ಪಾಕಿಸ್ತಾನದ ಪರ ಗೂಢಚಾರ ನಡೆಸಿರುವ ಆರೋಪದ ಮೇಲೆ ಸಿಕ್ಕಿಬಿದ್ದಿರುವ ಯೂಟ್ಯೂಬರ್ ಜ್ಯೋತಿ ಮೇಲ್ಹೋತ್ರಾ ಕುರಿತು ಪ್ರತಿನಿತ್ಯವೂ ಹಲವು ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೀಗ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಜ್ಯೋತಿ ಮೆಲ್ಹೋತ್ರಾ ಇರುವ ಫೋಟೋಗಳು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವರು ಈ ಫೋಟೋ ಕುರಿತು ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಪ್ರಮುಖವಾಗಿ ಬಲಪಂಥೀಯ ಸಾಮಾಜಿಕ ಜಾಲತಾಣದ ಖಾತೆಗಳು “ಕಾಂಗ್ರೆಸ್ನದ್ದು ಪಾಕಿಸ್ತಾನ ಪರವಾದ ನಿಲುವು, ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಜ್ಯೋತಿ ಮೆಲ್ಹೋತ್ರಾ ಜೊತೆ ಇರುವ ಫೋಟೋ ಇದಾಗಿದೆ. ಈಗ ಕಾಂಗ್ರೆಸ್ನ ನಿಲುವು ಏನು ಎಂಬುದು ಸ್ಪಷ್ಟವಾಗಿದೆ ಎಂಬಂತಹ ವಿವಿಧ ರೀತಿಯ ಬರಹಗಳೊಂದಿಗೆ ವೈರಲ್ ಫೋಟೋವನ್ನು ಶೇರ್ ಮಾಡಲಾಗುತ್ತಿದೆ. ಫೋಟೋಗಳಲ್ಲಿ ಕೂಡ ರಾಹುಲ್ ಗಾಂಧಿಯೊಂದಿಗೆ ಜ್ಯೋತಿ ಮೆಲ್ಹೋತ್ರಾ ಇರುವಂತೆ ಕಂಡು ಬಂದಿರುವುದರಿಂದ, ಹಲವರು ಇದನ್ನು ನಿಜವೆಂದು ನಂಬಿದ್ದಾರೆ. ಈ ಕುರಿತು ನಿಜಾಂಶ ಏನು ಎಂಬುದನ್ನು ಪರಿಶೀಲನೆ ನಡೆಸೋಣ.
https://twitter.com/RealAtulsay/status/1925158775318601994
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿರುವ ಫೋಟೋಗಳನ್ನು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋದಲ್ಲಿರುವ ಎರಡು ಫೋಟೋಗಳನ್ನು ಕೀ ಪ್ರೇಮ್ಗಳನ್ನಾಗಿ ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಿನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 3 ಅಕ್ಟೋಬರ್ 2019 ರಂದು “ಸೋನಿಯಾ ಗಾಂಧಿಯವರ ಭದ್ರಕೋಟೆಯಲ್ಲಿ ಕಾಂಗ್ರೆಸ್ ಬಂಡಾಯವನ್ನು ಎದುರಿಸುತ್ತಿದೆ” ಎಂಬ ಶೀರ್ಷಿಕೆಯ ಅಡಿಯಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆ ಪ್ರಕಟಿಸಿದ ವರದಿ ಒಂದು ಕಂಡು ಬಂದಿದೆ. ಇದರಲ್ಲಿ ರಾಹುಲ್ ಗಾಂಧಿ ಅವರ ಜೊತೆ ಅದಿತಿ ಸಿಂಗ್ ಎಂದು ಫೈಲ್ ಫೋಟೋವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಇದು ವೈರಲ್ ಫೋಟೋವಿನ ಮೂಲ ಫೋಟೋವಾಗಿದ್ದು, ಅದಿತಿ ಸಿಂಗ್ ಅವರ ಫೋಟೋವನ್ನು ಎಡಿಟ್ ಮಾಡಿ ಜ್ಯೋತಿ ಮೇಲೆಹೋತ್ರ ಅವರ ಮುಖವನ್ನು ಅಳವಡಿಸಲಾಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಹಾಗಾಗಿ ಮೊದಲ ಫೋಟೋ ಎಡಿಟರ್ ಎಂಬುದು ನಮಗೆ ಖಚಿತವಾಗಿದೆ.

