ಕೇರಳದಲ್ಲಿ ನಡೆದ ಬಾಂಬ್ ಸ್ಪೋಟದ ಹಿಂದೆ ಮುಸ್ಲಿಮರ ಕೈವಾಡವಿದೆ ಎಂಬುದು ಸುಳ್ಳು

ಭಾರತವೂ ಸೇರಿದಂತೆ ಜಗತ್ತಿನ ಹಲವೆಡೆ ಭಯೋತ್ಪಾಧನೆಯಂತಹ ದುರ್ಘಟನೆ ಸಂಭವಿಸಿದಾಗಲೆಲ್ಲಾ ಮೊದಲು ಶಂಕೆ ಪಡುವುದು ಮುಸ್ಲಿಂ ಸಮುದಾಯದ ಮೇಲೆಯೆ. ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಉಗ್ರರು ಭಯೋತ್ಪಾಧನೆಯಲ್ಲಿ ತೊಡಗಿಕೊಂಡಿರುವುದರಿಂದ ಈ ಪೂರ್ವಾಗ್ರಹಗಳು ಹುಟ್ಟಿಕೊಂಡಿವೆ. ಆದರೆ ಭಾರತದಲ್ಲಿಯೂ ಸಹ ಮುಸ್ಲಿಂ ಸಮುದಾಯದವರನ್ನು ಉಗ್ರರು, ಭಯೋತ್ಪಾದಕರೆಂದು ಕರೆಯುವ ಕೆಟ್ಟ ಪದ್ದತಿಯೊಂದು ರೂಢಿಯಲ್ಲಿದೆ. ಹೀಗೆ ಸುಳ್ಳು ಅಪವಾದಕ್ಕೆ ಗುರಿಯಾದ ಅನೇಕ ಮುಸ್ಲಿಂ ಯುವಕರ ಬದುಕು ನರಕವಾಗಿ ಬದಲಾಗಿದೆ, ಇಂತಹ ಆರೋಪಗಳಿಂದ ಖಿನ್ನತೆ, ಆತ್ಮಹತ್ಯೆಯಂತವುಗಳಿಗೆ ಸಹ ಕಾರಣವಾಗುತ್ತಿವೆ. ಇಂತಹದ್ದೇ ಇನ್ನೋಂದು ಆರೋಪವೊಂದು ಈಗ ಕೇಳಿ ಬರುತ್ತಿದೆ.

ಅದು ಕೇರಳದ ಎರ್ನಾಕುಲಂನ ಕಲಮಶ್ಶೇರಿಯಲ್ಲಿ‌ ನಡೆದ ಬಾಂಬ್ ಸ್ಪೋಟದ ಹಿಂದೆ ಹಮಾಸ್ ಉಗ್ರರ ಕೈವಾಡವಿದೆ. ಏಕೆಂದರೆ ಮಲಪ್ಪುರಂನಲ್ಲಿ ಹಮಾಸ್‌ ಮಾಜಿ ಉಗ್ರಗಾಮಿಯಾದ ಖಲೀದ್ ಮಶಾಯೆಲ್ ಸ್ಥಳಿಯ ಮುಸ್ಲೀಮರನ್ನು ಉದ್ದೇಶಿಸಿ ಮಾಡಿದ ವರ್ಚುವಲ್ ಭಾಷಣದ ಮಾರನೇ ದಿನವೇ ಈ ಸ್ಪೋಟ ಸಂಭವಿಸಿದೆ. ಈ ಸ್ಟೋಟದ ಹಿಂದೆ ಜಮತ್-ಇ-ಇಸ್ಲಾಮಿ ಸಂಘಟನೆಯ ಕೈವಾಡವಿದೆ. ಎಂದು ಹಲವಾರು ಜನ  ತಮ್ಮ ಪೋಸ್ಟ್‌ನಲ್ಲಿ ಬರೆದು ಹಂಚಿಕೊಳ್ಳುತ್ತಿದ್ದಾರೆ.

ಕನ್ನಡದ ಪವರ್ ಟಿವಿ ಸಹ ಅಪರಿಚಿತ ಮುಸ್ಲಿಂ ಯುವಕನ ಪೋಟೋವೊಂದನ್ನು ಹಾಕಿ ಪೋಲೀಸರಿಗೆ ಶರಣಾದ ಉಗ್ರ ಎಂದು ಹಂಚಿಕೊಂಡಿದ್ದರು. ನಂತರ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಆ ಫೋಟೋವನ್ನು ಡಿಲಿಟ್ ಮಾಡಿದ್ದಾರೆ. ಇನ್ನೂ ಅನೇಕ ಬಲಪಂಥಿಯರು ಇದು ಹಮಾಸ್ ಉಗ್ರರದೇ ಕೈವಾಡ, ಈ ಸ್ಪೋಟದ ರುವಾರಿ ಮುಸ್ಲಿಂ ಇರಬಹುದು ಎಂದು ಬರೆದು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್: ಅಕ್ಟೋಬರ್ 29, 2023ರಂದು ಕೇರಳದ ಎರ್ನಾಕುಲಂನ ಕಲಮಶ್ಶೇರಿಯಲ್ಲಿ‌ ಸಂಭವಿಸಿದ ಬಾಂಬ್ ಸ್ಪೋಟದ ರುವಾರಿ ತಾನೇ ಎಂದು ಡೊಮಿನಿಕ್ ಮಾರ್ಟಿನ್ ಎಂಬಾತ ಹೀಗಾಗಲೇ ಪೋಲಿಸರಿಗೆ ಶರಣಾಗಿದ್ದಾನೆ. ಧಾರ್ಮಿಕ ಭಿನ್ನಾಭಿಪ್ರಾಯದಿಂದ ಈ ಸ್ಪೋಟವನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸ್ಟೋಟಕ್ಕೂ ಮೊದಲು ಪೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಮಾರ್ಟಿನ್ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಕೇರಳ ಪೋಲೀಸರು ಸಹ ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಆದರೆ ಈವರೆಗೆ ಎಲ್ಲಿಯೂ ಮುಸ್ಲಿಮರ ಕೈವಾಡ ಇರುವುದು ಸಾಬೀತಾಗಿಲ್ಲ.


ಇದನ್ನು ಓದಿ: ಹಿಂದುತ್ವ ‘ಚುನಾವಣಾ ಆಟ ಆಡುವ ಕಾರ್ಡ್’ ಎಂದು ನರೇಂದ್ರ ಮೋದಿಯವರು ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *