Fact Check: ಬ್ಯಾಂಕ್‌ನ ಹೊರಗೆ ಮಹಿಳೆಯರು  ಕಾಯುತ್ತಿರುವ  ಹಳೆಯ ವೀಡಿಯೋವನ್ನು ಕಾಂಗ್ರೆಸ್‌ನ ಗ್ಯಾರಂಟಿ ಹಣಕ್ಕಾಗಿ ನಿಂತಿದ್ದಾರೆ ಎಂದು ತಪ್ಪಾಗಿ ಹಂಚಿಕೆ

ಕಾಂಗ್ರೆಸ್

ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ಇಂಡಿಯಾ ಒಕ್ಕುಟ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ ಮತ್ತು ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆಗಳನ್ನು ಪರಿಚಯಿಸುವ ಬಗ್ಗೆ ಮಾತನಾಡಿದ್ದರು. ಖಾತೆಗಳಲ್ಲಿ ಜಮಾ ಆಗುತ್ತಿರುವ ಹಣದ ಕುರಿತು ಮಾತನಾಡುವಾಗ, ಉದ್ಯೋಗದ ಜೊತೆಗೆ ಫಲಾನುಭವಿಗಳು ವಾರ್ಷಿಕವಾಗಿ 1 ಲಕ್ಷ ರೂಪಾಯಿಗಳನ್ನು ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು “ಖಾತಾ-ಖಾತ್, ಖಾತಾ-ಖಾತ್, ಖಾತಾ-ಖಾತ್” ಎಂದು ಹಿಂದಿಯಲ್ಲಿ ತಕ್ಷಣವೇ ಪಡೆಯುತ್ತಾರೆ ಎಂದು ರಾಹುಲ್ ಹೇಳಿದ್ದರು. ಇದೇ ಮಹಾಲಕ್ಷ್ಮಿ ಯೋಜನೆಯ ಕುರಿತು ಸೋನಿಯಾ ಗಾಂಧಿಯವರು ಸಹ ಪ್ರಚಾರ ಮಾಡಿದ್ದರು.

ಈಗ ಕಾಂಗ್ರೆಸ್‌ನ ಮಿತ್ರ ಪಕ್ಷ ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ಬಹುಮತವನ್ನು ಪಡೆದುಕೊಂಡಿದೆ, ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಬ್ಯಾಂಕ್‌ಗಳ ಹೊರಗೆ ಸಾಲುಗಟ್ಟಿ ನಿಂತಿರುವ ಮಹಿಳೆಯರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಮತ್ತು ಕಾಂಗ್ರೆಸ್‌ ನೀಡಿದ್ದ ಗ್ಯಾರಂಟಿ ಭರವಸೆಗಳಿಗೆ ಟೀಕಿಸುತ್ತಿದ್ದಾರೆ. ಎಕ್ಸ್‌ನಲ್ಲಿ, “ರಾಹುಲ್ ಗಾಂಧಿಯವರ ‘ಖಟಾಖತ್ ಯೋಜನೆ’ ಅಡಿಯಲ್ಲಿ ತಿಂಗಳಿಗೆ ₹8500 ಪಡೆಯಲು ಅಕ್ಬರ್, ಬಾಬರ್ ಮತ್ತು ಔರಂಗಜೇಬ್ ಅವರ ಕುಟುಂಬದ ಸದಸ್ಯರು ಸರದಿಯಲ್ಲಿ ನಿಂತಿದ್ದಾರೆ” ಎಂದು ಶಿರ್ಷಿಕೆ ನೀಡಿ ಹಂಚಿಕೊಳ್ಳಲಾಗುತ್ತಿದೆ. 

ಫ್ಯಾಕ್ಟ್‌ಚೆಕ್: ಈ ವೈರಲ್ ವೀಡಿಯೋ 2020 ರಲ್ಲಿ ಕೇಂದ್ರ ಸರ್ಕಾರದ ಜನ್ ಧನ್ ಯೋಜನೆಯ ಮಹಿಳಾ ಫಲಾನುಭವಿಗಳು ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಬ್ಯಾಂಕ್‌ಗಳ ಹೊರಗೆ ಸಾಲುಗಟ್ಟಿ ನಿಂತಿದ್ದ ವೀಡಿಯೊ ಇದಾಗಿದೆ.

ಸುದರ್ಶನ್ ನ್ಯೂಸ್‌ನ ಸಂಪಾದಕ ಸುರೇಶ್ ಚವ್ಹಾಂಕೆ ಅವರು ಹಂಚಿಕೊಂಡ 2021 ರ ವೈರಲ್ ವೀಡಿಯೊವನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ, ಬ್ಯಾಂಕಿನ ಹೊರಗೆ ಯುಪಿ ಪರವಾನಗಿ ಪ್ಲೇಟ್ ಮತ್ತು ‘ಗುರು ಗೋಬಿಂದ್ ಸಿಂಗ್ ಪಬ್ಲಿಕ್ ಸ್ಕೂಲ್’ ಎಂದು ಬರೆಯುವ ಬ್ಯಾನರ್‌ನೊಂದಿಗೆ ಬೈಕ್ ನಿಲ್ಲಿಸಿರುವುದು ಕಂಡುಬಂದಿದೆ.

