ಬಾಗೇಶ್ವರ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಪಾದಯಾತ್ರೆ ನಡೆಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಮುಸಲ್ಮಾನರು ಔರಂಗಜೇಬ್ ಫೋಟೋ ಹಿಡಿದು ಬಿಜೆಪಿ ಮತ್ತು ಶಿವಸೇನೆ ಬೆಂಬಲಿಗರ ಮುಂದೆ ‘ಔರಂಗಜೇಬ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಈಗ ಕೋಮು ನಿರೂಪಣೆಯೊಂದಿಗೆ ವೈರಲ್ ಕೂಡ ಆಗುತ್ತಿದೆ.
मुसलमानो ने औरंगजेब का फ़ोटो हिंदुओ को दिखाकर और नारे लगाए "औरंगजेब तेरा बाप-औरंगजेब तेरा बाप" pic.twitter.com/TcBl4ErMdW
— Kreately.in (@KreatelyMedia) November 25, 2024
ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಮುಸಲ್ಮಾನರ ವಿರುದ್ಧದ ಅಭಿಪ್ರಾಯವನ್ನು ಸೃಷ್ಟಿಸುತ್ತಿದ್ದು, ಹಿಂದೂ ಮುಸ್ಲಿಂ ದ್ವೇಷವನ್ನು ಕೂಡ ಹರಡಲು ಈ ಪೋಸ್ಟ್ ಮೂಲಕ ಪ್ರಯತ್ನಿಸಲಾಗುತ್ತಿದೆ. ಇನ್ನು ಕೆಲವೊಂದು ಕಡೆಗಳಲ್ಲಿ ರಾಜಕೀಯವಾಗಿ ಸಾಕಷ್ಟು ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ. ಹೀಗಾಗಿ ಹಲವರು ವೈರಲ್ ಪೋಸ್ಟ್ ಅನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಅನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
मुस्लिमों ने औरंगजेब का फ़ोटो हिंदुओ को दिखाकर नारे लगाए "औरंगजेब तेरा बाप-औरंगजेब तेरा बाप"
अभी यहीं पर पे#ले जाएंगे तो पूरे देश में इनका RR चालू हो जाएगा pic.twitter.com/ExicNNIeuP— SATYARTH (@Satyarth0108) November 25, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ಕುರಿತು ವಿವಿಧ ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ಔರಂಗಬಾದ್ನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಾವೇದ್ ಖುರೇಷಿ ಅವರು 18 ನವಂಬರ್ 2024 ರಂದು ಪೋಸ್ಟ್ ಮಾಡಿದ ವಿಡಿಯೋ ಒಂದು ಕಂಡು ಬಂದಿದೆ. ಇದರಲ್ಲಿ ಔರಂಗಬಾದ್ ಸೆಂಟ್ರಲ್ ವಂಚಿತ ಅಭ್ಯರ್ಥಿ ಜಾವೇದ್ ಖುರೇಶಿ ಮತ್ತು ಇತರ ಅಭ್ಯರ್ಥಿ ಪ್ರದೀಪ್ ಜೈಸ್ವಾಲ್ ಅವರ ಬೆಂಬಲಿಗರು ಮುಖಾಮುಖಿಯಾಗಿದ್ದಾರೆ ಎಂದು ಬರೆಯಲಾಗಿದೆ.

