Fact Check | ಲೋಕಸಭೆ ಚುನಾವಣೆಯಲ್ಲಿ 19,731 ಮತಗಳಿಂದ ಹಲವು ನಾಯಕರು ಸೋತಿದ್ದಾರೆ ಎಂಬುದು ಸುಳ್ಳು

2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳ ಘೋಷಣೆಯ ನಂತರ, ನವನೀತ್ ರಾಣಾ, ಮಾಧವಿ ಲತಾ, ಮತ್ತು ಕನ್ಹಯ್ಯಾ ಕುಮಾರ್ ಸೇರಿದಂತೆ ಹಲವಾರು ಪ್ರಮುಖ ನಾಯಕರ ಸೋಲಿನ ಬಗೆಗಿನ ಪೇಪರ್‌ ಕಟಿಂಗ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಎಲ್ಲಾ ನಾಯಕರು 19,731 ಮತಗಳ ಅಂತರದಿಂದ ಸೋತಿದ್ದಾರೆ ಎಂದು ಈ ಪೇಪರ್‌ ಕಟಿಂಗ್‌ನಲ್ಲಿ ಕಂಡು ಬಂದಿದೆ. ಅದರಲ್ಲೂ ಈ ಎಲ್ಲಾ ನಾಯಕರು ಒಂದೇ ಅಂತರದಲ್ಲಿ ಸೋತಿದ್ದಾರೆ ಎಂದು ಸಾಕಷ್ಟು ಜನ ಅಚ್ಚರಿಯನ್ನು ಕೂಡ ವ್ಯಕ್ತ ಪಡಿಸಿದ್ದಾರೆ.

ಇದೇ ಕಾರಣದಿಂದ ಹಲವು ಮಂದಿ ಈ ಸುದ್ದಿಯನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಕೂಡ ಈ ಪೇಪರ್‌ ಕಟ್ಟಿಂಗ್‌ ಹಂಚಿಕೊಂಡು ವಿವಿಧ ಬರಹಗಳೊಂದಿಗೆ ತಮ್ಮ ಅಭಿಪ್ರಾಯವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಹಾಗಿದ್ದರೆ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೇಪರ್‌ ಕಟ್ಟಿಂಗ್‌ ಕುರಿತು ಪರಿಶೀಲನೆ ನಡೆಸಲು ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು ಈ ವೇಳೆ 05 ಜೂನ್ 2024 ರ ರಾಜಸ್ಥಾನ ಪತ್ರಿಕಾ ಆವೃತ್ತಿಯೊಂದು ಕಂಡು ಬಂದಿದೆ. ಅದು ಇದೇ ಪೇಪರ್‌ ಕಟಿಂಗ್‌ನ ಗ್ರಾಫಿಕ್ ಎಂಬುದು ತಿಳಿದು ಬಂದಿದೆ. ಆದರೆ, ಈ ಎಲ್ಲಾ ನಾಯಕರು 19,731 ಮತಗಳ ಅಂತರದಿಂದ ಸೋತರು ಎಂದು ಮೂಲ ಮೂಲ ಪೇಪರ್‌ ಕಟ್ಟಿಂಗ್‌ನಲ್ಲಿ ಇಲ್ಲ ಎಂಬುದು ಖಚಿತವಾಗಿದೆ. ಮೂಲ ಪೇಪರ್‌ನಲ್ಲಿನ ಮಾಹಿತಿಯ ಪ್ರಕಾರ, ನವನೀತ್ ರಾಣಾ ಮಾತ್ರ 19,731 ಅಂತರದಿಂದ ಸೋತರು ಎಂದಿದೆ. ಇನ್ನುಳಿದ ಇತರ ನಾಯಕರಾದ ಕನ್ಹಯ್ಯಾ ಕುಮಾರ್, ಮಾಧವಿ ಲತಾ ಮತ್ತು ಅಜಯ್ ಕುಮಾರ್ ಗಮನಾರ್ಹವಾಗಿ ದೊಡ್ಡ ಅಂತರದಿಂದ ಸೋತರು. ಎಂಬುದು ತಿಳಿದು ಬಂದಿದೆ.