ಇನ್ನು ಎರಡನೇ ಫೋಟೋವನ್ನು ಕೂಡ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದಾಗ ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ 18 ಸೆಪ್ಟೆಂಬರ್ 2022 ರಂದು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಕಂಡುಬಂದಿದೆ. ಇದರಲ್ಲಿ “ಇಂದು ಕೇರಳದ ಒಟ್ಟಪ್ಪನದ ಶ್ರೀ ಕುರುಟ್ಟು ಭಗವತಿ ದೇವಸ್ಥಾನಕ್ಕೆ (13 ಕಿಮೀ) ಹರಿಪಾದ್ನ ತಾಲೂಕು ಪ್ರಧಾನ ಆಸ್ಪತ್ರೆಯಿಂದ #ಭಾರತ್ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸುತ್ತಿದ್ದಾರೆ.” ಎಂದು ಬರೆದು ಕೊಂಡಿರುವುದು ಕಂಡುಬಂದಿದೆ
Shri @RahulGandhi participating in morning lag of #BharatJodoYatra from Taluk Head Quarters Hospital, Haripad to Sree Kuruttu Bhagavathi Temple, Ottappana (13 kms) in Kerala today. pic.twitter.com/mz2kuLZ2Rp
— All India Mahila Congress (@MahilaCongress) September 18, 2022
ಇದರ ಆಧಾರದ ಮೇಲೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಮಾತೃಭೂಮಿ.ಕಾಂ ಸುದ್ದಿ ತಾಣ 18 ಸೆಪ್ಟೆಂಬರ್ 2022 ರಂದು ಭಾರತ ಜೋಡೋ ಯಾತ್ರೆ, ಕುಟ್ಟನಾಡಿನಲ್ಲಿ ರೈತರನ್ನು ಭೇಟಿ ಮಾಡಲಿರುವ ರಾಹುಲ್ ಗಾಂಧಿ ಎಂದು ವರದಿಯನ್ನು ಪ್ರಕಟಿಸಿರುವುದು ಕಂಡುಬಂದಿದೆ. ಇದರಲ್ಲಿ ರಾಹುಲ್ ಗಾಂಧಿ ಅವರ ಫೇಸ್ಬುಕ್ ಪೋಸ್ಟ್ ಒಂದು ಹಂಚಿಕೊಂಡಿರುವುದು ಕಂಡುಬಂದಿದ್ದು, ಇದರಲ್ಲಿ ರಾಹುಲ್ ಗಾಂಧಿಯವರು “ಇವು ಕೇವಲ ಚಿತ್ರಗಳಲ್ಲ, ಇದು ದೇಶದ ಪ್ರತಿಯೊಬ್ಬ ನಾಗರಿಕನ ಭಾವನೆಗಳು, ಅವರ ಭರವಸೆ, ಅವರ ಏಕತೆ, ಅವರ ಶಕ್ತಿ, ಅವರ ಪ್ರೀತಿಯೆಂದು ಬರೆದುಕೊಂಡಿರುವುದು ಕಂಡುಬಂದಿದೆ. ಇದರಲ್ಲಿ ವೈರಲ್ ಫೋಟೋಗೆ ಹೋಲಿಕೆಯಾಗುವ ಫೋಟೋ ಒಂದು ಕಂಡುಬಂದಿದೆ. ಈ ಫೋಟೋಗೂ ವೈರಲ್ ಫೋಟೋಗೂ ಸಾಕಷ್ಟು ಹೋಲಿಕೆ ಇರುವುದು ಕಂಡು ಬಂದಿದೆ. ಇದು ಹಳೆಯ ಫೋಟೋ ಕೂಡ ಆಗಿದ್ದು, ಇದರಲ್ಲಿ ಇರುವುದು ಜ್ಯೋತಿ ಮೆಲ್ಹೋತ್ರಾ ಅಲ್ಲ ಎಂಬುದು ಸ್ಪಷ್ಟವಾಗಿದೆ



ಒಟ್ಟಾರೆಯಾಗಿ ಈ ಎರಡು ಫೋಟೋಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ, ಫೋಟೋದಲ್ಲಿರುವುದು ಮಹಿಳಾ ನಾಯಕಿಯರಾಗಿದ್ದು ಪಾಕಿಸ್ತಾನದ ಪರ ಗೂಢಚಾರ ನಡೆಸಿದ ಆರೋಪಿ ಜ್ಯೋತಿ ಮೇಲ್ಹೋತ್ರಾ ಅಲ್ಲ ಎಂಬುದು ಸ್ಪಷ್ಟವಾಗಿದೆ ಮತ್ತು ಎರಡು ಫೋಟೋಗಳು ಹಳೆಯದ್ದಾಗಿದೆ. ಹಾಗಾಗಿ ವೈರಲ್ ಫೋಟೋ ಸುಳ್ಳು ನಿರೂಪಣೆಯೊಂದಿಗೆ ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಈ ಕಾರಣದಿಂದ ವೈರಲ್ ಫೋಟೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಅಖಿಲೇಶ್ ಯಾದವ್ ಅವರ ಜೊತೆ ಜ್ಯೋತಿ ಮಲ್ಹೋತ್ರಾ ಇರುವ ಫೋಟೋ ಎಡಿಟೆಡ್ ಆಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