ಇದರಿಂದ ಸುಳಿವು ಪಡೆದು, ನಾವು ಹಿಂದಿಯಲ್ಲಿ ‘ಮುಜಫರ್‌ನಗರ ಬ್ಯಾಂಕ್‌ನ ಹೊರಗೆ ಮುಸ್ಲಿಂ ಮಹಿಳೆಯರ ಗುಂಪು’ ಬಳಸಿ ಹುಡುಕಾಟ ನಡೆಸಿದಾಗ ಏಪ್ರಿಲ್ 20, 2020 ರಂದು ನ್ಯೂಸ್ 18 ಪ್ರಕಟಿಸಿದ ‘ಮುಜಾಫರ್‌ನಗರ ಬ್ಯಾಂಕ್‌ನ ಹೊರಗೆ ಜನಸಂದಣಿಯ ವೀಡಿಯೊ ವೈರಲ್, ಖಾತೆಯಿಂದ ಹಣದ  ತೆಗೆದುಹಾಕಲಾಗುತ್ತಿದೆ ಎಂಬ ವದಂತಿ ವೈರಲ್’ ಎಂಬ ವರದಿಯನ್ನು ನಾವು ಕಂಡುಕೊಂಡಿದ್ದೇವೆ.

(ಹಿಂದಿಯಲ್ಲಿ ಮೂಲ ಪಠ್ಯ: ‘ಮುಜಫರ್‌ನಗರ में बैंक के बाहर भीड़ का वीडियो वायरल, खातों में पैसे वापस जाने की अफवाह’)

ಈ ವರದಿಯು ವೈರಲ್ ವೀಡಿಯೊಗೆ ನಿಖರವಾಗಿ ಹೊಂದಿಕೆಯಾಗುವ ಕೆಲವು ಫಲಾನುಭವಿಗಳು ಬ್ಯಾಂಕಿನ ಹೊರಗೆ ಸಾಲುಗಟ್ಟಿ ನಿಂತಿರುವ ವೀಡಿಯೊವನ್ನು ಹೊಂದಿದೆ.

ವರದಿಯ ಪ್ರಕಾರ, ಜನ್ ಧನ್ ಯೋಜನೆಯ ಫಲಾನುಭವಿಗಳು ತಮ್ಮ ಖಾತೆಯಲ್ಲಿ ಠೇವಣಿ ಇಟ್ಟಿರುವ 500 ರೂ.ಗಳನ್ನು ಹಿಂತೆಗೆದುಕೊಳ್ಳದಿದ್ದರೆ, ಬ್ಯಾಂಕ್‌ಗೆ ಹಿಂತಿರುಗಿಸಲಾಗುವುದು ಎಂಬ ವದಂತಿ ಹಬ್ಬಿದ್ದರಿಂದ. ಇದಕ್ಕಾಗಿಯೇ ಅವರು ತಮ್ಮ ಹಣವನ್ನು ಹಿಂಪಡೆಯಲು ಬ್ಯಾಂಕ್ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ, ಬ್ಯಾಂಕ್ ಅಧಿಕಾರಿಗಳು ಖಾತೆದಾರರ ಹಣವನ್ನು ಹಿಂಪಡೆಯುವುದಿಲ್ಲ ಮತ್ತು ಅವರ ಖಾತೆಗಳಲ್ಲಿ ಉಳಿಯುತ್ತದೆ ಎಂದು ಭರವಸೆ ನೀಡಿದರು.

2020 ರಲ್ಲಿ, ಕೋವಿಡ್ -19 ಅವಧಿಯಲ್ಲಿ ಅನೇಕರು ಎದುರಿಸಿದ ಸವಾಲುಗಳ ನಂತರ ಜನ್ ಧನ್ ಖಾತೆದಾರರು ತಮ್ಮ ಖಾತೆಗಳಲ್ಲಿ ಮೂರು ತಿಂಗಳವರೆಗೆ ರೂ 500 ಸ್ವೀಕರಿಸುತ್ತಾರೆ ಎಂದು ಕೇಂದ್ರ ಸರ್ಕಾರ ಘೋಷಿಸಿತು.

ಇದೇ ರೀತಿಯ ವೀಡಿಯೊ ವರದಿಯನ್ನು 2020 ರಲ್ಲಿ ಸ್ಥಳೀಯ ಸುದ್ದಿ ಔಟ್ಲೆಟ್ RB ನ್ಯೂಸ್ ಸುಮಾರು ಅದೇ ಸಮಯದಲ್ಲಿ YouTube ನಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿ ನೋಡಿ.

ವೈರಲ್ ವೀಡಿಯೊ ಇತ್ತೀಚಿನದಲ್ಲದಿದ್ದರೂ, ಜೂನ್ 5, 2024 ರಂದು ಎಬಿಪಿ ನ್ಯೂಸ್ ಮತ್ತು ಇಂಡಿಯಾ ಟುಡೇ ಪ್ರಕಟಿಸಿದ ಹಲವಾರು ವರದಿಗಳು, ಮಹಾಲಕ್ಷ್ಮಿ ಯೋಜನೆಯಡಿ ಭರವಸೆ ನೀಡಿದ 8,500 ರೂಪಾಯಿಗಳನ್ನು ಪಡೆಯಲು ಲಕ್ನೋದಲ್ಲಿ ಮಹಿಳಾ ಮತದಾರರು ಹೇಗೆ ಕಾಂಗ್ರೆಸ್ ಕಚೇರಿಯ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ವರದಿ ಮಾಡಲಾಗಿದೆ.


ಇದನ್ನು ಓದಿ: ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತಾನು ಭಾಗವಹಿಸಿರಲಿಲ್ಲ ಮತ್ತು ವಿಭಜನೆಗೆ ಒಪ್ಪಿಕೊಂಡೆ ಎಂದು ಹೇಳಿಲ್ಲ


ವೀಡಿಯೋ ನೋಡಿ: ಕುಕ್ಕೆ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಕ್ರಿಶ್ಚಿಯನ್‌ ಅಧಿಕಾರಿ ನೇಮಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *