ಇತ್ತೀಚಿನ ದಿನಮಾನಗಳಲ್ಲಿ ದಿನಪತ್ರಿಕೆಗಳು ಮತ್ತು ಸುದ್ಧಿವಾಹಿನಿಗಳು ತಮ್ಮ ಜಾಹಿರಾತಿನಲ್ಲಿಯೂ ಕೂಡ ಸುಳ್ಳು ಮಾಹಿತಿಗಳ ಮೂಲಕ ಜನಸಾಮಾನ್ಯರ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿವೆ. ಇದಕ್ಕೆ ಪೂರಕ ಎಂಬಂತೆ ದೇಶದ ಪ್ರತಿಷ್ಠಿತ ಸುದ್ಧಿ ಪತ್ರಿಕೆಯಾದ ಹಿಂದುಸ್ತಾನ್ ಟೈಮ್ಸ್ ಕೂಡ ಇಂತಹದ್ದೊಂದು ಜಾಹಿರಾತು ಪ್ರಕಟಿಸಿದೆ. ಅದರಲ್ಲಿ ಭಾರತದ ಮುಂಚೂಣಿಯಲ್ಲಿರುವ 30ಕ್ಕೂ ಹೆಚ್ಚು ವಸತಿ ಶಾಲೆಗಳ ಸಮಾಗಮ ನಡೆಯುತ್ತಿದೆ. ಶಾಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ಜಾಹಿರಾತೊಂದು ಬಿತ್ತರವಾಗಿದೆ.
ಫ್ಯಾಕ್ಟ್‌ಚೆಕ್; ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ಬೋರ್ಡಿಂಗ್ ಶಾಲೆಗಳ ಕುರಿತು ನೀಡಲಾದ ಜಾಹಿರಾತಿನಲ್ಲಿ ಭಾರತದ ಶಾಲಾ ಚಿತ್ರದ ಬದಲು ಜರ್ಮನ್ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು 18ನೇ ಶತಮಾನದ ಐತಿಹಾಸಿಕ ಅರಮನೆಯಾಗಿರುವ ಬೆಲ್ಲೆವ್ಯೂ ಫೋಟೋವನ್ನು ಹಾಕಲಾಗಿದೆ. ಇದನ್ನು ಭಾರತದಲ್ಲಿನ ಜರ್ಮನ್ ರಾಯಭಾರಿಯಾಗಿರುವ ಫಿಲಿಪ್ ಅಕರ್‌ಮನ್‌ರವರು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: ವಿದೇಶಿ ವಿನಿಮಯ ಪರಿವರ್ತನಾ ಶುಲ್ಕದ ರಸೀದಿ RBI ನೀಡುವುದಿಲ್ಲ..!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.