ಮೂಲ ಮತ್ತು ವೈರಲ್‌ ಪೇಪರ್‌ ಕಟ್ಟಿಂಗ್‌ನಲ್ಲಿನ ಅಂಕಿ ಅಂಶಗಳ ವ್ಯತ್ಯಾಸ
                        ಮೂಲ ಮತ್ತು ವೈರಲ್‌ ಪೇಪರ್‌ ಕಟ್ಟಿಂಗ್‌ನಲ್ಲಿನ ಅಂಕಿ ಅಂಶಗಳ ವ್ಯತ್ಯಾಸ

ಹೈಲೈಟ್ ಮಾಡಿದ ಎಲ್ಲಾ ನಾಯಕರು ಒಂದೇ ಅಂತರದಲ್ಲಿ ಸೋತಂತೆ ಕಾಣುವಂತೆ ವೈರಲ್ ಪೇಪರ್‌ ಕಟಿಂಗ್‌ ಅನ್ನು ಡಿಜಿಟಲ್ ಎಡಿಟ್ ಮಾಡಲಾಗಿದೆ ಎಂದು ತಿಳಿದು ಬಂದಿದ್ದು.ಹೆಚ್ಚಿನ ಮಾಹಿತಿಗಾಗಿ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಪರಿಶೀಲನೆ ನಡೆಸಿತು. ಈ ವೇಳೆ ಈ ಎಲ್ಲಾ ನಾಯಕರು ಒಂದೇ ಅಂತರದಿಂದ ಸೋತಿಲ್ಲ ಎಂಬುದು ಖಚಿತವಾಗಿದೆ.

ಈ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾದ  ಮಾಹಿತಿಯ ಪ್ರಕಾರ, ಅಮರಾವತಿ ಕ್ಷೇತ್ರದಲ್ಲಿ ನವನೀತ್ ರಾಣಾ ಅವರು ತಮ್ಮ ಎದುರಾಳಿಯ ವಿರುದ್ಧ 19,731 ಮತಗಳ ಅಂತರದಿಂದ ಸೋತಿದ್ದಾರೆ. ಅಜಯ್ ಥೇನಿ ಕುಮಾರ್ ಅವರು ಸಮಾಜವಾದಿ ಪಕ್ಷದಿಂದ ತಮ್ಮ ಪ್ರತಿಸ್ಪರ್ಧಿ ವಿರುದ್ಧ 34,329 ಮತಗಳಿಂದ ಸೋಲಿಸಲ್ಪಟ್ಟರು. ಮಾಧವಿ ಅವರು ಅಸಾದುದ್ದೀನ್ ಓವೈಸಿ ವಿರುದ್ಧ 338,087 ಮತಗಳಿಂದ ಸೋತಿದ್ದಾರೆ ಮತ್ತು ಕನ್ಹಯ್ಯಾ ಕುಮಾರ್ ಅವರನ್ನು ಬಿಜೆಪಿಯ ಮನೋಜ್ ತಿವಾರಿ 1,38,778 ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂಬ ನಿಖರ ಅಂಕಿ ಅಂಶಗಳು ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ,  19,731 ಮತಗಳ ಅಂತರದಿಂದ ಹಲವಾರು ನಾಯಕರು ಈ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ ಎಂದು ತೋರಿಸುವ ಪೇಪರ್‌ ಕಟ್ಟಿಂಗ್‌ ನಕಲಿಯಾಗಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿ.


ಇದನ್ನೂ ಓದಿ : Fact Check| ದೇಶದ ಸಂಪತ್ತಿನಲ್ಲಿ ಮುಸ್ಲಿಮರು ಮೊದಲ ಹಕ್ಕುದಾರರಾಗಿದ್ದಾರೆಂದು ಯೋಗಿ ಆದಿತ್ಯನಾಥ್ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *