ಕಳೆದ ಕೆಲವು ದಿನಗಳಿಂದ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಯುದ್ಧ ತೀವ್ರವಾಗುತ್ತಿದ್ದು ಈ ಯುದ್ಧಕ್ಕೆ ಸಂಬಂಧಿಸಿದಂತೆ ಪ್ಯಾಲೆಸ್ಟೈನ್ ಹಾಗು ಇಸ್ರೇಲ್‌ಗೆ ಹಲವಾರು ಮಂದಿ ಬೆಂಬಲವನ್ನು ಸೂಚಿಸುತ್ತಿದ್ದಾರೆ.
ಅದೇ ರೀತಿ ಬಾಲಿವುಡ್‌ನ ಖ್ಯಾತ ನಟ ಶಾರುಕ್ ಖಾನ್ ಪ್ಯಾಲೆಸ್ಟೈನ್‌ಗೆ ಬೆಂಬಲಿಸುವ ಉದ್ದೇಶದಿಂದ ಪ್ಯಾಲೆಸ್ಟೈನ್ ಧ್ವಜಕ್ಕೆ ಹೋಲಿಕೆಯಾಗುವ ಜಾಕೆಟ್ ಧರಿಸಿ ಫೋಟೋ ತೆಗೆಸಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.
Fact Check : ಈ ಸುದ್ದಿಯ ಕುರಿತು ಸತ್ಯಾಸತ್ಯತೆಯಯನ್ನು ಪರಿಶೀಲಿಸಿದಾಗ ಶಾರುಕ್ ಖಾನ್ ಅವರ ಈ ಚಿತ್ರವನ್ನು Dubaibliss.com ಎಂಬ ವೆಬ್‌ಸೈಟ್‌ನಲ್ಲಿ ಆಗಸ್ಟ್ 9, 2014 ರಂದು ಪೋಸ್ಟ್ ಮಾಡಲಾಗಿದೆ. “#SRK ಅವರು #DUBAI ಗೆ ಭೇಟಿ ನೀಡಿದಾಗ ಜುಮೇರಾ ಪ್ಲಾಜಾದಲ್ಲಿ #UAE ಫ್ಲಾಗ್ ಜಾಕೆಟ್ ಧರಿಸಿದ್ದಾರೆ!” ಎಂಬ ಶೀರ್ಷಿಕೆಯಿದೆ.
ಶಾರುಕ್ ಖಾನ್ ಯುಎಇಗೆ ಭೇಟಿ ನೀಡಿದಾಗ ಅಲ್ಲಿ ದ್ವಜವನ್ನು ಹೋಲುವ ಜಾಕೆಟ್ ಧರಿಸಿದ್ದರು. ಇನ್ನು ಯುಎಇ ಧ್ವಜ ಮತ್ತು ಪ್ಯಾಲೆಸ್ಟೈನ್ ಧ್ವಜಗಳ ಬಣ್ಣ ಒಂದೇ ರೀತಿಯಲ್ಲಿರುವುದರಿಂದ, ಈ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಿಬಿಡಲಾಗ್ತಾ ಇದೆ.

ಹಾಗಾಗಿ ಶಾರುಕ್ ಖಾನ್ ಪ್ಯಾಲೆಸ್ಟೈನ್‌ಗೆ ಬೆಂಬಲಿಸಿ ಅದರ ಧ್ವಜದ ಬಟ್ಟೆ ಧರಿಸಿದ್ದಾರೆ ಎಂಬುದು ಸುಳ್ಳು ಎಂಬುದು ದೃಢ ಪಟ್ಟಿದೆ.
ಇದನ್ನೂ ಓದಿ: ತೆಲಂಗಾಣ ಸರ್ಕಾರ ಮುಸ್ಲಿಮರಿಗೆ ಮಾತ್ರ ಕಾರುಗಳನ್ನು ನೀಡುತ್ತಿಲ್ಲ, ಹಲವು ಸಮುದಾಯಗಳಿಗೆ ಈ ಸೌಲಭ್ಯವಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.