ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಪೊಲೀಸರು ಸಾರ್ವಜನಿಕ ಪ್ರದೇಶದಲ್ಲೇ ಕೆಲವು ಯುವಕರನ್ನು ಲಾಠಿಯಿಂದ ಹೊಡೆಯುತ್ತಿರುವುದು ಕಂಡು ಬಂದಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಈ ವ್ಯಕ್ತಿಗಳು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಎಂದು ಅನೇಕ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಹಲವರು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪೋಸ್ಟ್ ಮಾಡುತ್ತಿದ್ದಾರೆ.
पुलिस उत्तर प्रदेश में लड़कियों के उत्पीड़न के लिए अब्दुल को कितना भुगतान करना होगा, इसके बारे में बता रही है। हर किसी की बेटियां और बहनें हैं। उनकी सुरक्षा हर किसी की जिम्मेदारी है। बाबा जी इन अब्दुल को उचित तरीके से सिखा रहे हैं।
— Ashok Tolasaria 🚩 (@TolasariaA2111) March 7, 2025
ಫೇಸ್ಬುಕ್ ಬಳಕೆದಾರರೊಬ್ಬರು 10 ಮಾರ್ಚ್ 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, “ಉತ್ತರ ಪ್ರದೇಶದಲ್ಲಿ ಪ್ರಯಾಣಿಸುವ ಹುಡುಗಿಯರನ್ನು ಕೀಟಲೆ ಮಾಡುವುದು ಎಷ್ಟು ದುಬಾರಿಯಾಗಿದೆ?” ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯಲ್ಲಿ ಇನ್ನೂ ಹಲವರು ವಿವಿಧ ರೀತಿಯ ಬರಹಗಳನ್ನು ಬರೆದುಕೊಂಡು ವೈರಲ್ ವಿಡಿಯೋವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 29 ಮೇ 2015 ರಂದು ABP ಸುದ್ದಿ ಸಂಸ್ಥೆ ತನ್ನ ಯೂಟ್ಯುಬ್ ಚಾನಲ್ನಲ್ಲಿ ಅಪ್ಲೋಡ್ ಮಾಡಿದ್ದ ವಿಡಿಯೋ ವರದಿಯೊಂದು ಕಂಡು ಬಂದಿದೆ. ಇದರ 4 : 22ರ ಟೈಂ ಸ್ಟ್ಯಾಂಪ್ನಲ್ಲಿ ಪೊಲೀಸರು ಹಸಿರು ಬಣ್ಣದ ಶರ್ಟ್ ಧರಿಸಿದ ವ್ಯಕ್ತಿಯನ್ನು ಲಾಠಿಯಿಂದ ಹೊಡೆಯುತ್ತಿರುವುದು ಕಂಡು ಬಂದಿದೆ.

ಇನ್ನು 29 ಮೇ 2015 ರಂದು ಇಂಡಿಯಾ ಟಿವಿ ಕೂಡ ಈ ಕುರಿತು ವರದಿಯನ್ನು ಮಾಡಿರುವುದು ಕಂಡು ಬಂದಿದ್ದು, ಇದರ ಪ್ರಕಾರ ಈ ವಿಡಿಯೋ ಇಂದೋರ್ ಪೊಲೀಸರು ನಡೆಸಿದ ಅಪರಾಧ ವಿರೋಧಿ ಕಾರ್ಯಾಚರಣೆಯದ್ದಾಗಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ, ಹಲವಾರು ಆರೋಪಿಗಳನ್ನು ಬಂಧಿಸಲಾಯಿತು, ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಯಿತು ಮತ್ತು ಲಾಠಿಗಳಿಂದ ಹೊಡೆಯಲಾಯಿತು. 15 ಪೊಲೀಸ್ ಠಾಣೆಗಳಲ್ಲಿ ಈ ಕ್ರಮ ಕೈಗೊಳ್ಳಲಾಯಿತು, ಅಪರಾಧಿಗಳನ್ನು ತಡೆಯಲು ಮತ್ತು ಸಾರ್ವಜನಿಕರಿಗೆ ಧೈರ್ಯ ತುಂಬಲು 50 ಕ್ಕೂ ಹೆಚ್ಚು ಕಡೆ ಇಂತಹ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು ಎಂದು ಉಲ್ಲೇಖಸಿರುವುದು ಕಂಡು ಬಂದಿದೆ.
https://www.youtube.com/watch?v=-rqULi-KSNo
ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ನಮಗೆ ಉತ್ತರ ಪ್ರದೇಶ ಪೊಲೀಸರ ಫ್ಯಾಕ್ಟ್ಚೆಕ್ ಘಟಕವಾದ UPPOLICE FACT CHECK ನ ಎಕ್ಸ್ ಹ್ಯಾಂಡಲ್ನಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದ ಪೋಸ್ಟ್ ಒಂದು ಕಂಡು ಬಂದಿದೆ.. ಇದನ್ನು 17 ಜನವರಿ 2020 ರಂದು ಪೋಸ್ಟ್ ಮಾಡಲಾಗಿದ್ದು, “ವೀಡಿಯೊದಲ್ಲಿ ತೋರಿಸಿರುವ ಘಟನೆ @UPPolice ಗೆ ಸಂಬಂಧಿಸಿಲ್ಲ. ದಯವಿಟ್ಟು ದಾರಿತಪ್ಪಿಸುವ ಪ್ರಚಾರವನ್ನು ಮಾಡಬೇಡಿ” ಎಂದು ಪೋಸ್ಟ್ ಮಾಡಲಾಗಿದ್ದು, ಈ ಮೂಲಕ ವೈರಲ್ ವಿಡಿಯೋಗೂ ಉತ್ತರ ಪ್ರದೇಶದ ಪೊಲೀಸರಿಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ.
वीडियो में दिखायी जा रही घटना @UPPolice से संबंधित नहीं है कृपया भ्रामक प्रचार न करें!#UPPAgainstFakenewshttps://t.co/WDp95grvnX https://t.co/d60Mlj0vL0
— UPPOLICE FACT CHECK (@UPPViralCheck) January 17, 2020
ಒಟ್ಟಾರೆಯಾಗಿ ಹೇಳುವುದಾದರೆ ನಾವು ಸಂಗ್ರಹಿಸಿದ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಇಂದೋರ್ ಪೊಲೀಸರು ನಡೆಸಿದ ಅಪರಾಧ ವಿರೋಧಿ ಅಭಿಯಾನದ 2015 ರ ವೀಡಿಯೊವನ್ನು ಉತ್ತರ ಪ್ರದೇಶದ ಘಟನೆ ಎಂದು ತಪ್ಪಾಗಿ ಪ್ರಸಾರ ಮಾಡಲಾಗುತ್ತಿದೆ. ಈ ವೀಡಿಯೊಗು ಉತ್ತರ ಪ್ರದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ. ವೈರಲ್ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ. ಇದನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಜಿಯೋ ಮತ್ತು ಫೋನ್ಪೇ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿದೆ ನಕಲಿ ಕ್ಯಾಶ್ಬ್ಯಾಕ್ ಆಫರ್ ಲಿಂಕ್.!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

