ಸುತ್ತಲು ಸಮುದ್ರದ ನೀರಿನಿಂದ ಸುತ್ತುವರೆದಿರುವ ಮರಳಿನ ಕಿರಿದಾದ ದ್ವೀಪವನ್ನು ತೋರಿಸುವ ವೀಡಿಯೊ ಒಂದನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದು ಹೀಬ್ರೂ ಪ್ರವಾದಿ ಮೋಸೆಸ್ ಅವನ ಜನರು ಫರೋಹನ ಸೈನ್ಯದಿಂದ ತಪ್ಪಿಸಿಕೊಳ್ಳಲು ಸಹಾಯವಾಗಲೆಂದು ನೀರನ್ನು ಬೇರ್ಪಡಿಸಿದ ಎಂದು ನಂಬಲಾದ ಕೆಂಪು ಸಮುದ್ರದ ಸ್ಥಳ. ಈ ದಾರಿ ವರ್ಷಕ್ಕೆ ಎರಡು ಬಾರಿ ಮಾತ್ರ ಕಾಣಿಸಿಕೊಳ್ಳುತ್ತದೆ. ನಂತರ ಅದೃಶ್ಯವಾಗುತ್ತದೆ” ಎಂದು ಪ್ರತಿಪಾದಿಸಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ಮೊದಲಿಗೆ ನಾವು ಈ ವೈರಲ್ ವೀಡಿಯೋಗೆ ಅನೇಕರು ಇದು ಆಫ್ರಿಕಾ ಮತ್ತು ಏಷ್ಯಾದ ನಡುವಿನ ಕೆಂಪು ಸಮುದ್ರ ಅಲ್ಲ ಇದು ಚೀನಾದ ಚಿತ್ರ ಎಂದು ಮಾಡಿರುವ ಕಮೆಂಟ್‌ಗಳ ಆಧಾರದ ಮೇಲೆ ಗೂಗಲ್ ರಿವರ್ಸ್ ಹುಡುಕಾಟವನ್ನು ನಡೆಸಿದಾಗ ಅಕ್ಟೋಬರ್ 2021 ರಲ್ಲಿ ಡೌಯಿನ್‌ನಲ್ಲಿ (ಟಿಕ್‌ಟಾಕ್‌ನ ಚೀನೀ ಆವೃತ್ತಿ) ಡಿಜಿಟಲ್ ರಚನೆಕಾರರು ಪ್ರಕಟಿಸಿದ “ಮಾಲ್ಡೀವ್ಸ್? ಇಲ್ಲ, ಇದು ಫುಜಿಯಾನ್‌ನ ಡಾಂಗ್‌ಶಾನ್ ದ್ವೀಪದ ಫಿಶ್‌ಬೋನ್ ಸ್ಯಾಂಡ್‌ಬಾರ್ ಆಗಿದೆ. ನಿಮ್ಮ ಪ್ರೀತಿಪಾತ್ರರನ್ನು ಡಾಂಗ್ಶಾನ್ ದ್ವೀಪಕ್ಕೆ ಕರೆತನ್ನಿ.” ಎಂಬ ಶೀರ್ಷಿಕೆಯ ವೀಡಿಯೋ ಲಭ್ಯವಾಗಿದೆ.
ಇದರಿಂದ ಸುಳಿವು ಪಡೆದು, ನಾವು ಮತ್ತಷ್ಟು ಹುಡುಕಿದಾಗ ಮತ್ತು ಈ ಸ್ಥಳವನ್ನು ಪ್ರಚಾರ ಮಾಡುತ್ತಿರುವ ಚೀನೀ ಮಾಧ್ಯಮಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಮತ್ತು ವ್ಲಾಗರ್‌ಗಳು (ಇಲ್ಲಿ ಮತ್ತು ಇಲ್ಲಿ) ಹಲವಾರು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ವರದಿಗಳ ಪ್ರಕಾರ, ಆಗ್ನೇಯ ಚೀನಾದ ಫುಜಿಯಾನ್ ಪ್ರಾಂತ್ಯದ ಡಾಂಗ್‌ಶಾನ್ ಕೌಂಟಿಯ ಕ್ವಿಕ್ಸಿಯಾ ಗ್ರಾಮದಲ್ಲಿ ‘ಮೀನು-ಆಕಾರದ ಮರಳು ದಂಡೆ’ ಎಂದು ಅನುವಾದಿಸುವ ಸ್ಥಳ ಯುಗು ಶಾಝೌ ಆಗಿದೆ. ಮರಳಿನ ದಂಡೆಯು ತನ್ನ ಮೀನಿನ ಮೂಳೆಯಂತಹ ಆಕಾರಕ್ಕಾಗಿ ಜನಪ್ರಿಯ ರಮಣೀಯ ತಾಣವಾಗಿದೆ, ಮತ್ತು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಈ ಸ್ಥಳದ ದೃಶ್ಯಗಳೊಂದಿಗೆ ಗೂಗಲ್ ಅರ್ಥ್‌ನ ವೀಕ್ಷಣೆಯ ಹೋಲಿಕೆಯನ್ನು ಕೆಳಗೆ ನೋಡಬಹುದು.
ಹೆಚ್ಚುವರಿಯಾಗಿ, ಮೋಸೆಸ್ ಕೆಂಪು ಸಮುದ್ರವನ್ನು ಬೇರ್ಪಟ್ಟನೆಂದು ನಂಬಲಾದ ನಿಖರವಾದ ಸ್ಥಳವು ಅನಿರ್ದಿಷ್ಟವಾಗಿದೆ ಮತ್ತು ಪುರಾತತ್ತ್ವಜ್ಞರು ಮತ್ತು ವಿದ್ವಾಂಸರಲ್ಲಿ ಚರ್ಚೆಯ ವಿಷಯವಾಗಿದೆ. ಇದು ಸೂಯೆಜ್ ಕೊಲ್ಲಿಯ ಸಮೀಪದಲ್ಲಿದೆ ಎಂದು ಕೆಲವರು ನಂಬುತ್ತಾರೆ, ಆದರೆ ಇತರರು ಗಲ್ಫ್ ಆಫ್ ಅಕಾಬಾವನ್ನು ಸೂಚಿಸುತ್ತಾರೆ. ಆದಾಗ್ಯೂ, ನಿಖರವಾದ ಸ್ಥಳವನ್ನು ಗುರುತಿಸಲು ಯಾವುದೇ ಖಚಿತವಾದ ಪುರಾತತ್ತ್ವ ಶಾಸ್ತ್ರದ ಪುರಾವೆಗಳಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಚೀನಾದಲ್ಲಿ ಮರಳು ದಂಡೆಯ ದೃಶ್ಯಗಳನ್ನು ಕೆಂಪು ಸಮುದ್ರದ ವಿಭಜನೆಯ ಸ್ಥಳವೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿ: ‘ಪ್ರಧಾನ ಮಂತ್ರಿ ವಿಶ್ವಕರ್ಮ ಉಚಿತ ಹೊಲಿಗೆ ಯಂತ್ರ ಯೋಜನೆ’ಯಡಿಯಲ್ಲಿ ಕೇಂದ್ರ ಸರ್ಕಾರ 15 ಸಾವಿರ ನೀಡಲಿದೆ ಎಂಬುದು ಸುಳ್ಳು
ವೀಡಿಯೋ ನೋಡಿ: ಬೆಂಗಳೂರಿನಲ್ಲಿ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಸ್ಥಾಪಿಸಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.