ನವಂಬರ್ 18ರಂದು ಔರಂಗಾಬಾದ್ ಅಪ್ಡೇಟ್ಸ್ ಯೌಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋದಲ್ಲಿ ಜಾವೇದ್ ಖುರೇಷಿಯ ರ್ಯಾಲಿಯನ್ನು ತೋರಿಸಲಾಗಿದೆ. ಇದರಲ್ಲಿ ವೈರಲ್ ವಿಡಿಯೋದಲ್ಲಿ ಕಂಡುಬರುವ ಅವರ ಬೆಂಬಲಿಗರು ಔರಂಗಜೇಬ್ ಅವರ ಫೋಟೋವನ್ನು ಹಿಡಿದಿರುವುದನ್ನು ಕಾಣಬಹುದಾಗಿದೆ. ಆದರೆ ಈ ವರದಿಗಳಲ್ಲಿ ಭಾಗೇಶ್ವರ ಧಾಮದ ಪಾದಯಾತ್ರೆಯ ಕುರಿತು ಯಾವುದೇ ಮಾಹಿತಿಗಳು ಕಂಡುಬಂದಿಲ್ಲ
ಹೀಗಾಗಿ ಈ ಬಗ್ಗೆ ಹುಡುಕಾಟವನ್ನು ನಡೆಸಿದಾಗ, ನವಂಬರ್ 20ರಂದು ಬಾಗೇಶ್ವರಧಾಮದ ಎಕ್ಸ್ ಹ್ಯಾಂಡಲ್ನಿಂದ ಪಾದಯಾತ್ರೆಯೂ ನವೆಂಬರ್ 21ರಿಂದ ಪ್ರಾರಂಭವಾಗಲಿದ್ದು ನವೆಂಬರ್ 29 ರವರೆಗೆ ನಡೆಯಲಿದೆ ಎಂದು ಪೋಸ್ಟ್ ನಲ್ಲಿ ಮಾಹಿತಿ ನೀಡಿರುವುದು ಕಂಡುಬಂದಿದೆ. ಈ ಪೋಸ್ಟ್ನ ಆಧಾರದಲ್ಲಿ ನೋಡಿದಾಗ ವೈರಲ್ ಆದ ವಿಡಿಯೋ ಧೀರೇಂದ್ರ ಶಾಸ್ತ್ರಿಯವರ ಪಾದಯಾತ್ರೆಗು ಮುನ್ನವೇ ಸೆರೆಹಿಡಿಯಲಾಗಿದೆ ಎಂದು ಖಚಿತವಾಗಿದೆ.
सिर्फ़ 1 दिन शेष…
सनातन अलख की नयी क्रांति के लिए… pic.twitter.com/R7HoHPNNZJ— Bageshwar Dham Sarkar (Official) (@bageshwardham) November 20, 2024
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಪಾದಯಾತ್ರೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪ್ರತಿಭಟನಾ ಕಾರ್ಯದಿಂದ ಔರಂಗಜೇಬ್ ಫೋಟೋವನ್ನು ಪ್ರದರ್ಶಿಸಲಾಗಿದೆ ಮತ್ತು ಔರಂಗಜೇಬ್ ಪರವಾಗಿ ಘೋಷಣೆಗಳನ್ನು ಕೂಗಲಾಗಿದೆ ಎಂಬುದು ಸುಳ್ಳಿನಿಂದ ಕೂಡಿದೆ. ವೈರಲ್ ವಿಡಿಯೋ ಔರಂಗಬಾದ್ಮ ಜಾವೇದ್ ಖುರೇಷಿ ಅವರ ಪಕ್ಷದ ಕಾರ್ಯಕರ್ತರು ಮತ್ತು ಪ್ರದೀಪ್ ಜೈಸ್ವಾಲ್ ಅವರ ಬೆಂಬಲಿಗರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಾಗಿದೆ. ಹಾಗಾಗಿ ವೈರಲ್ ವಿಡಿಯೋ ಸಂಪೂರ್ಣವಾಗಿ ಸುಳ್ಳು ಮಾಹಿತಿಯಿಂದ ಕೂಡಿದೆ ಎಂಬುದು ಖಚಿತವಾಗಿದೆ.
ಫ್ಯಾಕ್ಟ್ಚೆಕ್ : Fact Check : ರೋಹಿತ್ ಶರ್ಮಾ ಅವರ ನವಜಾತ ಶಿಶು ಎಂದು 2024ರ ಸಪ್ಟೆಂಬರ್ನಲ್ಲಿ ತೆಗೆದ ಫೋಟೋ ಹಂಚಿಕೆ

