ದಸರಾ ಹಿನ್ನೆಲೆಯಲ್ಲಿ ತಡೆರಹಿತ ಬಸ್‌ಗಳಲ್ಲಿ ಏರಿಕೆಯಾಗಿದ್ದ 15 ರೂ ಟಿಕೆಟ್ ದರ ಮತ್ತೆ ಇಳಿಸಲಾಗಿದೆ

ದಸರಾ

ಮೈಸೂರು – ಬೆಂಗಳೂರು ನಡುವೆ 160/- ರೂ ಇದ್ದ ಬಸ್ ಟಿಕೆಟ್‌ ದರ 185/- ರೂ ಮಾಡಿ ಇನ್ನೂ ಎರಡುವರೆ ತಿಂಗಳು ಕಳೆದಿಲ್ಲ ಆಗಲೇ 200/- ರೂಪಾಯಿಗೆ ಏರಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ. ಒಬ್ಬರಿಂದ ವಸೂಲಿ ಮಾಡಿ ಮತ್ತೊದಸರಾ ಹಿನ್ನೆಲೆಯಲ್ಲಿ ತಡೆರಹಿತ ಬಸ್‌ಗಳಲ್ಲಿ ಏರಿಕೆಯಾಗಿದ್ದ 15 ರೂ ಟಿಕೆಟ್ ದರ ಮತ್ತೆ ಇಳಿಸಲಾಗಿದೆ ಬ್ಬರಿಗೆ ಕೊಟ್ಟು ಬಿಟ್ಟಿ ಪ್ರಚಾರ ತೆಗೆದುಕೊಳ್ಳೋದು ಅಂದರೆ ಇದೇ ನೋಡಿ ಬಸ್ ಟಿಕೆಟ್‌ಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಕುರಿತು ಸ್ಪಷ್ಟೀಕರಣ ಪಡೆಯಲು KSRTC ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು, “ಮೈಸೂರು- ಬೆಂಗಳೂರು ನಡುವಿನ ನಾನ್ ಸ್ಟಾಪ್‌ ಬಸ್‌ಗಳ ಪ್ರಯಾಣ ದರವನ್ನು ಕೇವಲ ದಸರಾ ಹಿನ್ನಲೆಯಲ್ಲಿ ಮಾತ್ರ 15 ರೂ ಹೆಚ್ಚಳ ಮಾಡಲಾಗಿದ್ದು, ಅಕ್ಟೋಬರ್ 31ರ ನಂತರ ಮೊದಲಿನ ದರ ಮುಂದುವರಿಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದೇವೆ” ಎಂದರು.

ದಸರಾ ಸಂದರ್ಭದಲ್ಲಿ 10 ದಿನಗಳ ಅವಧಿಗೆ ಮಾತ್ರ ಬೆಂಗಳೂರು – ಮೈಸೂರು ನಡುವಿನ ತಡೆರಹಿತ ಬಸ್‌ಗಳಿಗೆ ನಿಯಮಾವಳಿಗಳನ್ವಯ ಶೇ.20 ರಷ್ಟು ಪ್ರಯಾಣ ದರ ಹೆಚ್ಚಿಸಲಾಗುತ್ತದೆ. ಕಳೆದ 4 ದಶಕಗಳಿಂದಲೂ ಇದು ಚಾಲ್ತಿಯಲ್ಲಿದೆ. ನವೆಂಬರ್ 1 ರಿಂದ ಕೇವಲ 185 ರೂ ಟಿಕೆಟ್ ಇರಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಕೂಡ ವರದಿ ಮಾಡಿದೆ.

ಇನ್ನು ಈ ಹಿಂದೆ 160 ರಿಂದ 185 ರೂಗಳಿಗೆ ಬಸ್ ದರ ಏರಿಸಿದ್ದು ಹೊಸದಾಗಿ ಆರಂಭವಾದ ಟೋಲ್ ಕಾರಣಕ್ಕಾಗಿ. ತಡೆರಹಿತ ಬಸ್‌ಗಳು ಏಕಮಾರ್ಗದಲ್ಲಿಯೇ 1090 ಟೋಲ್ ಕಟ್ಟಬೇಕಿರುವುದರಿಂದ ಪ್ರಯಾಣಿಕರ ಟಿಕೆಟ್ ದರ ಏರಿಸಲಾಗಿದೆ. ಎಕ್ಸ್‌ಪ್ರೆಸ್‌ ವೇ ಹೊರತುಪಡಿಸಿ ರಾಮನಗರ, ಚನ್ನಪಟ್ಟಣ, ಮಂಡ್ಯ ಹಳೆಯ ರಸ್ತೆಯಲ್ಲಿ ಸಂಚರಿಸುವ ಬಸ್‌ಗಳ ದರ ಏರಿಕೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ; ಈ ರಸ್ತೆಯ ಫೋಟೋ ಕರ್ನಾಟಕದ್ದಲ್ಲ, ಬದಲಿಗೆ ಬಲ್ಗೇರಿಯಾ ದೇಶದ್ದು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *