“ಈ ಫೋಟೋ ನೋಡಿ. ಇದು ಮುಸ್ಲಿಂ ಸಾಮಾಜದಲ್ಲಿ ಮಹಿಳೆಯರ ಶೋಚನಿಯ ಪರಿಸ್ಥಿತಿ. ಪತಿಯೊಬ್ಬ ತನ್ನ ಮೂವರು ಪತ್ನಿಯನ್ನು ಹೇಗೆ ಸರಪಳಿಯಲ್ಲಿ ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದಾನೆ ನೋಡಿ. ಈ ರೀತಿಯ ಪರಿಸ್ಥಿತಿ ಭಾರತೀಯ ಮುಸ್ಲಿಂ ಮಹಿಳೆಯರಿಗೂ ಬರುವ ಸಾಧ್ಯತೆ ಇದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಲವ್ ಜಿಹಾದ್‌ಗೆ ಬಲಿಯಾಗುವ ಹಿಂದೂ ಹೆಣ್ಣು ಮಕ್ಕಳಿಗೂ ಇದೇ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದನ್ನು ಎಲ್ಲರಿಗೂ ತಲುಪುವವರೆಗೂ ಶೇರ್ ಮಾಡಿ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
https://twitter.com/INaughtyBuBu/status/1776692672440496366
ಈ ಫೋಟೋದಲ್ಲಿ ಕೂಡ ವ್ಯಕ್ತಿಯೊಬ್ಬ ಬುರ್ಖಾಧಾರಿ ಮಹಳೆಯರನ್ನು ಸರಪಳಿಯಿಂದ ಕರೆದುಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿದೆ. ಈ ಫೋಟೋ ನೋಡಲು ನಿಜವಾದ ಫೋಟೋದಂತೆ ಇರುವುದರಿಂದ ಸಾಕಷ್ಟು ಮಂದಿ ಈ ಫೋಟೋವನ್ನು ಸಾಮಾಜಿಕ ಜಾಲತಾಣದ ತಮ್ಮ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಂಡು ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಈ ಫೋಟೋ ನೋಡಿದ ಹಲವರು ಇದು ನಕಲಿ ಫೋಟೋ ಎಂದು ಹೇಳಿದ್ದಾರೆ. ಹಾಗಿದ್ದರೆ ಈ ಫೋಟೋದ ಹಿಂದಿನ ಸತ್ಯ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
https://twitter.com/ByRakeshSimha/status/1428522738168205315
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಆದರೆ ಈ ಕುರಿತು ಯಾವುದೇ ರೀತಿಯಾದ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ 29 ಮಾರ್ಚ್ 2017 ರಂದು ಈ ವೈರಲ್ ಫೋಟೋಗೆ ಹೋಲಿಕೆಯಾಗುವಂತಹ ಒಂದು ಫೋಟೋ ಮಾರ್ಡನ್ ಡಿಪ್ಲೋಮೆಸಿ ವೆಬ್‌ತಾಣದ ಅಂಕಣದಲ್ಲಿ ಕಂಡು ಬಂದಿದೆ. ಆದರೆ ವೈರಲ್ ಫೋಟೋದಲ್ಲಿ ಇದ್ದಂತ ಸರಪಳಿಗ ಈ ಚಿತ್ರದಲ್ಲಿ ಇರಲಿಲ್ಲ
ಇನ್ನು ಇದೇ ರೀತಿಯಾಗಿ 27 ಆಗಸ್ಟ್ 2017 ರಂದು ಪತಿಗಿಂತ ಪತ್ನಿ ಒಂದು ಹೆಜ್ಜೆ ಮುಂದೆ ಇಡುತ್ತಿದ್ದ ಕಾರಣ ಪತಿ ಪತ್ನಿಗೆ ವಿಚ್ಚೇದನ ನೀಡಿದ್ದಾರೆ ಎಂಬ ವರದಿಯೊಂದಿಗೆ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಆದರೆ ಈ ವರದಿಯಲ್ಲಿ ಈ ಚಿತ್ರವನ್ನು ಸಾಂಕೇತಿಕ ಚಿತ್ರ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಈ ವರದಿಯಲ್ಲಿ ಕೂಡ ಇದು ಸಾಂಕೇತಿಕ ಚಿತ್ರವಾಗಿ ಬಳಕೆಯಾಗಿದೆ.
ಇಲ್ಲಿ ಈ ಚಿತ್ರದ ಕುರಿತು ಇನ್ನಷ್ಟು ಹುಡುಕಿದಾಗ 2011 ರಲ್ಲಿ RabbitMatch.org ಮತ್ತು Wicked Thoughts ಎಂಬ ಎರಡೂ ಬ್ಲಾಗ್‌ಗಳು ಅಫ್ಘಾನಿಸ್ತಾನದಲ್ಲಿನ ಲಿಂಗ ತಾರತಮ್ಯಗಳ ಕುರಿತು ಅಂಕಣ ಬರೆಯಲು ಈ ಚಿತ್ರಗಳನ್ನು ಬಳಸಿಕೊಂಡಿವೆ. ಆದರೆ ಅಲ್ಲೂ ಕೂಡ ಈ ಚಿತ್ರವನ್ನು ಸಾಂಕೇತಿಕವಾಗಿ ಬಳಸಿಕೊಂಡಿರುವುದು ತಿಳಿದು ಬಂದಿದೆ. ಆದರೆ ಈ ಚಿತ್ರದಲ್ಲೂ ಕೂಡ ಸರಪಳಿಗಳು ಇಲ್ಲದಿರುವುದನ್ನು ಗಮನಿಸಿದಾಗ ಇದೊಂದು ಎಡಿಟೆಡ್ ಚಿತ್ರ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಮುಸ್ಲಿಂ ಪುರುಷನೊಬ್ಬ ತನ್ನ ಹೆಂಡತಿಯರನ್ನು ಸರಪಳಿಗಳಿಂದ ಬಿಗಿದು ವಾಕಿಂಗ್ ಕರೆದುಕೊಂಡು ಹೋಗಿದ್ದಾನೆ ಎಂಬ ಫೋಟೋ ಎಡಿಟೆಡ್ ಆಗಿದೆ.
ಇದನ್ನೂ ಓದಿ : Fact Check: ಅಂಜಲಿ ಬಿರ್ಲಾ UPSC ಪರೀಕ್ಷೆಗೆ ಹಾಜಾರಾಗದೇ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