ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಈ ಹಿಂದೆ ಮಾತನಾಡಿದ ವಿಡಿಯೋ ತುಣುಕೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕ್ಲಿಪ್‌ನಲ್ಲಿ, ಇರಾನಿ ಸಂಸತ್ತಿನಲ್ಲಿ ಮಾತನಾಡುತ್ತಾ ದುರ್ಗಾ ಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ 2016 ರಲ್ಲಿ ಸ್ಮೃತಿ ಇರಾನಿಯವರ ಸಂಸದೀಯ ಭಾಷಣದ ಮೂಲ ವೀಡಿಯೊಗೆ ಇದಾಗಿದೆ ಎಂದು ತಿಳಿದು ಬಂದಿದೆ, ಇದು ಭಾರತೀಯ ಜನತಾ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ “ಶ್ರೀಮತಿ. ಸ್ಮೃತಿ ಇರಾನಿ ಅವರು JNU ಮತ್ತು ರೋಹಿತ್ ವೇಮುಲಾ ವಿಷಯಗಳ ಚರ್ಚೆಗೆ ಉತ್ತರವಾಗಿ ಭಾಷಣ ಮಾಡಿದ್ದಾರೆ – 24.02.2016″. ಎಂಬ ಶೀರ್ಷಿಕೆಯ ಅಡಿಯಲ್ಲಿ ವಿಡಿಯೋವನ್ನು ಪ್ರಸಾರ ಮಾಡಲಾಗಿದೆ.
ಆದರೆ ಇದನ್ನು ಪರಿಶೀಲನೆ ನಡೆಸದೆ ಸಾಕಷ್ಟು ಮಂದಿ ಸ್ಮೃತಿ ಇರಾನಿ ಸಂಸತ್ತಿನಲ್ಲಿ ದುರ್ಗಾ ಮಾತೆಗೆ ಅವಮಾನಿಸಿದ್ದಾಸಿದ್ದಾರೆ ಎಂದು ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ. ಹೀಗಾಗಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ವಿಡಿಯೋವನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿದಾಗ ವಿಡಿಯೋದ 31:50 ನಿಮಿಷದಲ್ಲಿ ಸ್ಮೃತಿ ಇರಾನಿ ಅವರ ಮಾತನಾಡಿದ ತುಣುಕು ಸಿಕ್ಕಿದೆ.
ಮೂಲ ಭಾಷಣದಲ್ಲಿ 31:20 ರಿಂದ ಸ್ಮೃತಿ ಇರಾನಿ ಅವರು ದುರ್ಗ ಮಾತೆಯನ್ನು ಟೀಕಿಸಿದ್ದಾರೆ ಎನ್ನಲಾಗಿದೆ. ಆದರೆ ಈ ವಿಡಿಯೋದಲ್ಲಿ 2014 ರಲ್ಲಿ ಜೆಎನ್‌ಯುನ ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಬಿಡುಗಡೆ ಮಾಡಿದ್ದಾರೆ ಎನ್ನಲಾದ ಹೇಳಿಕೆಯ ಕುರಿತು ಇರಾನಿ ಗಟ್ಟಿಯಾಗಿ ಓದಿದ್ದಾರೆ. ಇದನ್ನೆ ಬಳಸಿಕೊಂಡಿರುವ ಕೆಲವರು ಸ್ಮೃತಿ ಇರಾನಿ ಅವರು ದುರ್ಗಾ ಮಾತೆಗೆ ನಿಂದಿಸಿದ್ದಾರೆ ಎಂದು ಸುದಿಯನ್ನು ಹರಿ ಬಿಟಿದ್ದಾರೆ.
ಹೀಗಾಗಿ ಸ್ಮೃತಿ ಇರಾನಿ ಅವರು ದುರ್ಗಾ ಮಾತೆಯನ್ನು ನಿಂದಿಸಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದ್ದು ತಪ್ಪು ಆಪಾದನೆಯಾಗಿದೆ.