ಇದು ರಾಜಸ್ತಾನದ ಹಿಂದೂ- ಮುಸ್ಲಿಂ ಸೌಹಾರ್ದತೆಯ ‘ಅಖಂಡ ಜ್ಯೋತಿ’ ಎನ್ನುವ ಸಂಪ್ರದಾಯ

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಈಗ ದೇವಸ್ಥಾನದಲ್ಲಿ ನಮಾಜ್ ಮಾಡಿಸುತ್ತಿದೆ, ಅದೂ ಕೂಡ ಪೋಲೀಸರನ್ನು ನಿಯೋಜಿಸಿ, ನಾವೆಲ್ಲರೂ ಇದನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ, ಅದಕ್ಕಾಗಿಯೇ ಈ ವೀಡಿಯೋವನ್ನು ಸಾಧ್ಯವಾದಷ್ಟು ಶೇರ್ ಮಾಡಿ, ಇದರಿಂದ ಕಾಂಗ್ರೆಸ್ ಅಥವಾ ಇತರ ವಿರೋಧ ಪಕ್ಷಗಳಿಗೆ ಮತ ಹಾಕುವ ಜಾತ್ಯಾತೀತ ಹಿಂದೂಗಳು ಕಣ್ಣು ತೆರೆಯಬಹುದು ಎಂಬ ವೀಡಿಯೋ ಒಂದು ವೈರಲ್ ಆಗುತ್ತಿದೆ.

ಸತ್ಯವೇನೆಂದರೆ ರಾಜಸ್ತಾನದ ಜೈಪುರದಲ್ಲಿ ಲಕ್ಷ್ಮಿ ನಾರಾಯಣ ದೇವಸ್ಥಾನದ ಸಮುಚ್ಚಾಯದಲ್ಲೇ ಸೈಯದ್ ಚಾಂಡಿ ವಾಲೆ ದೇಗುಲವಿದೆ ಇಲ್ಲಿ‘ಅಖಂಡ ಜ್ಯೋತಿ’ ಎನ್ನುವ ಸಂಪ್ರದಾಯವಿದೆ. ಇದನ್ನು 40–50 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದು ಹಿಂದೂ, ಮುಸ್ಲಿಂ ಸೌಹಾರ್ದದ ಕೇಂದ್ರವಾಗಿದೆ. ಎರಡೂ ಧರ್ಮದವರು ಇಲ್ಲಿಗೆ ನಡೆದುಕೊಳ್ಳುತ್ತಾರೆ. ಈ ಕುರಿತು ಆ ದೇವಸ್ಥಾನದ ಅರ್ಚಕರೇ ಖಚಿತಪಡಿಸಿದ್ದಾರೆ. ‘ಇದೊಂದು ಸುಳ್ಳು ಸುದ್ದಿಯಾಗಿದೆ’ ಎಂದು ರಾಜಸ್ಥಾನ ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ಸುಳ್ಳು ಸುದ್ದಿ ಹಂಚಿದ 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ದೇವಸ್ಥಾನದಲ್ಲಿ ದರ್ಗಾ ನಿರ್ಮಿಸಲು ಹೊರಟಿದೆ ಮತ್ತು ಪೋಲಿಸ್ ನಿಯೋಜಿಸಿ ನಮಾಜ್ ಮಾಡಿಸುತ್ತಿದೆ ಎಂಬುದು ಸುಳ್ಳು ಸುದ್ಧಿ.


ಇದನ್ನು ಓದಿ:  ಈ ಜಾಹೀರಾತಿನಲ್ಲಿರುವುದು ಭಾರತದ ಬೋರ್ಡಿಂಗ್ ಸ್ಕೂಲ್ ಅಲ್ಲ, ಜರ್ಮನ್ ಅಧ್ಯಕ್ಷರ ಅಧಿಕೃತ ನಿವಾಸ!ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *