2021ರ UPSC ಪರೀಕ್ಷೆಯ ಟಾಪರ್ ಶ್ರುತಿ ಶರ್ಮಾ ಸುರೇಶ್ ಚವ್ಹಾಣ್ ಅವರ ಪುತ್ರಿಯಲ್ಲ

ಸುದರ್ಶನ್ ಚಾನೆಲ್‌ನ ಮುಖ್ಯ ಸಂಪಾದಕರಾದ ಸುರೇಶ್ ಚವ್ಹಾಣಕೆ ಅವರ ಮಗಳು ಶೃತಿ ಶರ್ಮ UPSC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಾರೆ. ಸುರೇಶ್ ಚವ್ಹಾಣಕೆಯವರು ಹಿಂದೂ-ಮುಸ್ಲೀಮರ ನಡುವೆ ದ್ವೇಷಭಾಷಣ ಮಾಡುತ್ತಾರೆ. ಆದರೆ ಅವರೇ ತಮ್ಮ ಮಗಳು ಅತಿ ಹೆಚ್ಚು ಅಂಕಗಳಿಸಲಿ ಎಂದು ಮುಸ್ಲಿಂ ವಿಶ್ವವಿದ್ಯಾಲಯವಾದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಓದಿಸಿದ್ದಾರೆ ಎಂದು ಆರೋಪಿಸಿದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ಪೋಟೋದಲ್ಲಿರುವ ಹುಡುಗಿ ಶೃತಿ ಶರ್ಮಾ 2021ರ UPSC ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಅವರ ತಂದೆ ಸುನಿಲ್ ದತ್ ಶರ್ಮಾ ವಾಸ್ತುಶಿಲ್ಪಿಯಾಗಿದ್ದಾರೆ. ಶ್ರುತಿ ಶರ್ಮಾ ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ಜಾಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆನ್ಷಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಿದ್ದರು. ಆದ್ದರಿಂದ ಶ್ರುತಿ ಶರ್ಮಾ ಸುರೇಶ್ ಚವ್ಹಾಣ್ ಅವರ ಪುತ್ರಿಯಲ್ಲ.


ಇದನ್ನು ಓದಿ: ಕೇರಳದಲ್ಲಿ ನಡೆದ ಬಾಂಬ್ ಸ್ಪೋಟದ ಹಿಂದೆ ಮುಸ್ಲಿಮರ ಕೈವಾಡವಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *