ್ನು ಹಿಂಬಾಲಿಸಲಾಗಿದೆ ಎಂದು ತಿಳಿಸಲಾಗಿದೆ ಎಂದು ತಿಳಿಸಿದೆ.
ನವಭಾರತ್ ಟೈಮ್ಸ್ ವರದಿಯ ಪ್ರಕಾರ, ಆರು ಆರೋಪಿಗಳು ಅಕಿಲ್ಪುರದ ಗುಡ್ಡು ರಾಯ್, ಅಮೋದ್ ರಾಯ್, ರಾಕೇಶ್ ಕುಮಾರ್ ಮತ್ತು ಧರ್ಮೇಂದ್ರ ಕುಮಾರ್, ಅರವಿಂದ್ ಕುಮಾರ್ ಮತ್ತು ನಿತೀಶ್ ಕುಮಾರ್ ಸಮಂಚಕ್ ಗ್ರಾಮದವರು. ಅವರಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಈ ಘಟನೆ ಸೆಪ್ಟೆಂಬರ್ 27, 2021 ರಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದ್ದರಿಂದ ವೈರಲ್ ವಿಡಿಯೋ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿರದಾಗಿರದೆ ಬಿಹಾರಕ್ಕೆ ಸಂಬಂದಿಸಿರುವುದಾಗಿದೆ ಮತ್ತು ಪರಾಧಿಗಳೆಲ್ಲ ಹಿಂದುಗಳೇ ಹೊರತು ಮುಸ್ಲೀಮರಲ್ಲ.
ಇದನ್ನು ಓದಿ: Fact Check | ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊವನ್ನು ದೆಹಲಿ ರೈತರ ಮೆರವಣಿಗೆಯ ದೃಶ್ಯಗಳೆಂದು ಹಂಚಿಕೆ
ವಿಡಿಯೋ ನೋಡಿ: Fact Check: ನೀರು ಕುಡಿದ ಕಾರಣಕ್ಕೆ ದಲಿತ ಹುಡುಗರ ಹಲ್ಲೆ ನಡೆದಿರುವುದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಎಂದು ಸಾಭೀತಾಗಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.