ಮಹಾರಾಷ್ಟ್ರದ 6 ವರ್ಷದ ಬಾಲಕಿ ಮೇಲಿನ ಅತ್ಯಾಚಾರ-ಕೊಲೆಯ ಆರೋಪಿ ಮುಸ್ಲಿಂ ಅಲ್ಲ

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ 6 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈಯ್ಯಲಾಗಿದೆ. ಆರೋಪಿಯನ್ನು ತಮಗೆ ಒಪ್ಪಿಸಿ ಎಂದು ಜನರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಇದರಿಂದ ಕೆಲವರಿಗೆ ಗಾಯಗಳಾಗಿವೆ. ಈ ವಿಡಿಯೋವನ್ನು ಹಲವಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವರನು, ಆತನ ಹೆಸರು ಹಫೀಸ್ ಬೇಗ್ ಎಂದು ಪ್ರತಿಪಾದಿಸುತ್ತಿದ್ದಾರೆ. ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಈ ಕುರಿತು ಹುಡುಕಿದಾಗ ಜಲಗಾಂವ್ ಪೊಲೀಸರು ಬಂಧಿಸಿರುವ ಅತ್ಯಾಚಾರ ಮತ್ತು ಕೊಲೆ ಆರೋಪಿಯ ಹೆಸರು ಸುಭಾಷ್ ಭಿಲ್ ಆಗಿದೆಯೇ ಹೊರತು  ಹಫೀಜ್ ಬೇಗ್ ಅಲ್ಲ. ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಜಮ್ನೇರ್‌ನ ಚಿಂಚ್‌ಖೇಡಾ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಯ ನಂತರ ಜನಸಮೂಹದಿಂದ ಪೊಲೀಸರು ಗಾಯಗೊಂಡಿರುವಹ ಹಲವು ಸುದ್ದಿ ವರದಿಗಳು ಕಂಡುಬಂದಿವೆ. ಆ ವರದಿಗಳಲ್ಲಿ ಆರೋಪಿಯನ್ನು ಸುಭಾಷ್ ಭಿಲ್ (35) ಎಂದು ಗುರುತಿಸಿಲಾಗಿದ್ದು, ಆತನನ್ನು ಜಲಗಾಂವ್ ಪೊಲೀಸರು ಬಂಧಿಸಿದ್ದಾರೆ.

ದಿ ಏಷ್ಯನ್ ಏಜ್ ಪ್ರಕಾರ, ಜೂನ್ 20, 2024 ರಂದು ಜಲಗಾಂವ್ ಜಿಲ್ಲೆಯಲ್ಲಿ ಅತ್ಯಾಚಾರ ಆರೋಪಿಯ ಸುಭಾಷ್ ಬಿಲ್ ಮೇಲೆ ಜನರು ಹಲ್ಲೆ ನಡೆಸುತ್ತಿದ್ದರು. ಆಗ ಪೊಲೀಸರು ಆರೋಪಿಯನ್ನು ರಕ್ಷಿಸಿ ಬಂಧಿಸಿದ್ದಾರೆ. ಆದರೆ ಈ ವೇಳೆ ಕನಿಷ್ಠ 14 ಪೊಲೀಸರು ಗಾಯಗೊಂಡಿದ್ದಾರೆ. ಕೊಲೆಗೊಳಗಾದ ಅಪ್ರಾಪ್ತ ಬಾಲಕಿ ಜಮ್ನೇರ್‌ನ ಚಿಂಚ್‌ಖೇಡಾ ಗ್ರಾಮದ ಬುಡಕಟ್ಟು ಸಮುದಾಯದವರು ಎಂದು ಗುರುತಿಸಲಾಗಿದೆ. ಆರೋಪಿಗಳು ಸಹ ಅದೇ ಸಮುದಾಯದವರಾಗಿದ್ದು ನೆರೆಹೊರೆಯಲ್ಲಿ ವಾಸಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.

ಆರೋಪಿಗಳು ಜೂನ್ 11 ರಂದು ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾರೆ ಮತ್ತು ಅಲ್ಲಿಂದ ತಲೆಮರೆಸಿಕೊಂಡಿದ್ದರು. ನಂತರ ಅವರನ್ನು ಜಮ್ನೇರ್‌ನಿಂದ 29 ಕಿಮೀ ದೂರದಲ್ಲಿರುವ ಭೂಸಾವಲ್‌ನಿಂದ ಬಂಧಿಸಲಾಯಿತು. ಪೊಲೀಸರು ಸುಭಾಷ್ ಭಿಲ್ ವಿರುದ್ಧ ಐಪಿಸಿಯ ಸೆಕ್ಷನ್ 376 ಮತ್ತು 302 ಮತ್ತು POCSO (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಏಷ್ಯನ್ ಏಜ್ ವರದಿ ಮಾಡಿದೆ.

ಪೊಲೀಸರು ಭಿಲ್‌ನನ್ನು ಕೈಕೋಳ ಹಾಕಿ ಜಮ್ನೇರ್ ಪೊಲೀಸ್ ಠಾಣೆಗೆ ಕರೆತಂದರು. ಆಗ ಸುಮಾರು 300 ಜನರ ಗುಂಪು ಆರೋಪಿಗಳನ್ನು ತಮಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಠಾಣೆಯನ್ನು ಸುತ್ತುವರೆದಿತು. ಹಿಂಸಾಚಾರ ಭುಗಿಲೆದ್ದ ನಂತರ ಹಲವಾರು ಪೊಲೀಸ್ ಅಧಿಕಾರಿಗಳು ಗಾಯಗೊಂಡರು ಎಂದು ಲೇಖನದಲ್ಲಿ ಹೇಳಲಾಗಿದೆ.

ಈ ಪ್ರಕರಣದ ಆರೋಪಿಗಳು ಮತ್ತು ಸಂತ್ರಸ್ತೆ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು ಮತ್ತು ಮುಸ್ಲಿಮರಲ್ಲ ಎಂದು ಜಲಗಾಂವ್ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ.


ಇದನ್ನೂ ಓದಿ; Fact Check: ಬೀದಿ ನಾಟಕದ ವೀಡಿಯೋವನ್ನು ಕೇರಳದಲ್ಲಿ RSS ಬೆಂಬಲಿತ ಮಹಿಳೆಯನ್ನು ಮುಸ್ಲಿಮರು ಹತ್ಯೆ ಮಾಡಿದ್ದಾರೆ ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *