ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಕುವೈತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಈ ಭೇಟಿಯ ಸಮಯದಲ್ಲಿ ಅವರು ತಮ್ಮ ಉಡುಪಿಗೆ ಹೆಸರುವಾಸಿಯಾದ ಕುವೈತ್‌ನ ‘ರಾಣಿ’ಯನ್ನು ಭೇಟಿಯಾದರು ಎಂದು ಹೇಳಲಾಗುತ್ತಿದೆ. ಅವಳು ಯಾವುದೇ ಮುಸ್ಲಿಂ ದೇಶದ ‘ರಾಣಿ’ಯಂತೆ ಕಾಣುತ್ತಿಲ್ಲ. ಆಕೆ ಬುರ್ಖಾ ಅಥವಾ ಹಿಜಾಬ್ ಅನ್ನು ಧರಿಸಿಲ್ಲ. ಎಲ್ಲ ಮುಸ್ಲಿಂ ಹೆಣ್ಣು ಮಕ್ಕಳಂತೆ ಆಕೆ ನಡೆದುಕೊಂಡಿಲ್ಲ ಎಂದು ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.
ये कुवैत की महारानी है ! देख के कोई युरोपियन देश की नेता लग रही है !
ना कोई बुरका ना कोई जिहाब यही है असली होने की पहचान
और यहां भारत मे नकली मुल्लियों को कॉलेज मे ऑफिस मे बुरका और हिज़ाब चाहिए। pic.twitter.com/JHkHwYWe9K
— अनुभव आर्य (@theAnubhavArya) December 28, 2024
ಫೋಟೋದಲ್ಲಿ ಕೂಡ ಸಾಮಾನ್ಯ ಉಡುಪು ಧರಿಸಿದ ಮಹಿಳೆಯೊಂದಿಗೆ ಪ್ರಧಾನಿ ಮೋದಿ ಅವರು ಕುಳಿತುಕೊಂಡಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್ ಪೋಸ್ಟ್ ನಿಜವೆಂದು ಭಾವಿಸಿ ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ಹಲವರು ಭಾರತದ ಮುಸ್ಲಿಂ ಹೆಣ್ಣು ಮಕ್ಕಳು ಕೂಡ ಇದರಿಂದ ಕಲಿಯಬೇಕಿದೆ. ಭಾರತ ಮುಸಲ್ಮಾನರು ಕೂಡ ಬದಲಾಗಬೇಕಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ರೀತಿಯಲ್ಲಿ ಅಭಿಪ್ರಾಯವನ್ನು ಮೂಡಿಸಿರುವ ವೈರಲ್ ಫೋಟೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
👆
ये कुवैत की महारानी है ! देख के कोई युरोपियन देश की नेता लग रही है !
*ना कोई बुरका ना कोई जिहाब यही है असली होने की पहचान*
और यहा भारत मे नकली बुल्लियों को कॉलेज मे ऑफिस मे बुरका और हिज़ाब चाहिए pic.twitter.com/KY7FD27wQJ
— योगी योगेश सिंघल धर्मसेना🚩🚩 (@Yogi__1967) December 29, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋವಿನ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ಫೋಟೋವಿಗೆ ಸಂಬಂಧಿಸಿದಂತೆ ನರೇಂದ್ರ ಮೋದಿಯವರ ಅಧಿಕೃತ X ಹ್ಯಾಂಡಲ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ Instagram ಹ್ಯಾಂಡಲ್‌ನಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿರುವುದು ಕಂಡು ಬಂದಿದೆ.
Met HH Shaikha AJ Al-Sabah in Kuwait. She has distinguished herself for her passion towards Yoga and fitness. She has established her own Yoga and wellness studio, which is quite popular in Kuwait. We talked about ways to make Yoga more popular among the youth. pic.twitter.com/0pjMxWwUDe
— Narendra Modi (@narendramodi) December 22, 2024
ಇವುಗಳಲ್ಲಿ ನೀಡಿರುವ ಮಾಹಿತಿಯ ಪ್ರಕಾರ “ಇದರಲ್ಲಿ, ಪ್ರಧಾನಿ ನರೇಂದ್ರ ಮೋದಿ ಕುವೈತ್‌ನ ಶೇಖಾ ಅಲ್-ಸಬಾಹ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.” ಶೇಖಾ ಅಲ್-ಸಬಾಹ್ ಯೋಗ ಮತ್ತು ಫಿಟ್‌ನೆಸ್‌ಗಾಗಿ ತನ್ನ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾಳೆ ಮತ್ತು ತನ್ನದೇ ಆದ ಯೋಗ ಮತ್ತು ಕ್ಷೇಮ ಸ್ಟುಡಿಯೊವನ್ನು ಸಹ ಸ್ಥಾಪಿಸಿದ್ದಾಳೆ ಎಂದು ಪೋಸ್ಟ್ ಹೇಳುತ್ತದೆ. ಅಲ್-ಸಬಾ ಕುವೈತ್‌ನಲ್ಲಿ ಅತ್ಯಂತ ಜನಪ್ರಿಯ ಫಿಟ್‌ನೆಸ್ ತರಬೇತುದಾರರಾಗಿದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಅನೇಕ ಇತರ ಸುದ್ದಿ ವರದಿಗಳಲ್ಲಿ ಇದೇ ಸಂದರ್ಭದೊಂದಿಗೆ ಈ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ . ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಕುವೈತ್ ಭೇಟಿಯನ್ನು ಮುಕ್ತಾಯಗೊಳಿಸಲಾಗಿದ್ದು, ಭಾರತ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ , ಇದು 43 ವರ್ಷಗಳ ನಂತರ ಕುವೈಟ್‌ಗೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಕುವೈತ್‌ಗೆ ಭೇಟಿ ನೀಡಿದಾಗ ಅಲ್ಲಿ ಯೋಗವನ್ನು ಉತ್ತೇಜಿಸುವ ಯೋಗ ತರಬೇತುದಾರರಾದ ಶೇಖಾ ಅಲ್-ಸಬಾಹ್ ಅವರನ್ನು ಭೇಟಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕುವೈತ್‌ನ ‘ರಾಣಿ’ಯನ್ನು ಭೇಟಿ ಮಾಡಿದ್ದಾರೆ ಎಂಬುದು ಸುಳ್ಳಾಗಿದೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