ಧ್ರುವ್ ರಾಠಿ ಅವರು ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿ ಕೊಡುವ ಬಿಗ್ಬಾಸ್ ಕಾರ್ಯಕ್ರಮಕ್ಕೆ ಹೋಗಲಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಕಿರುತೆರೆಗೆ ಲಗ್ಗೆ ಇಡಲಿದ್ದಾರೆ. ಈಗ ಸದ್ಯಕ್ಕೆ ಒಟಿಟಿ ಬಿಗ್ಬಾಸ್ಗೆ ತೆರಳಲಿರುವ ಅವರು ತದ ನಂತರ ಮುಖ್ಯ ವಾಹಿನಿಯ ಬಿಗ್ಬಾಸ್ ಕಾರ್ಯಕ್ರಮಕ್ಕೆ ತೆರಳಿಲಿದ್ದಾರೆ. ಈ ಮೂಲಕ ಧ್ರುವ್ ರಾಠಿ ಅವರ ಬಣ್ಣ ಬಯಲಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇನ್ನು ಈ ಬಗ್ಗೆ ಹಲವು ಮಾಧ್ಯಮಗಳು ಕೂಡ ವರದಿಯನ್ನು ಮಾಡಿದ್ದರಿಂದ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ಸಾಕಷ್ಟು ಜನ ಸಾಮಾನ್ಯರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ಬಗ್ಗೆ ಧ್ರುವ್ ರಾಠಿ ಅಭಿಮಾನಿಗಳು ಕೂಡ ಅಚ್ಚರಿಯನ್ನು ವ್ಯಕ್ತ ಪಡಿಸಿದ್ದು, ಇದು ಸಾಕಷ್ಟು ಮಂದಿಯಲ್ಲಿ ಪರ ವಿರೋಧದ ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ. ಹೀಗಾಗಿ ವೈರಲ್ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
Dhruv Rathee is rumoured to make a wild card entry in Big Boss 😭
— Shubh (@kadaipaneeeer) July 17, 2023
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಹುಡುಕಾಟವನ್ನು ನಡೆಸಿತು. ಈ ವೇಳೆ ನಮಗೆ 2023ರಿಂದಲೂ ಕೂಡ ಧ್ರುವ್ ರಾಠಿ ಬಿಗ್ಬಾಸ್ಗೆ ಹೋಗಲಿದ್ದಾರೆ ಎಂಬ ಸುದ್ದಿಯನ್ನು ಹಂಚಿಕೊಳ್ಳುತ್ತಿರುವುದು ಕಂಡು ಬಂದಿದೆ. ಇದರ ಜೊತೆಗೆ 28-07-2023 ರಲ್ಲಿ ದ ಎಕನಾಮಿಕ್ ಟೈಮ್ಸ್ ವರದಿಯೊಂದು ಕಂಡು ಬಂದಿದೆ. ಈ ವರದಿಯಲ್ಲಿ ” ಯೂಟ್ಯುಬರ್ ಧ್ರುವ್ ರಾಠಿ ಬಿಗ್ಬಾಸ್ ಒಟಿಟಿಗೆ ತೆರಳುವ ಸುದ್ದಿಗಳನ್ನು ನಿರಾಕರಿಸಿದ್ದಾರೆ” ಎಂದು ಶೀರ್ಷಿಕೆ ನೀಡಿರುವ ವರದಿಯೊಂದು ಕಂಡು ಬಂದಿದೆ.

ಇದರ ಆಧಾರದ ಮೇಲೆ ಇನ್ನಷ್ಟು ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದಾಗ ಇದೇ ರೀತಿಯಾದ ಹಲವು ವರದಿಗಳು ಕಂಡು ಬಂದಿದೆ. ಅದರಲ್ಲಿ ಇಂಡಿಯಾ ಟುಡೆ ಕೂಡ 31 ಜುಲೈ 2023ರಂದು “ಧ್ರುವ್ ರಾಠಿ ಬಿಗ್ಬಾಸ್ ಒಟಿಟಿ ಕಾರ್ಯಕ್ರಮಕ್ಕೆ ಪ್ರವೇಶಿಸುತ್ತಿಲ್ಲ” ಎಂದು ಶೀರ್ಷಿಕೆಯನ್ನು ನೀಡಿ ವರದಿಯನ್ನು ಪ್ರಕಟಿಸಿರುವುದು ಕಂಡು ಬಂದಿದೆ. ಈ ವರದಿಯಲ್ಲಿ ಧ್ರುವ್ ರಾಠಿ ಅವರು ಬಿಗ್ಬಾಸ್ ಒಟಿಟಿಗೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತು ಈ ಕುರಿತು ರಾಠಿ ಅವರೇ ಸ್ಪಷ್ಟನೆ ನೀಡಿದ್ದು, ಅವರು ಬಿಗ್ಬಾಸ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಈ ಬಗ್ಗೆ ಧ್ರುವ್ ರಾಠಿ ಅವರೇ 27 ಜುಲೈ 2023ರಲ್ಲಿ ತಮ್ಮ ಅಧಿಕೃತ ಯುಟ್ಯೂಬ್ ಚಾನಲ್ನಲ್ಲಿ ಬಿಗ್ಬಾಸ್ ಕಾರ್ಯಕ್ರಮದ ಕುರಿತು ವಿಡಿಯೋವನ್ನು ಮಾಡಿದ್ದು, ಈ ವಿಡಿಯೋದಲ್ಲಿ ನಾನು ಎಂದಿಗೂ ಬಿಗ್ಬಾಸ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಜೊತೆಗೆ ತಮ್ಮ ಬಗ್ಗೆ ಹರಡಿದ್ದ ಸುದ್ದಿಗಳೆಲ್ಲವೂ ಕೂಡ ಸುಳ್ಳು ಎಂಬುದನ್ನು ಕೂಡ ಇದೇ ವಿಡಿಯೋದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಧ್ರುವ್ ರಾಠಿ ಅವರು ಹಿಂದಿ ಬಿಗ್ಬಾಸ್ನ ಒಟಿಟಿಗೆ ನೇರ ಪ್ರವೇಶವನ್ನು ಪಡೆದುಕೊಂಡಿದ್ದಾರೆ ಎಂಬುದು ಸುಳ್ಳು. ಸ್ವತಃ ಧ್ರುವ್ ರಾಠಿ ಅವರೇ ತಮ್ಮ ವಿಡಿಯೋದಲ್ಲಿ ನಾನು ಬಿಗ್ಬಾಸ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.
ಇದನ್ನೂ ಓದಿ : FACT CHECK : ಶಬರಿಮಲೆ ದೇವಸ್ಥಾನದ ‘ಅರಾವಣ ಪ್ರಸಾದ’ವನ್ನು ಯುಎಇಯ ಅಲ್-ಜಹಾ ಕಂಪೆನಿ ತಯಾರಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

