ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಎಕ್ಸ್‌ನಲ್ಲಿ, ಒಂದು ವಿಡಿಯೋ ವೈರಲ್ ಆಗಿದ್ದು, ಅದನ್ನು “ಗುಜರಾತ್ ಮಾಡಲ್” ಎಂದು ಕರೆದು, ಗುಜರಾತ್‌ನಲ್ಲಿ ತೇಲುವ ಸೋಲಾರ್ ಪ್ಲಾಂಟ್‌ನಿಂದ ಬೃಹತ್ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹಲವು ಬಲಪಂಥೀಯ ಖಾತೆಗಳು ಈ ವಿಡಿಯೋವನ್ನು ಹಂಚಿಕೊಂಡು, “ಅಭಿವೃದ್ಧಿ ಎಂದರೆ ಇದು, ಉಚಿತ ಕರೆಂಟ್ ಕೊಟ್ಟು ಬೆಲೆ ಏರಿಸುವುದು ಅಭಿವೃದ್ಧಿ ಅಲ್ಲ” ಎಂದು ಬರೆದಿದ್ದಾರೆ.
வளர்ச்சி நோக்கி குஜராத் மாடல்!!
குஜராத்தில் பாஜக அரசு ஏற்ப்படுத்தி இருக்கும் Floating Solar plant…!!
வருடம் தோறும் மின் கட்டணத்தை உயர்த்தினால் அது திராவிட மாடல்..! pic.twitter.com/8nlEc1ywBc
— இந்துத்துவம் 🚩 (@VVR_Krish) July 23, 2025
ವಿಡಿಯೋ ನೋಡಿದ ಹಲವು ಸಾರ್ವಜನಿಕರು ಇದನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಈಗಲೇ ಬಿಜೆಪಿ ಗುಜರಾತ್ ಮಾಡಲ್ ಎಂದು ಸುಳ್ಳು ಹೇಳಲು ಆರಂಭಿಸಿದೆ ಎಂದು ಬರೆದುಕೊಂಡಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಗುಜರಾತ್ ಮಾಡಲ್‌ನ ತೇಲುವ ಸೋಲಾರ್ ಪ್ಲಾಂಟ್ ಎನ್ನುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ನಮಗೆ ಅಧಿಕೃತ ಮಾಹಿತಿಗಳು ಲಭ್ಯವದವು. ವಿಡಿಯೋದ ಫ್ರೇಮ್‌ಗಳು ಚೀನಾದ ಶಾಂಡಾಂಗ್ ಪ್ರಾಂತ್ಯದ ತೇಲುವ ಸೋಲಾರ್ ಫಾರ್ಮ್‌ನ ದೃಶ್ಯಗಳಿಗೆ ಹೊಂದಿಕೆಯಾದವು. ಇದನ್ನು PV Techನಂತಹ ವಿಶ್ವಾಸಾರ್ಹ ಸುದ್ದಿ ಮೂಲಗಳು ದೃಢೀಕರಿಸಿವೆ, ಇದು ಚೀನಾ ಎನರ್ಜಿ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್‌ನ 1GW ಯೋಜನೆಯನ್ನು ದಾಖಲಿಸಿದೆ. ಗುಜರಾತ್‌ನ ಯಾವುದೇ ತೇಲುವ ಸೋಲಾರ್ ಯೋಜನೆಗಳು ಈ ವಿಡಿಯೋದ ದೃಶ್ಯಗಳಿಗೆ ಸಂಬಂಧಿಸಿಲ್ಲ ಎಂದು ಈ ವರದಿಯ ಮೂಲಕ ಖಚಿತವಾಗಿದೆ.

ಇನ್ನು ಗುಜರಾತ್‌ನಲ್ಲಿ ತೇಲುವ ಸೋಲಾರ್ ಪ್ಲಾಂಟ್‌ಗಳಿವೆ, ಉದಾಹರಣೆಗೆ ವಡೋದರಾದ ಅಜ್ವಾ ಜಲಾಶಯದಲ್ಲಿ ಒಂದು ಯೋಜನೆಯನ್ನು ಪ್ರಸ್ತಾಪಿಸಲಾಗಿದೆ, ಆದರೆ ಇದು ಕೇವಲ 2MW ಸಾಮರ್ಥ್ಯದ್ದಾಗಿದ್ದು, ವೈರಲ್ ವಿಡಿಯೋದಂತಹ ದೊಡ್ಡ ಯೋಜನೆಯಲ್ಲ. ಗುಜರಾತ್‌ನ ಯಾವುದೇ ತೇಲುವ ಸೋಲಾರ್ ಪ್ಲಾಂಟ್ ವೈರಲ್ ವಿಡಿಯೋದ ದೃಶ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಅದೇ ಸಮಯದಲ್ಲಿ ವೈರಲ್ ವಿಡಿಯೋ ಚೀನಾದ ವಿಡಿಯೋದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಬಳಸಿಕೊಂಡು ಬಹುತೇಕ ಬಲಪಂಥೀಯ ಖಾತೆಗಳು ಸುಳ್ಳು ಮಾಹಿತಿಯನ್ನೇ ನೀಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಗುಜರಾತ್ ತೇಲುವ ಸೋಲಾರ್ ಪ್ಲಾಂಟ್‌ನದ್ದಲ್ಲ, ಅದು ಚೀನಾದ ಶಾಂಡಾಂಗ್ ಪ್ರಾಂತ್ಯದ ತೇಲುವ ಸೋಲಾರ್ ಫಾರ್ಮ್‌ನ ದೃಶ್ಯಗಳಾಗಿವೆ. ಈ ವಿಡಿಯೋವನ್ನು ಬಳಸಿಕೊಂಡಿರುವ ಬಲಪಂಥೀಯರು ಗುಜರಾತ್ ಮಾಡಲ್ ಎಂದು ಸುಳ್ಳು ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಇಂದೋರ್‌ನಲ್ಲಿ ರಸ್ತೆಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ನೀರು ಸುರಿಯಲಾಗಿಲ್ಲ
